ಹೋರಾಟವನ್ನು ಅಸಂವೈಧಾನಿಕ ಅಂತ ಹೇಳಿ ಸಮುದಾಯದ ಬಗ್ಗೆ ಸಿಎಂ ನಿಷ್ಕಾಳಜಿ ಪ್ರದರ್ಶಿಸಿದ್ದಾರೆ: ಸ್ವಾಮೀಜಿ

ಹೋರಾಟವನ್ನು ಅಸಂವೈಧಾನಿಕ ಅಂತ ಹೇಳಿ ಸಮುದಾಯದ ಬಗ್ಗೆ ಸಿಎಂ ನಿಷ್ಕಾಳಜಿ ಪ್ರದರ್ಶಿಸಿದ್ದಾರೆ: ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2024 | 4:12 PM

ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ಮೂಲಕ ಒತ್ತಡ ಹೇರಿ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದರು, ತಮ್ಮ ಹೋರಾಟ ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಅಂತಾದರೆ, ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ರಾಜು ಕಾಗೆ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮೊದಲಾದವರನ್ನು ಸಿಎಂ ಸಸ್ಪೆಂಡ್ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.

ಬೆಳಗಾವಿ: ಪ್ರತಿಭಟನೆನಿರತ ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಾತಾಡುವಾಗ ಪಂಚಮಸಾಲಿಗಳ ಮೀಸಲಾತಿ ಹೋರಾಟವನ್ನು ಸಂವಿಧಾನಬಾಹಿರ ಅಂತ ಹೇಳಿದ್ದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಸಮುದಾಯದವರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ನಗರದಲ್ಲಿಂದು ಮಾಧ್ಯಮಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಸ್ವಾಮೀಜಿ, ನಮ್ಮ ಹೋರಾಟವನ್ನು ಅಸಂವೈಧಾನಿಕ ಎಂದು ಹೇಳುವ ಮೂಲಕ ಸಮುದಾಯದ ಬಗ್ಗೆ ತನಗೆ ಯಾವುದೇ ಕಾಳಜಿ ಇಲ್ಲವೆನ್ನುವುದನ್ನು ಸಿದ್ದರಾಮಯ್ಯ ನಿರೂಪಿಸಿದ್ದಾರೆ, ಅವರು ಹೇಳಿರುವುದು ಬಸವಣ್ಣನ ಎಲ್ಲ ಅನುಯಾಯಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಸ್ವಾಮೀಜಿ ಕಿಡಿ ಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ಕಾರದ ಯಾವುದೇ ಬೆದರಿಕೆಗೆ ಮಣಿಯಲ್ಲ, ಹೋರಾಟ ಮುಂದುವರಿಯುತ್ತದೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ