ಕೋವಿಡ್ ಸಮಯದಲ್ಲಿ ನಾವು 8-10 ತಾಸು ಕೆಲಸ ಮಾಡಿದರೆ ಸಿದ್ದರಾಮಯ್ಯ ಮನೇಲಿ ಕೂತಿದ್ದರು: ಆರ್ ಅಶೋಕ
ಅಡಳಿತ ನಡೆಸುವ ಸರ್ಕಾರ ಎಫ್ಐಆರ್ ಗಳನ್ನು ದಾಖಲಿಸಿದಾಗ ವಿರೋಧಪಕ್ಷವಾಗಿರುವ ತಾವು ಬೆದರಿ ಬಗ್ಗಿದರೆ ಅವರಿಗೆ ತಾವಾಡಿದ್ದೇ ಆಟವಾಗುತ್ತದೆ, ಲಕ್ಷಾಂತರ ಎಕರೆ ಜಮೀನು ಕಬಳಿಸುವ ಪ್ರಯತ್ನದಲ್ಲಿರುವ ವಕ್ಫ್ ಮಂಡಳಿ ತಾವು ನಡೆಸುತ್ತಿರುವ ಹೋರಾಟವನ್ನು ಹೀಗೆ ನಿಲ್ಲಿಸಬಹದೆಂದು ಸರ್ಕಾರ ಭಾವಿಸಿದ್ದರೆ ಅದು ಭ್ರಮೆಯಲ್ಲಿದೆ, ಬಿಜೆಪಿಯ ಹೋರಾಟ ಯಾವ ಕಾರಣಕ್ಕೂ ನಿಲ್ಲದು ಎಂದು ಅಶೋಕ ಹೇಳಿದರು.
ಬೆಂಗಳೂರು: ಮುಡಾ ಪ್ರಕರಣ ಮತ್ತು ವಾಲ್ಮೀಕ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ಪ್ರಕರಣಗಳನ್ನು ಬಿಜೆಪಿ ಒಂದು ತಾರ್ಕಿಕ ಅಂತ್ಯ ಕಾಣಿಸುವೆಡೆ ಸಾಗುತ್ತಿರುವ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೋವಿಡ್ ಪ್ರಕರಣದಲ್ಲಿ ಒಂದು ಎಫ್ಐಅರ್ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದೆ, ಕೋವಿಡ್ ಹಾವಳಿ ಕೊನೆಗೊಂಡು 4 ವರ್ಷ ಕಳೆದಿವೆ, ಇಷ್ಟು ದಿನ ಕಾಂಗ್ರೆಸ್ ನಾಯಕರು ಕಳ್ಳೇಕಾಯಿ ತಿಂದಿದ್ರಾ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಪ್ರಶ್ನಿಸಿದರು. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರಕ್ಕೆ ಜನರ ಜೀವ ಉಳಿಸುವುದು ಮುಖ್ಯವಾಗಿತ್ತು, ತಾವೆಲ್ಲ ದಿನಕ್ಕೆ 8-10 ಕೆಲಸ ಮಾಡಿದ್ದೇವೆ ಆದರೆ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಮೂರು ತಿಂಗಳವರೆಗೆ ಮನೆಯಿಂದ ಹೊರಬಂದಿರಲಿಲ್ಲ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Assembly Session; ಎರಡು ಲಕ್ಷ ಜನ ಬಂದಾಗಲೂ ಬಿಜೆಪಿ ಸರ್ಕಾರ ಹಿಂಸೆಗೆ ಆಸ್ಪದ ನೀಡಿರಲಿಲ್ಲ: ಆರ್ ಅಶೋಕ
Latest Videos