ಟಿವಿ9 ಕನ್ನಡ
18 ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ಕನ್ನಡಿಗರ ಮನೆಮಾತಾಗಿರುವ ಅತ್ಯಂತ ವಿಶ್ವಾಸಾರ್ಹ ನ್ಯೂಸ್ ಚಾನಲ್ ಟಿವಿ9 ಕನ್ನಡಕ್ಕೆ ರಾಷ್ಟ್ರೀಯ ಪ್ರಶಸ್ತಿಗಳ ಗೌರವ ಸಿಕ್ಕಿದೆ. ಬರೋಬ್ಬರಿ 10 ವಿಭಾಗಗಳಲ್ಲಿ ಟಿವಿ9 ಕನ್ನಡ ಚಾನಲ್ ನ್ಯಾಷಿನಲ್ ಟೆಲಿವಿಷನ್ ಅವಾರ್ಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ದೆಹಲಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಟಿವಿ9 ಕನ್ನಡಕ್ಕೆ 10 ವಿಭಾಗಗಳಲ್ಲಿ ಪ್ರಶಸ್ತಿ
- ಡೈಲಿ ನ್ಯೂಸ್ ಬುಲೆಟಿನ್ ವಿಭಾಗದಲ್ಲಿ – ಸಿದ್ದು ಲೆಕ್ಕ ಎಂಬ ಶೀರ್ಷಿಕೆಯಲ್ಲಿ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪ್ರಸಾರ ಮತ್ತು ವಿಶ್ಲೇಷಣೆಗಾಗಿ ಪ್ರಶಸ್ತಿ
- ಪ್ರಚಲಿತ ವಿದ್ಯಾಮಾನಗಳ ವಿಭಾಗದಲ್ಲಿ – ಪ್ರತಿದಿನ ಸಂಜೆ ಏಳು ಗಂಟೆಗೆ ಪ್ರಸಾರವಾಗುವ ರಾಜಕಾರಣದ ಒಳಸುಳಿಗಳನ್ನು ಬಿತ್ತರಿಸುವ ಕಾರ್ಯಕ್ರಮ ‘ಇನ್ ಸೈಡ್’ ಸುದ್ದಿ ಕಾರ್ಯಕ್ರಮಕ್ಕೆ ಪ್ರಶಸ್ತಿ ಗರಿ.
- ಸಾಮಾಜಿಕ/ಪರಿಸರ ಜಾಗೃತಿ/ಸಾಮಾಜಿಕ ಅಭಿವೃದ್ಧಿ ಅಭಿಯಾನ ವಿಭಾಗದಲ್ಲಿ – ಮಂಡ್ಯದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣವನ್ನು ಬಯಲಿಗೆಳೆದು ನಿರಂತರ ವರದಿ ಮಾಡಲಾಗಿತ್ತು, ರಾಷ್ಟ್ರಮಟ್ಟದಲ್ಲಿ ಈ ವರದಿ ಚರ್ಚೆಯಾಗಿತ್ತು.
- ಅತ್ಯುತ್ತಮ ಪ್ರೈಮ್ ಟೈಮ್ ನ್ಯೂಸ್ ಶೋ ಕನ್ನಡ ವಿಭಾಗದಲ್ಲಿ ರಾತ್ರಿ 9 ಗಂಟೆಯ ನಿಮ್ಮ ನ್ಯೂಸ್ ರೂಂ ಶೋಗೆ ಪ್ರಶಸ್ತಿ ದೊರಕಿದೆ.
- ಅತ್ಯುತ್ತಮ ನಿರೂಪಕರ ವಿಭಾಗದಲ್ಲಿ – ಟಿವಿ9 ರಂಗನಾಥ್ ಭಾರಧ್ವಾಜ್
- ಉತ್ತಮ ರಿಪೋರ್ಟರ್ ವಿಭಾಗದಲ್ಲಿ ಟವಿನೈನ್ ಕ್ರೈಂ ವಿಭಾಗ ಮುಖ್ಯಸ್ಥರಾಗಿರುವ ಹೆಚ್.ವಿ ಕಿರಣ್
- ಪ್ರೈಂ ಟೈಂ ನ್ಯೂಸ್ನಲ್ಲಿ ಅತ್ಯುತ್ತಮ ನ್ಯೂಸ್ ಆಂಕರ್ ವಿಭಾಗದಲ್ಲಿ ಮಾಲತೇಶ್ ಜಾನಗಲ್ ಅವರಿಗೆ ಎನ್ಟಿ ಅರ್ವಾರ್ಡ್ಗೆ ಭಾಜನರಾಗಿದ್ದಾರೆ.
- ನ್ಯೂಸ್ ಚಾನೆಲ್ ಗ್ರಾಫಿಕ್ಸ್ ಅತ್ಯುತ್ತಮ ಬಳಕೆ ವಿಭಾಗದಲ್ಲಿ – ನಿಮ್ಮ ತೀರ್ಪು ನಮ್ಮ ಜೊತೆ ಕಾರ್ಯಕ್ರಮಕ್ಕೆ ಅತ್ಯುತ್ತಮ ಗ್ರಾಫಿಕ್ಸ್ ಗಾಗಿ ಪ್ರಶಸ್ತಿಯ ಗರಿ
- ಕನ್ನಡದ ಅತ್ಯುತ್ತಮ ತನಿಖೆ ವಿಭಾಗದಲ್ಲಿ – KIABD ಪರಿಹಾರ ಹಗರಣ ಪ್ರಸಾರ ಮಾಡಿ ಸರಕಾರದ ಗಮನ ಸೆಳೆದ ಪರಿಣಾಮ ಟಿವಿನೈನ್ ಮೂರ್ತಿಯವರಿಗೆ ಎನ್ ಟಿ ಅವಾರ್ಡ್ ಗೆ ಲಭಿಸಿದೆ.
- ಅತ್ಯುತ್ತಮ ತನಿಖಾ ಸ್ಟೋರಿ ವಿಭಾಗದಲ್ಲಿ – ಬೆಸ್ಕಾಂ ಮೃತ್ಯು ಕೂಪ ಎಂಬ ಸುದ್ದಿ ಪ್ರಸಾರ ಮಾಡಿದ್ದ ಟಿವಿನೈನ್ ಬೆಸ್ಕಾಂ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗುವಿನ ಸಾವು ನಪ್ಪಿದ್ದ ಕಾರ್ಯಕ್ರಮದಿಂದ ಸರಕಾರ ಕಣ್ಣುತೆರೆಸುವ ಕೆಲಸ ಮಾಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ