ಪಂಚಮಸಾಲಿ ಮೀಸಲಾತಿಗೆ ಕಾನೂನಲ್ಲಿ ಅವಕಾಶವಿಲ್ಲ, ಬಿಜೆಪಿ ಸರ್ಕಾರವೇ ಅಫಿಡವಿಟ್​ಗಳನ್ನು ಸಲ್ಲಿಸಿದೆ: ಪ್ರಸಾದ್ ಅಬ್ಬಯ್ಯ

ಪಂಚಮಸಾಲಿ ಮೀಸಲಾತಿಗೆ ಕಾನೂನಲ್ಲಿ ಅವಕಾಶವಿಲ್ಲ, ಬಿಜೆಪಿ ಸರ್ಕಾರವೇ ಅಫಿಡವಿಟ್​ಗಳನ್ನು ಸಲ್ಲಿಸಿದೆ: ಪ್ರಸಾದ್ ಅಬ್ಬಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2024 | 5:38 PM

ಒಂದು ದೇಶ ಒಂದು ಚುನಾವಣೆ ವಿಧೇಯಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್ ಅಬ್ಬಯ್ಯ, ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು, ಕೇಂದ್ರ ಸರ್ಕಾರ ಮಸೂದೆಯನ್ನು ಪಾಸು ಮಾಡಿಸುವ ಹಠ ತೊಟ್ಟಂತಿದೆ, ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಿದೆ, ಮಸೂದೆ ಜಾರಿಗೆ ಹಲವು ತಾಂತ್ರಿಕ ಸಮಸ್ಯೆಗಳಿವೆ, ಕೇಂದ್ರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು.

ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಮತ್ತು ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಅಚ್ಚರಿಯ ಮಾತನ್ನಾಡಿದರು. ಮೀಸಲಾತಿ ಕೇಳುವುದು ಕಾನೂನುಬಾಹಿರ ಯಾಕೆಂದರೆ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಅದರ ಪ್ರತಿನಿಧಿಗಳೇ ಸುಪ್ರೀಮ್ ಕೋರ್ಟ್ ಗೆ ಅಫಿಡವಿಟ್ ಒಂದನ್ನು ಸಲ್ಲಿಸಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಹೇಳಿದ್ದರು, ಈಗ ಸುಮ್ಮನೆ ತೋರಿಕೆಗೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಳಗಾವಿ ಅಧಿವೇಶನ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ