ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 22-01-2021
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
LIVE NEWS & UPDATES
-
2 ಬಾರಿ ಖಾತೆ ಬದಲಿಸಿದ್ರೂ ಸಮಾಧಾನಗೊಳ್ಳದ ಆರ್.ಶಂಕರ್
ಎರಡು ಬಾರಿ ಖಾತೆ ಬದಲಾವಣೆ ಮಾಡಿದರೂ ಸಚಿವ ಶಂಕರ್ ಸಮಾಧಾನಗೊಳ್ಳದ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಸಿಎಂ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ.
-
ಅಗ್ನಿ ಅವಘಡ: ಲಸಿಕೆ ಸಂಶೋಧನೆಗೆ ಹೊಡೆತ
ಸೆರಮ್ ಇನ್ಸ್ಟಿಟ್ಯೂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾರಣ BCG, ರೋಟಾವೈರಸ್ ಲಸಿಕೆ ಸಂಶೋಧನೆಗೆ ಹೊಡೆತ ಬಿದ್ದಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ನ ಅಧಿಕಾರಿಗಳಿಂದ ಮಾಹಿತಿ ಬಂದಿದೆ.
-
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆ
ಹಾವೇರಿಯಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆಯಾಗಿದ್ದು, ಅಧ್ಯಕ್ಷರ ಆಯ್ಕೆ ಬಗ್ಗೆ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಮಾಹಿತಿ ನೀಡಿದ್ದಾರೆ.
ಕುರುಬ ಸಮುದಾಯಕ್ಕೆ ST ಮೀಸಲಾತಿಗಾಗಿ ಪಾದಯಾತ್ರೆ
ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಶ್ರೀ ನೇತೃತ್ವದಲ್ಲಿ ಪಾದಯಾತ್ರೆ ಕಾಗಿನೆಲೆಯಿಂದ ಬೆಂಗಳೂರಿಗೆ ತೆರಳುತ್ತಿದೆ.
ವಿಶ್ವದಲ್ಲೆ ಪ್ರಧಾನಿ ನರೇಂದ್ರ ಮೋದಿ ನಂಬರ್ 1 ನಾಯಕ: ಬಚ್ಚೇಗೌಡ
ಇಷ್ಟು ಬೇಗ ಕೊರೊನಾ ಲಸಿಕೆ ಬರುವುದಕ್ಕೂ ಮೋದಿಯ ಆಡಳಿತ ನೀತಿಯೆ ಕಾರಣ. ವಿಶ್ವದಲ್ಲೆ ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್ ನಾಯಕ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ 11ನೇ ಸುತ್ತಿನ ಸಭೆ ಅಪೂರ್ಣ
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧದ ಅಹೋರಾತ್ರಿ ಹೋರಾಟದ ಬಗ್ಗೆ ರೈತ ಮತ್ತು ಕೇಂದ್ರ ಸರ್ಕಾರ ನಡುವೆ ನಡೆದ 11ನೇ ಸುತ್ತಿನ ಸಭೆ ಅಪೂರ್ಣವಾಗಿದೆ.
ನವಜಾತ ಶಿಶುಗಳನ್ನು ಕದಿಯುತ್ತಿದ್ದ ಮಹಿಳೆಯ ರೇಖಾಚಿತ್ರ ಬಿಡುಗಡೆ
ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಆಗ ತಾನೇ ಹುಟ್ಟಿದ ಮಕ್ಕಳನ್ನು ಕದಿಯುತ್ತಿದ್ದ ಮಹಿಳೆಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ: ಕೇಂದ್ರ ಪಶುಸಂಗೋಪನ ಇಲಾಖೆ
ದೇಶದಲ್ಲಿ ಈವರೆಗೆ ಹನ್ನೆರಡು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ಪಶುಸಂಗೋಪನ ಇಲಾಖೆ ಸ್ಪಷ್ಟಪಡಿಸಿದೆ.
ನಟಿ ರಾಗಿಣಿ ನಾಳೆ ಜೈಲಿನಿಂದ ಬಿಡುಗಡೆ ಬಹುತೇಕ ಖಚಿತ
ಸುಪ್ರೀಂ ಕೋರ್ಟ್ ಆದೇಶದ ಪ್ರತಿ ವಕೀಲರ ಕೈ ತಲುಪಿದ್ದು, ನಾಳೆ ನಟಿ ರಾಗಿಣಿಗೆ ಜೈಲಿನಿಂದ ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ.
ಜೆಡಿಎಸ್ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸ್ತೇವೆ: ನಿಖಿಲ್ ಕುಮಾರಸ್ವಾಮಿ
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸ್ತೇವೆ ಎಂದು ಹೇಳಿದರು.
ಯಾವುದೇ ರೀತಿಯ ಸಂಘರ್ಷವಾಗಿಲ್ಲ: ಮನೋಹರ್
ನಾರಾಯಣ ಸ್ವಾಮಿ ಮೇಲೆ ಹಲ್ಲೆ ಮಾಡಲು ನನಗೂ ಅವರಿಗೂ ಏನು ಸಂಬಂಧ. ಕಾರ್ಯಾಧ್ಯಕ್ಷರು ಬರುತ್ತಾರೆ ಅಂತಾ ಜನ ಸೇರಿದ್ದೆವು. ಗ್ರಾಮ ಪಂಚಾಯ್ತಿ ಸದಸ್ಯರ ಸನ್ಮಾನಕ್ಕೆ ಜನ ಸೇರಿಸಿದ್ದರು. ಈ ರೀತಿ ಎರಡು ಕಾರ್ಯಕ್ರಮ ಮಾಡುವಾಗ ಒಂದು ಗಂಟೆ ಮೊದಲು ಹೇಳಿ ಅಂತಾ ಹೇಳಿದ್ದೆ. ಇಂತಹ ಕಾರ್ಯಕ್ರಮ ಮಾಡುವಾಗ ಜನರ ಹೆಚ್ಚಾಗಿ ಘರ್ಷಣೆ ಆಗುತ್ತೆ ಅಂದೆ ಅಷ್ಟೇ. ನಾನು ಅವರ ಮೇಲೆ ಹಲ್ಲೇ ಮಾಡಿಲ್ಲ. ನನಗೆ ಅವರಿಗೆ ಯಾವುದೇ ರೀತಿಯ ಸಂಘರ್ಷ ಇಲ್ಲ ಎಂದು ಮನೋಹರ್ ತಿಳಿಸಿದರು.
ಧ್ವಜಾರೋಹಣಕ್ಕೆ ಸಚಿವರಿಗೆ ಜಿಲ್ಲೆಗಳ ಹಂಚಿಕೆ
ಜನವರಿ 26ರ ಗಣರಾಜ್ಯೋತ್ಸವದಂದು ಧ್ವಜಾರೋಹಣಕ್ಕೆ ಸಚಿವರಿಗೆ ಜಿಲ್ಲೆಗಳ ಹಂಚಿಕೆ ಮಾಡಿ ನೇಮಕ ಮಾಡಲಾಗಿದೆ.
ಕೊರೊನಾ ಲಸಿಕೆ: ಲೇಖನ ಪ್ರಕಟ
ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಂಪೂರ್ಣ ಸುರಕ್ಷಿತ ಎಂದು ಲಸಿಕೆ ಬಗ್ಗೆ ಲೇಖನ ಪ್ರಕಟವಾಗಿದೆ.
ಮೃತರ ಪೈಕಿ ಮತ್ತಿಬ್ಬರ ಗುರುತು ಪತ್ತೆ
ಸ್ಫೋಟದಲ್ಲಿ ಭದ್ರವತಿ ತಾಲೂಕಿನ ಅಂತರಗಂಗೆ ಗ್ರಾಮದ ಮಂಜುನಾಥ್ (40) ಮತ್ತು ಪ್ರವೀಣ್ (45) ಸಾವನ್ನಪ್ಪಿರುವುದು ಗುರುತುಗಳು ಪತ್ತೆಯಾಗಿವೆ.
ಗಣಿ ಪ್ರದೇಶದಿಂದ ವಾಪಸಾದ ಸಚಿವ ಮುರುಗೇಶ್ ನಿರಾಣಿ
ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿಯ ಗಣಿ ಪ್ರದೇಶವನ್ನು ಪರಿಶೀಲಿಸಿ ಗಣಿ ಸಚಿವ ಮುರುಗೇಶ್ ನಿರಾಣಿ ವಾಪಸ್ಸಾಗಿದ್ದಾರೆ.
ಸ್ಫೋಟ ದುರಂತ: ಸ್ಥಳಕ್ಕೆ ಭೇಟಿ ಬಳಿಕ ಸಚಿವ ನಿರಾಣಿ ಪ್ರತಿಕ್ರಿಯೆ
ಪ್ರಕರಣದಲ್ಲಿ ಯಾರೇ ಆರೋಪಿಗಳಿರಲಿ ತಕ್ಕ ಶಿಕ್ಷೆ ಕೊಡಿಸಲಾಗುವುದು. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಲಾಗುವುದು. ಸಿಎಂ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಾಗುತ್ತದೆ. ಸ್ಪೋಟಕ ರಾಜ್ಯಕ್ಕೆ ಹೇಗೆ ಬಂತು ಇದರ ಹಿಂದೆ ಯಾರಿದ್ದಾರೆ ಎಂಬ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರಗೇಶ್ ನಿರಾಣಿ ಹೇಳಿದರು.
ಯಾವುದೇ ಗಲಾಟೆಯಾಗಿಲ್ಲ: ಸಲೀಂ ಅಹ್ಮದ್
ರಾಮಲಿಂಗ ರೆಡ್ಡಿ ರವರಿಗೆ ಅಭಿನಂದನೆ ಸಲ್ಲಿಸಿ ಬಂದಿದ್ದೆವು. ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಆಗುತ್ತಿತ್ತು. ಬಿಜೆಪಿ ಪಂಚಾಯತಿ ಆಪರೇಷನ್ ಮಾಡುತ್ತೆ ಅನ್ನುವ ಚರ್ಚೆ ನಡಿತಿತ್ತು. ಸ್ವಲ್ಪ ಏರುಧ್ವನಿಯಲ್ಲಿ ಚರ್ಚೆಯಾಗಿದೆ. ಅದು ಬಿಟ್ಟು ಯಾರಮೇಲೆ ಹಲ್ಲೆಯಾಗಿಲ್ಲ. ಯಾರು ಕೈ ಕೈ ಮಿಲಾಯಿಸಿಲ್ಲ ಎಂದು ಘಟನೆ ಬಗ್ಗೆ ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಇನ್ನೂ 1347 ಎಕರೆ ಬೇಕಾಗಿದೆ: ರಮೇಶ್ ಜಾರಕಿಹೊಳಿ
ಎತ್ತಿನಹೊಳೆ ಯೋಜನೆಗೆ ಇನ್ನೂ 1347 ಎಕರೆ ಬೇಕಾಗಿದೆ ಮತ್ತು ಎತ್ತಿನಹೊಳೆ ಯೋಜನೆಗೆ 236 ಕೋಟಿ ಅನುದಾನ ಬೇಕಿದೆ. ಮುಂದಿನ ಜೂನ್ ವೇಳೆಗೆ ನೀರು ಹರಿಸಲು ಯೋಜನೆ ಇದೆ. ಆದಷ್ಟು ಬೇಗನೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದು ಹಾಸನದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಡಿಶುಂ ಡಿಶುಂ
ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಯುವ ನಾಯಕ ಮನೋಹರ್ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ.
ವಿಧಾನ ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಕೆ
ವಿಧಾನ ಪರಿಷತ್ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಸದನ ಸಮಿತಿಯಿ ಮಧ್ಯಂತರ ವರದಿ ಸಲ್ಲಿಸಿದೆ.
ನೇಗಿಲು ಹಿಡಿದು ಉಳುಮೆ ಮಾಡಿದ ಸಿಎಂ ಯಡಿಯೂರಪ್ಪ
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ನೇಗಿಲು ಹಿಡಿದು ಉಳುಮೆ ಮಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉಪಸ್ಥಿತಿಯಿದ್ದರು.
ಐವರಲ್ಲಿ ಓರ್ವ ಆಂದ್ರ ಮೂಲದವರೆಂದು ಪತ್ತೆ
ಡೈನಾಮೈಟ್ ಸ್ಫೋಟ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಐವರಲ್ಲಿ ಒಬ್ಬರು ಆಂದ್ರದ ಪವನ್ ಎಂದು ಗುರುತುಗಳು ಪತ್ತೆಯಾಗಿವೆ.
ಸ್ಫೋಟ ದುರಂತ: ಸಚಿವ ಮುರುಗೇಶ್ ನಿರಾಣಿ ಆಗಮನ
ಶಿವಮೊಗ್ಗ ದುರಂತ ಸ್ಥಳಕ್ಕೆ ಸಚಿವ ಮುರುಗೇಶ್ ನಿರಾಣಿ ಆಗಮಿಸಿದ್ದಾರೆ. ಬೆಂಗಳೂರು ಬಾಂಬ್ ಸ್ವ್ಕಾಡ್ ಟೀಮ್ ಮತ್ತು ಪೊಲೀಸರ ತಂಡ ಪರಿಶೀಲನೆ ಮುಗಿಸಿ ಸ್ಪೋಟ ನಡೆದ ಸ್ಥಳದಿಂದ ಹೊರಟಿದ್ದಾರೆ.
ರಾಗಿಣಿ ಬಿಡುಗಡೆ ಸಾಧ್ಯತೆ
ಪರಪ್ಪನ ಅಗ್ರಹಾರದಿಂದ ಇಂದು ಸಂಜೆ 6 ಗಂಟೆಯ ನಂತರ ನಟಿ ರಾಗಿಣಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಯುವರಾಜ್ ಆಸ್ತಿ ಜಪ್ತಿಗೆ ಕೋರ್ಟ್‌ನಿಂದ ಮಧ್ಯಂತರ ಆದೇಶ
ವಂಚಕ ಯುವರಾಜ್ಗೆ ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡಲು ಬೆಂಗಳೂರಿನ ಸಿಸಿಹೆಚ್ 67ನೇ ಜಡ್ಜ್ ಕಾತ್ಯಾಯಿನಿ ಆದೇಶ ಹೊರಡಿಸಿದ್ದಾರೆ.
ಲಸಿಕೆಯಿಂದ ದೊಡ್ಡ ಸೈಡ್ ಎಫೆಕ್ಟ್ ಇಲ್ಲವೆಂದು ಸಾಬೀತು: ಮೋದಿ
ಕೊರೊನಾ ಅಸದೃಶ ಶತ್ರು. ವಿಜ್ಞಾನಿಗಳು ಆಧುನಿಕ ಋಷಿಗಳು ಎಂದು ಮಾತನಾಡಿ ದೇಶದ ಪ್ರಧಾನಿ ಲಸಿಕೆಯಿಂದ ದೊಡ್ಡ ತೊಂದರೆಯಾಗಿಲ್ಲ ಎಂದು ಸಾಬೀತಾಗಿದೆ ಎಂದರು.
ಸಚಿವರ ಖಾತೆ ಬದಲಾವಣೆ ಮಾಡಿ ಸಿಎಂ ಆದೇಶ
ಸಚಿವರ ಒತ್ತಾಯಕ್ಕೆ ಮಣಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆ ಬದಲಾವಣೆ ಆದೇಶ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಸಂಪುಟದ ಮತ್ತೊಂದು ವಿಕೆಟ್ ಪತನ
ಅರಣ್ಯ ಸಚಿವ ಸ್ಥಾನಕ್ಕೆ ರಾಜೀವ್ ಬ್ಯಾನರ್ಜಿ ಟಿಎಂಸಿ ಪಕ್ಷ ತೊರೆಯಲು ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕಾಲಿನ ಶಸ್ತ್ರ ಚಿಕಿತ್ಸೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಕಮಲ್ ಹಾಸನ್ ಇದೀಗ ಚೆನ್ನೈನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶೋಧ ಕಾರ್ಯ ಮುಗಿಸಿ ವಾಪಸ್
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಶೋಧ ಕಾರ್ಯ ಮುಗಿಸಿ ಬೆಂಗಳೂರು, ಮಂಗಳೂರಿನಿಂದ ಬಂದಿದ್ದ ತಜ್ಞರು ವಾಪಸಾಗಿದ್ದಾರೆ.
ಸ್ಫೋಟ ದುರಂತದಲ್ಲಿ ಸತ್ತಿರುವುದು ಐವರು ಮಾತ್ರ
ಕಲ್ಲು ಗಣಿ ದುರಂತ ಪ್ರದೇಶದಲ್ಲಿ ವಿಧಿವಿಜ್ಞಾನ ತಜ್ಞರ ತಂಡದ ಶೋಧ ಕಾರ್ಯ ಅಂತ್ಯ ಮುಖ್ಯವಾಗಿದ್ದು, ತನಿಖೆಗೆ ಬೇಕಿದ್ದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ.
ನಮ್ಮ ದೇಶದಲ್ಲಿ ಜನರಿಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಇದೆ: ಮೋದಿ
ಕೊರೊನಾ ಲಸಿಕೆ ಫಲಾನುಭವಿಗಳ ಜೊತೆಗೆ ಮೋದಿ ಸಂವಾದ ನಡೆಸುತ್ತಿದ್ದು, ನಮ್ಮ ದೇಶದಲ್ಲಿ ಜನರಿಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಲಸಿಕೆ ಫಲಾನುಭವಿಗಳು ಲಸಿಕೆ ಬಗೆಗಿನ ವದಂತಿ ಹೋಗಲಾಡಿ ಎಂದು ಪ್ರಧಾನಿ ಮೋದಿ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದರು.
ಸ್ಫೋಟ ದುರಂತ: ಮತ್ತೊಂದು ಮೃತದೇಹ ಪತ್ತೆ
ಸ್ಟೋಟದಲ್ಲಿ ಸಾವನ್ನಪ್ಪಿದ ಮತ್ತೋರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಒಟ್ಟು ಆರು ಮೃತದೇಹಗಳು ಪತ್ತೆಯಾಗಿದೆ.
ವಿಟಿಯು ಆನ್ಲೈನ್ ಪರೀಕ್ಷೆ ಅರ್ಜಿಗೆ ಹೈಕೋರ್ಟ್ ನಕಾರ
ಆನ್ಲೈನ್ನಲ್ಲಿ ಪರೀಕ್ಷೆ ನಡೆದರೆ ನಿಗಾವಹಿಸಲು ಸಾಧ್ಯವಿಲ್ಲ. ಪರೀಕ್ಷಾ ಅಕ್ರಮ ತಡೆಯಲು ಸಾಧ್ಯವಿಲ್ಲ. ಕೊವಿಡ್ ಹೆಚ್ಚಿದ್ದ ವೇಳೆಯೂ ಆನ್ಲೈನ್ ಪರೀಕ್ಷೆ ನಡೆದಿಲ್ಲ ಎಂದು ಕೊವಿಡ್ ಇದ್ದವರಿಗೆ ಪ್ರತ್ಯೇಕ ವ್ಯವಸ್ಥೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಜಿಲೆಟಿನ್ ಸ್ಫೋಟ: ಲಾರಿಗಳ ಗ್ಲಾಸ್‌ಗಳು ಪುಡಿ ಪುಡಿ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟದಲ್ಲಿ ಜೆಸಿಬಿ ಸೇರಿದಂತೆ ಸುಮಾರು 30 ರಿಂದ 40 ಲಾರಿಗಳ ಗ್ಲಾಸ್‌ಗಳು ಪುಡಿ ಪುಡಿಯಾಗಿವೆ.
ದುರಂತ ನಡೆದ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಒಟ್ಟು ಆರು ಜನ ಕಾರ್ಮಿಕರಲ್ಲಿ ಸದ್ಯ ಮೂರು ಮೃತದೇಹಗಳು ದೊರೆತಿವೆ. ಇನ್ನೂ ಮೂರು ಮೃತದೇಹವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ಉದ್ಭವ್ ಠಾಕ್ರೆ ಟ್ವೀಟ್ ಖಂಡಿಸಿ ಪ್ರತಿಭಟನೆ
ಬೆಳಗಾವಿ ಮಹಾರಾಷ್ಟ್ರದ್ದು ಎಂಬ ಉದ್ಭವ್ ಠಾಕ್ರೆ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ಚಾಮರಾಜನಗರದಲ್ಲಿ ಮಹಾರಾಷ್ಟ್ರ ಸಿಎಂ ವಿರುದ್ಧ ಘೋಷಣೆ ಕೂಗುತ್ತ, ದೊಣ್ಣೆ, ಚಪ್ಪಲಿ, ಪೊರಕೆ ಹಿಡಿದು ಪ್ರತಿಭಟನೆ ನಡೆಯುತ್ತಿದೆ.
ಕೂದಲೆಳೆಯಲ್ಲಿ ಕಂದಮ್ಮಗಳು ಪಾರು
ಅಕ್ರಮ ಗಣಿಗಾರಿಕೆ ಸ್ಪೋಟ ವೇಳೆಗೆ ತೊಟ್ಟಿಲಿನಲ್ಲಿ ಮಲಗಿದ್ದ ಒಂದು ತಿಂಗಳ ಕಂದಮ್ಮ ಮತ್ತು ಬದಿಯಲ್ಲೇ ಇದ್ದ ಇನ್ನೊಂದು ಮಗುವಿನ ಪಕ್ಕಕ್ಕೆ ಮೂರು ಕಿಟಕಿಗಳು ಬಿದ್ದರು ಯಾವುದೇ ತೊಂದರೆಯಾಗಲಿಲ್ಲ.
ಸಿಎಂ ತವರೂರು ಅದು, ತಕ್ಷಣಕ್ಕೆ ಸಿಎಂ ಭೇಟಿ ಕೊಡಲಿ: ಡಿಕೆಶಿ
ಸ್ಫೋಟ ದುರಂತದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಸಿಎಂ ತವರೂರಿಗೆ ತಕ್ಷಣ ಸಿಎಂ ಭೇಟಿ ಕೊಡಬೇಕು ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸ್ಫೋಟ ದುರಂತಕ್ಕೆ ಈಶ್ವರಪ್ಪ ನೇರ ಹೊಣೆ: ಶಾಸಕ ಕೆ.ಬಿ.ಪ್ರಸನ್ನಕುಮಾರ್
ಬಿಎಸ್‌ವೈ ಮತ್ತು ಕೆ.ಎಸ್.ಈಶ್ವರಪ್ಪ ಅಕ್ರಮಗಳ ರೂವಾರಿಗಳು. ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ನೇರ ಹೊಣೆಯಾಗಿದ್ದಾರೆ. ಈಶ್ವರಪ್ಪ ಈ ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಭಾವಿಯ ಮಗ, ಅಳಿಯಂದಿರ ಕೈವಾಡವಿದೆ ಎಂದ ಕೆ.ಬಿ.ಪ್ರಸನ್ನಕುಮಾರ್ ಹೇಳಿಕೆ ನೀಡಿದ್ದಾರೆ.
ಕಾನೂನುಗಿಂತ ಯಾರು ದೊಡ್ಡವರಲ್ಲ: ಶ್ರೀರಾಮುಲು
ನಮ್ಮೆಲ್ಲರಿಗೂ ತೀವ್ರ ನೋವಿನ ಸುದ್ದಿಯಾಗಿದೆ. ಸಿಎಂ ಬಿಎಸ್‌ವೈ ಉನ್ನತಮಟ್ಟದ ತನಿಖೆಗೆ ನಿರ್ದೇಶನ ಕೊಟ್ಟಿದ್ದಾರೆ. ಕಾನೂನುಗಿಂತ ಯಾರು ದೊಡ್ಡವರಲ್ಲ. ಕ್ರಮ ಕೈಗೊಳ್ಳಲು ಆದೇಶವಾಗಿದೆ ಎಂದು ರಾಮನಗರದಲ್ಲಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಜೆ.ಜಯಲಲಿತಾ ಸ್ಮಾರಕ ಲೋಕಾರ್ಪಣೆ
ಜನವರಿ 27 ರಂದು ಜೆ.ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆಯಾಗುತ್ತಾರೆ. ಅಂದೇ ಚೆನ್ನೈನ ಮರೀನಾ ಬೀಚ್ ನಲ್ಲಿ ನಿರ್ಮಾಣಗೊಂಡಿರುವ ಜೆ.ಜಯಲಲಿತಾ ಸ್ಮಾರಕ ಸ್ಮಾರಕ ಲೋಕಾರ್ಪಣೆಗೊಳ್ಳುತ್ತದೆ.
ಸೋಲಿನ ಭಯದಿಂದ ಹೊರಬರಬೇಕು: ಮೋದಿ
ಸಕಾರಾತ್ಮಕ ಮನಸ್ಥಿತಿಯಿಂದ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ನಾವು ರಿಸ್ಕ್ಗಳನ್ನು ತೆಗೆದುಕೊಳ್ಳುವುದನ್ನು ಕಲಿಯಬೇಕು. ಸೋಲಿನ ಭಯದಿಂದ ಹೊರಬರಬೇಕು ಎಂದು ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾ ಕ್ರಿಕೆಟ್ ತಂಡವನ್ನು ಶ್ಲಾಘಿಸಿದರು.
ನನ್ನ ಬಾಯಿಂದ ಹೇಳಿಸಬೇಡಿ, ಅವರ ಬಗ್ಗೆ ಮಾತನಾಡಲ್ಲ: ರೇಣುಕಾಚಾರ್ಯ
ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರ ವಿಚಾರ ಸಂಬಂಧಿಸಿ ಪದೇ ಪದೇ ಒಬ್ಬ ವ್ಯಕ್ತಿಯ ಬಗ್ಗೆ ಏಕೆ ಹೇಳಿಸುತ್ತೀರಿ. ನನ್ನ ಬಾಯಿಂದ ಹೇಳಿಸಬೇಡಿ, ಅವರ ಬಗ್ಗೆ ಮಾತನಾಡಲ್ಲ ಎಂದು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಸಚಿವ ಉಮೇಶ್ ಕತ್ತಿ ಭೇಟಿ
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನೂತನ ಸಚಿವ ಉಮೇಶ್ ಕತ್ತಿ ಡಾ.ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಯುವರಾಜ್ ಆಪ್ತ ಗುರುದೇವ್ಗೆ ಸಿಸಿಬಿ ಬುಲಾವ್
ಯುವರಾಜ್ನ ಹಲವು ವಂಚನೆ ಪ್ರಕರಣದಲ್ಲಿ ಬಾಗಿಯಾಗಿದ್ದ ಯುವರಾಜ್ನ ಆಪ್ತ ಗುರುದೇವ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ
ದೇಶದ ಆರ್ಥಿಕತೆಯು ಕುಸಿಯುತ್ತಿದೆ. ಭಯದಿಂದ ಸರ್ಕಾರ ಖಾಸಗೀಕರಣ ಮಾಡ್ತಿದೆ. ಕೊರೊನಾ ಲಸಿಕೆ ನೀಡಿಕೆ ಮುಂದುವರಿಕೆ ಭರವಸೆ ಇದೆ. ಆದಷ್ಟು ಬೇಗ ಲಸಿಕೆ ನೀಡಿಕೆ ಪೂರ್ಣವಾಗಬೇಕು. ರೈತರ ವಿಷಯದಲ್ಲಿ ಸರ್ಕಾರ ಸೂಕ್ಷ್ಮತೆ ಇಲ್ಲದಂತೆ ವರ್ತಿಸುತ್ತಿದೆ. ರೈತರ ವಿಷಯದಲ್ಲಿ ಅಹಂಕಾರದಿಂದ ವರ್ತಿಸುತ್ತಿದೆ. ರಾಷ್ಟ್ರೀಯ ಭದ್ರತೆಯಲ್ಲಿ ರಾಜೀ ಮಾಡಿಕೊಂಡಿದೆ. ಇದರ ಬಗ್ಗೆ ಸರ್ಕಾರ ಮೌನ ತಾಳಿದೆ ಎಂದು CWC ಸಭೆಯಲ್ಲಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ
ಜಿಲೆಟಿನ್ ಸ್ಫೋಟ ದುರಂತದಲ್ಲಿ ಐವರು ಮೃತಪಟ್ಟಿದ್ದು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಮತ್ತೊಂದು ಅವಕಾಶ ನೀಡಿಕೆಗೆ ವಿರೋಧ
ಯುಪಿಎಸ್.ಸಿ. ನಾಗರಿಕ ಸೇವಾ ಹುದ್ದೆ ಆಕಾಂಕ್ಷಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತನ್ನ ನಿಲುವು ತಿಳಿಸಿದೆ.
ಕೆಲ ಹೊತ್ತಿನಲ್ಲೇ ಘಟನಾ ಸ್ಥಳಕ್ಕೆ ತಲುಪುತ್ತೇನೆ: ಸಚಿವ ನಿರಾಣಿ
ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಅಕ್ರಮ ಗಣಿಗಾರಿಕೆ ವರದಿ ಮಾಡಲಾಗುತ್ತದೆ ಎಂದು ಟಿವಿ9ಗೆ ಪ್ರತಿಕ್ರಿಯೆ ನೀಡಿದ ಗಣಿ ಸಚಿವ ಮುರುಗೇಶ್ ನಿರಾಣಿ ಕೆಲ ಹೊತ್ತಿನಲ್ಲೇ ನಾನು ಘಟನಾ ಸ್ಥಳಕ್ಕೆ ತಲುಪುತ್ತೇನೆ ಎಂದು ಹೇಳಿದ್ದಾರೆ.
ಸಂಪೂರ್ಣ ವಿವರ ಪಡೆದ ಸಿಎಂ ಬಿಎಸ್‌ವೈ
ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿತ್ತಾ, ಇಲ್ಲವಾ. ಈ ಅಂಶಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ಅದರಿಂದಲೇ ಘಟನೆ ಸಂಭವಿಸಿರುವ ಮಾಹಿತಿ ಇದೆ ಎಂದು ಸಿಎಂ ಬಿಎಸ್‌ವೈಗೆ ಸಚಿವ ನಿರಾಣಿ ಮಾಹಿತಿ ನೀಡಿದ್ದಾರೆ.
ಎಲ್ಲಿ ಜನರಿಗೆ ಅನ್ಯಾಯವಾಗುತ್ತೋ ಅಲ್ಲಿ ಹೋರಾಟ ಮಾಡಿದ್ದಾರೆ: ವಿಜಯೇಂದ್ರ
ಯಡಿಯೂರಪ್ಪನವರು ನಾಲ್ಕು ದಶಕಗಳ ಹೋರಾಟ ಮಾಡಿದ್ದಾರೆ. ಹೋರಾಟದ ಫಲಶೃತಿಯಿಂದ ಬಿಜೆಪಿ ಗಲ್ಲಿಗಲ್ಲಿಗೆ ವಿಸ್ತರಿಸಿದೆ. ಸ್ವಾಮೀಜಿಗಳು ಮತ್ತು ಕಾರ್ಯಕರ್ತರ ಆಶಿರ್ವಾದದಿಂದ ನಾಲ್ಕನೆ ಬಾರಿಗೆ ಸಿಎಂ ಆಗಿದ್ದಾರೆ. ಯಡಿಯೂರಪ್ಪನವರಿಗೆ ಏನೇ ಸಮಸ್ಯೆ, ಸವಾಲು ಬಂದರು ಅಧಿಕಾರ ನಡೆಸುತ್ತಿದ್ದಾರೆ ಎಂದು ಕಲಬುರಗಿ ನಗರ ಅಖಿಲ ಭಾರತ ವೀರಶೈವ ಶಿವಾಚಾರ್ಯ ರ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಜಿಲೆಟಿನ್ ಸ್ಫೋಟ ದುರಂತ: ನ್ಯಾಯಾಧೀಶರ ಭೇಟಿ
ಘಟನಾ ಸ್ಥಳಕ್ಕೆ ಜಿಲ್ಲಾ ನ್ಯಾಯಾಧೀಶರ ಭೇಟಿ ನೀಡಿ, ದುರಂತದ ಮಾಹಿತಿ ಪಡೆಯುತ್ತಿದ್ದಾರೆ.
ಸ್ಫೋಟ ದುರಂತಕ್ಕೆ ಸುದೀಪ್ ಸಂತಾಪ
ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿ ಸಿಗಲಿ. ಪ್ರತಿ ಪ್ರಾಣವು ಅಮೂಲ್ಯ. ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿ ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ,ಪ್ರತಿ ಪ್ರಾಣವು ಅಮೂಲ್ಯಸರ್ಕಾರ ಅಗತ್ಯ ಕ್ರಮತಗೆದು ಕೊಳ್ಳಲಿ, ????#ಮೊದಲುಮಾನವನಾಗು
— Kichcha Sudeepa (@KicchaSudeep) January 22, 2021
ಎರಡು ಬಾಂಬ್ ಸ್ಕ್ವಾಡ್ನಿಂದ ಸ್ಫೋಟ ವಸ್ತುಗಳ ಪತ್ತೆ
ಸ್ಪೋಟದ ತೀವ್ರತೆ ಹಾಗೂ ಸ್ಟೋಟಕ ವಸ್ತುಗಳ ಕುರಿತು ಪರಿಶೀಲನೆ ನಡೆಸುತ್ತಿರುವ ಬಾಂಬ್ ಸ್ಕ್ವಾಡ್ಗೆ ಸ್ಫೋಟ ವಸ್ತುಗಳು ಸಿಕ್ಕಿವೆ.
ಘಟನೆ ನಡೆದ ಬಳಿಕ 2-3 ಅಕ್ರಮ ಕೇಸ್ ಪತ್ತೆ ಆಗುತ್ತೆ: ಹೆಚ್ಡಿಕೆ
ತನಿಖೆ ನಡೆಸಿದರೆ ಸಾವಿರಾರು ಪ್ರಕರಣ ಬಯಲಾಗುತ್ತದೆ. ಘಟನೆ ನಡೆದ ಬಳಿಕ 2-3 ಅಕ್ರಮ ಕೇಸ್ ಪತ್ತೆ ಆಗುತ್ತದೆ. ಮತ್ತೆ ಇವೆಲ್ಲಾ ಮುಚ್ಚಿ ಹೋಗುತ್ತವೆ. ಅಕ್ರಮಗಳಲ್ಲಿ ಎಲ್ಲ ಪಕ್ಷದವರೂ ಭಾಗಿಯಾಗಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಪ್ರಭಾವಿತರಿಗೆ ಗಣಿಗಾರಿಕೆಗೆ ಅನುಮತಿ ಕೊಡುತ್ತಿದ್ದಾರೆ: ಹೆಚ್ಡಿಕೆ
ಸ್ಫೋಟದ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾ ಕಚೇರಿಗಳಿಂದ ಹಿಡಿದು ಎಲ್ಲೆಡೆ ಹಣ ಮಾಡಲು ಪ್ರಭಾವಿತರಿಗೆ ಗಣಿಗಾರಿಕೆಗೆ ಅನುಮತಿ ಸಿಗುತ್ತಿದೆ ಎಂದು ಹೇಳಿದರು.
ನಮ್ಮ ಬೇಡಿಕೆಯನ್ನು ಬಿಟ್ಟು ಬೇರೆಯಲ್ಲ ಮಾತನಾಡುತ್ತಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್
ದೆಹಲಿಯಲ್ಲಿ 57 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಹತ್ತು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಮ್ಮ ಬೇಡಿಕೆಯನ್ನು ಬಿಟ್ಟು ಬೇರೆಯಲ್ಲ ಮಾತನಾಡುತ್ತಿದ್ದಾರೆ. ಸಂಪೂರ್ಣ ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ-ಬಿ.ವೈ.ವಿಜಯೇಂದ್ರ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇಂತಹ ಸ್ಫೋಟ ಹಿಂದೆ ಆಗಿಲ್ಲ: ಬಸವರಾಜ ಬೊಮ್ಮಾಯಿ
ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಆಗಿರೋದು ಗೊತ್ತಾಗಿದೆ. ನಾಲ್ಕು ಜಿಲ್ಲೆಗೆ ಅದರ ಪರಿಣಾಮ ಆಗಿದೆ. ಇಂತಹ ಸ್ಫೋಟ ಹಿಂದೆ ಆಗಿಲ್ಲ. ಎಂಪಿ, ಎಂಎಲ್ಎ ಸ್ಥಳದಲ್ಲಿ ಇದ್ದಾರೆ. ಎಲ್ಲರಿಂದ ಮಾಹಿತಿ ಪಡೆಯುತ್ತೇನೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯುಜಿಡಿ ಕಾಮಗಾರಿ: ರಸ್ತೆ ಮಧ್ಯ ಸಿಲುಕಿದ ಲಾರಿ
ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ಯುಜಿಡಿ ಕಾಮಗಾರಿ ಮಾಡಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಸರಿಯಾಗಿ ಮುಚ್ಚದೇ ಮಧ್ಯದ ತಗ್ಗಿನಲ್ಲಿ ಸಿಲುಕಿಕೊಂಡು ಲಾರಿ ಪರದಾಟ ಪಡುತ್ತಿದೆ.
ಅಕ್ರಮ ಗಣಿಗಾರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ: ಬಿಎಸ್‌ವೈ
ನಾಳೆ ನಾನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಮುಂದೆ ಇಂತಹ ಘಟನೆ ಆಗದಂತೆ ಮುಂಜಾಗ್ರತೆ ವಹಿಸುತ್ತೇವೆ. ಎಂದು ತಿಳಿಸಿದ ರಾಜ್ಯದ ಮುಖ್ಯಮಂತ್ರಿ ಅಕ್ರಮ ಗಣಿಗಾರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಜಿಲೆಟಿನ್ ಸ್ಫೋಟ: ಟಿವಿ9ಗೆ ಬಿಎಸ್‌ವೈ ಪ್ರತಿಕ್ರಿಯೆ
ಶಿವಮೊಗ್ಗ ಜಿಲ್ಲೆ ಹುಣಸೋಡು ಬಳಿ ಘಟನೆ ಅಚಾತುರ್ಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಈಗಾಗಲೇ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಟಿವಿ9ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲೆಟಿನ್ ಸ್ಫೋಟ: ಬೆಂಗಳೂರಿನ ಬಾಂಬ್ ಸ್ಕ್ವಾಡ್ ಆಗಮನ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟದ ಸ್ಥಳಕ್ಕೆ ಬೆಂಗಳೂರಿನ ಬಾಂಬ್ ಸ್ಕ್ವಾಡ್ ಆಗಮಿಸಿದ್ದು, ಶವ ಶೋಧಕ್ಕಿಂತ ಮೊದಲು ಜೀವಂತವಾಗಿರುವ ಜಿಲೆಟಿನ್ ಕಡ್ಡಿ ಬ್ಲಾಸ್ಟ್ ಆಗದಂತೆ ಶೋಧ ಕಾರ್ಯ ನಡೆಯುತ್ತಿದೆ.
ಸ್ಫೋಟಗೊಂಡ ಲಾರಿ
ಹಾಡು ಕುಣಿತದ ಮೂಲಕ ಜನರನ್ನು ರಂಜಿಸಿದ ಶಾಸಕ
ಮಳವಳ್ಳಿಯ ಕುಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಜಾನಪದ ಗೀತೆ ಗಾಯನ, ನೃತ್ಯ ಮಾಡುವ ಮೂಲಕ ಜನರನ್ನು ರಂಜಿಸಿದರು.
ಕಾಂಗ್ರೆಸ್ ಪಕ್ಷದ CWC ಸಭೆ ಆರಂಭ
ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ, ಪಕ್ಷದ ಸಂಘಟನೆ, ಮೋದಿ ಸರ್ಕಾರದ ವಿರುದ್ಧ ಹೋರಾಟ ಹಾಗು ರೈತರ ಹೋರಾಟ ಬೆಂಬಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಜೋ ಬೈಡೆನ್, ಕಮಲಾ ಹ್ಯಾರಿಸ್ಗೆ ನಿತ್ಯಾನಂದನಿಂದ ಅಭಿನಂದನೆ ಸಲ್ಲಿಕೆ
ಕೈಲಾಸ ಹೆಸರಿನ ದೇಶ ಸ್ಥಾಪಿಸಿರುವುದಾಗಿ ಹೇಳಿರುವ ನಿತ್ಯಾನಂದ ಆಮೆರಿಕಾದ ನೂತನ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಅಭಿನಂದನೆ ಸಲ್ಲಿಸಿದರು.
ಕಲ್ಲುಗಣಿಗಾರಿಕೆ ನಿಲ್ಲಿಸಲು ಸ್ಥಳಿಯರ ಆಗ್ರಹ
ಸ್ಫೋಟದಲ್ಲಿ ಏಳರಿಂದ ಎಂಟು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರತಿದಿನ ಕಲ್ಲುಗಣಿಗಾರಿಕೆ ಶಬ್ದ ಕೇಳುತ್ತದೆ. ಆದರೆ ಇದೇ ಬಾರಿ ಇಷ್ಟು ದೊಡ್ಡ ಶಬ್ದವಾಗಿದೆ. ಇದರಿಂದ ಅಕ್ಕಪಕ್ಕದವರಿಗೆ ತೀರಾ ತೊಂದರೆಯಾಗುತ್ತಿದೆ. ಹೀಗಾಗಿ ಕಲ್ಲುಗಣಿಗಾರಿಕೆ ನಿಲ್ಲಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ದೇಶದಲ್ಲಿ ದುಬಾರಿಯಾದ ಪೆಟ್ರೋಲ್
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 85.45 ರೂಪಾಯಿಗೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 92.04 ರೂ. ಗೆ ಏರಿಕೆಯಾಗಿದೆ.
ಪಕ್ಷ ಬದಿಗಿಟ್ಟು ಸಮಾಜದ ಏಳಿಗೆಗೆ ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ
ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳೋದು ಬೇಡ ಎಂದು ಯೋಚಿಸಿದ್ದೆ. ಅಭಿಮಾನಿಗಳ ಪ್ರೀತಿ ಒತ್ತಾಯಕ್ಕೆ ನಾನು ಆಚರಿಸಿಕೊಳ್ಳುತ್ತಿದ್ದೀನಿ ಎಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ ರಾಜಕಾರಣ, ಪಕ್ಷ ಬದಿಗಿಟ್ಟು ಸಮಾಜದ ಏಳಿಗೆಗೆ ಕೆಲಸ ಮಾಡೋಣ ಎಂದು ಹೇಳಿದರು.
ಸ್ಫೋಟ ದುರಂತ: ಬಿರುಕು ಬಿಟ್ಟ ಗೋಡೆ
ಸ್ಫೋಟದ ಪರಿಣಾಮ ಮನೆಯ ಹಂಚುಗಳು ಪುಡಿಪುಡಿಯಾಗಿದ್ದು, ಕಿಟಕಿ ಗಾಜು ಒಡೆದು ಹೋಗಿದೆ. ಜೊತೆ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ.
ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ
ಬಿಬಿಎಂಪಿ ಎಇಇ ಆಂಜಿನಪ್ಪರವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಳಿ ವೇಳೆ 2 ಕಾರು, ಬೈಕ್, 3.5 ಲಕ್ಷ ರೂಪಾಯಿ ಪತ್ತೆಯಾಗಿದೆ.
ಮಯನ್ಮಾರ್ಗೆ ಭಾರತದಿಂದ ಲಸಿಕೆ ಗಿಫ್ಟ್
1.5 ಮಿಲಿಯನ್ ಡೋಸ್ ಲಸಿಕೆಯನ್ನು ಮಯನ್ಮಾರ್ಗೆ ಭಾರತದಿಂದ ಗಿಫ್ಟ್ ನೀಡಿದ್ದು, ಇಂದು ಮುಂಜಾನೆಯೇ ಏರ್ ಇಂಡಿಯಾ ವಿಮಾನ ಮೂಲಕ ಮಯನ್ಮಾರ್ ತಲುಪಿದೆ.
ಊರಿನಿಂದ ಆಚೆಗೆ ಹಾರಿ ಬಿದ್ದಿರುವ ಲಾರಿ ಟೈಯರ್ ಡಿಸ್ಕ್
ಸ್ಫೋಟದ ತೀವ್ರತೆಗೆ ಸುಮಾರು 50 ಕೇಜಿ ತೂಕದ ಲಾರಿ ಟೈಯರ್ ಡಿಸ್ಕ್ ಊರಿನಿಂದ ಆಚೆಗೆ ಹಾರಿ ಬಿದ್ದಿದೆ. ಅಲ್ಲದೇ ಭಾರೀ ಗಾತ್ರದ ಕಬ್ಭಿಣದ ತುಂಡುಗಳು ಮನೆಗಳ ಮೇಲೆ ಬಿದ್ದಿದೆ.
ಸೂಕ್ತವಾದ ಶಿಕ್ಷೆ ಆಗಬೇಕು: ಡಾ.ಸುಧಾಕರ್
ಇದೊಂದು ದುರದೃಷ್ಟಕರ ಘಟನೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣವಾದವರಿಗೆ ಸೂಕ್ತವಾದ ಶಿಕ್ಷೆ ಆಗಬೇಕು. ಕೆಲ ಜಿಲ್ಲೆಗಳಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡಲಾಗುತ್ತಿದೆ. ನಿಯಮ ಗಾಳಿಗೆ ತೋರಿ ಕ್ರಷರ್ ಕೆಲಸಗಳು ನಡಿಸುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಫೋಟ ದುರಂತ: ಬಾಂಬ್ ಪತ್ತೆ ದಳ ಭೇಟಿ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತದ ಬಗ್ಗೆ ಪರಿಶೀಲನೆ ನಡೆಸಲು ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ದಳ ಭೇಟಿ ನೀಡಿದೆ.
ಲಸಿಕೆ ಫಲಾನುಭವಿಗಳ ಜೊತೆಗೆ ಮೋದಿ ಸಂವಾದ
ದೇಶದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಆರೋಗ್ಯ ಕಾರ್ಯಕರ್ತರ ಭಯ, ಆತಂಕ ಹೋಗಲಾಡಿಸಲು ವಾರಣಾಸಿಯ ಲಸಿಕೆ ಫಲಾನುಭವಿಗಳ ಜೊತೆಗೆ ಇಂದು ಮಧ್ಯಾಹ್ನ 1.15 ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಡೈನಾಮೈಟ್ ಲಾರಿ ಸ್ಫೋಟ: ಪ್ರಹ್ಲಾದ್ ಜೋಷಿ ಟ್ವೀಟ್
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಡೈನಾಮೈಟ್ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಡೈನಾಮೈಟ್ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರುಸಾವನ್ನಪ್ಪಿದ್ದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ.ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
— Pralhad Joshi (@JoshiPralhad) January 22, 2021
ಹೊಸ ನಿಯಮದ ಬಗ್ಗೆ ಚರ್ಚೆ
ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಹೊಸ ನಿಯಮವನ್ನು ಜಾರಿ ಮಾಡಲು ಚರ್ಚೆ ಮಾಡುತ್ತೇವೆ ಎಂದು ಗಣಿ ಸಚಿವ ಮುರಗೇಶ್ ನಿರಾಣಿ ಟಿವಿ9ಗೆ ತಿಳಿಸಿದ್ದಾರೆ.
ಸ್ಫೋಟಕ ವಸ್ತು ಬಳಕೆಗೆ ಅನುಮತಿ ಮಾಹಿತಿ ಸಂಗ್ರಹ
ಎಲ್ಲ ಗಣಿಗಾರಿಕೆಗೆ ಸ್ಫೋಟಕ ವಸ್ತು ಬಳಸಲು ಅನುಮತಿ ಇಲ್ಲ. ಗಣಿ ಪ್ರದೇಶದ ಸುತ್ತ ಮನೆ, ಕಟ್ಟಡಗಳಿದ್ದರೆ ಸ್ಫೋಟಕ ವಸ್ತು ಬಳಕೆಗೆ ಅನುಮತಿ ಇಲ್ಲಎಂದು ಟಿವಿ9ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯ್ಕ್ ತಿಳಿಸಿದ್ದು, ಸ್ಫೋಟಕ ವಸ್ತು ಬಳಕೆಗೆ ಅನುಮತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅವಘಡಕ್ಕೆ ಶಾಸಕ ಆರ್.ಮಂಜುನಾಥ್ ಸಂತಾಪ
ಜಿಲೆಟಿನ್ ಬ್ಲಾಸ್ಟ್‌ನಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಭಗವಂತ ನೀಡಲಿ. ಮೃತರ ಕುಟುಂಭಕ್ಕೆ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಬೇಕು. ಅಕ್ರಮ ಅವೈಜ್ಞಾನಿಕ ಕ್ರಷರ್‌ಗಳ ಕಡಿವಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸ್ಫೋಟ ದುರಂತ: ಸಂತ್ರಸ್ತರ ಕುಟುಂಬಗಳಿಗೆ ರಾಹುಲ್ ಗಾಂಧಿ ಸಂತಾಪ
ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ರಾಹುಲ್ ಗಾಂಧಿ ಭವಿಷ್ಯದಲ್ಲಿ ಈ ರೀತಿಯ ದುರಂತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ದುರಂತದ ಬಗ್ಗೆ ಆಳವಾದ ತನಿಖೆಯ ಆಗಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
The news of blast at stone mining quarry in Karnataka is tragic.
Condolences to the families of the victims. Such incidents call for in-depth investigation so that similar tragedies can be avoided in the future.
— Rahul Gandhi (@RahulGandhi) January 22, 2021
ಕೊವ್ಯಾಕ್ಸಿನ್ ಲಸಿಕೆ ಪಡೆದ ತಮಿಳುನಾಡು ಸಚಿವ
ಚೆನ್ನೈನಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದ ತಮಿಳುನಾಡು ಆರೋಗ್ಯ ಸಚಿವ ವಿಜಯ ಭಾಸ್ಕರ್ ನಾನು ಒಬ್ಬ ವೈದ್ಯನಾಗಿ ಆರೋಗ್ಯ ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸಲು ಲಸಿಕೆ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮುರುಗೇಶ್ ನಿರಾಣಿಗೆ ಬಿಎಸ್‌ವೈ ಸೂಚನೆ
ಶಿವಮೊಗ್ಗ ಜಿಲ್ಲಾಡಳಿತದ ಜೊತೆ ನಿರಂತರ ಮಾತನಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದುರಂತ ಸ್ಥಳಕ್ಕೆ ತೆರಳಿ ಪರಿಶೀಲಿಸಲು ಗಣಿ ಸಚಿವ ಮುರುಗೇಶ್ ನಿರಾಣಿಗೆ ಸೂಚನೆ ನೀಡಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಚರ್ಚೆ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುತ್ತೇವೆ ಎಂದು ಟಿವಿ9ಗೆ ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ- ಹೆಚ್.ಡಿ.ಕುಮಾರಸ್ವಾಮಿ
ಸ್ಫೋಟದಿಂದ ಕಾರ್ಮಿಕರು ಮೃತಪಟ್ಟಿರುವುದು ನೋವಿನ ಸಂಗತಿ. ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.1/2
— H D Kumaraswamy (@hd_kumaraswamy) January 22, 2021
ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು.2/2
— H D Kumaraswamy (@hd_kumaraswamy) January 22, 2021
ರಮೇಶ್ ಜಾರಕಿಹೊಳಿ ಸುಧಕಾರ್ ಭೇಟಿ ಸಾಧ್ಯತೆ
ಖಾತೆ ವಾಪಸ್ ಪಡೆದಿದ್ದಕೆ ಅಸಮಧಾನದಿಂದ ಇರುವ ಡಾ.ಸುಧಕಾರ್ರವರನ್ನು ಸಮಧಾನಗೊಳಿಸಲು ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗುವ ಸಾಧ್ಯತೆಯಿದೆ.
ರಾಗಿ ಮೆದೆಗಳಿಗೆ ಆಕಸ್ಮಿಕ ಬೆಂಕಿ
ರಾಮನಗರ ತಾಲೂಕಿನ ನಂಜಾಪುರ ಗ್ರಾಮದಲ್ಲಿ ಆರು ರಾಗಿ ಮೆದೆಗಳು ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.
ಸಂತಾಪ ಸೂಚಿಸಿದ ಗಣಿ ಸಚಿವ ಮುರುಗೇಶ್ ನಿರಾಣಿ
ಕಳೆದ ರಾತ್ರಿ ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಗಣಿ ಸಚಿವ ಮುರುಗೇಶ್ ನಿರಾಣಿ ಸಂತಾಪ ಸೂಚಿಸಿದ್ದಾರೆ.
ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರ ಸೂಚನೆ
ಶಿವಮೊಗ್ಗ ತಾಲೂಕಿನ ಅಬ್ಬಗೆರೆ ಗ್ರಾಮದಲ್ಲಿ ರಾತ್ರಿ ನಡೆದ ಭೀಕರ ಸ್ಪೋಟಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿ ಪಡೆದು ತಪ್ಪಿತಸ್ಥರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಚಿವ ಕೆಎಸ್.ಈಶ್ವರಪ್ಪ ಸೂಚಿಸಿದ್ದಾರೆ.
ಜಿಲೆಟಿನ್ ಸ್ಫೋಟ ದುರಂತ: ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ
ಇಡೀ ಜಿಲ್ಲೆಯ ಜನ ರಾತ್ರಿ ಮನೆ ಬಿಟ್ಟು ಹೊರ ಬಂದಿದ್ರು. ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಾಗಿ ಕಾಯುತ್ತಿದ್ದೇವೆ. ಸಮಗ್ರ ತನಿಖೆ ನಡೆಸಿ ಸತ್ಯ ಹೊರತರಬೇಕಿದೆ ಎಂದು ಟಿವಿ9ಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರಿನ ಜೆ.ಪಿ.ನಗರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳಿಂದ ರಕ್ತದಾನ, ಅನ್ನದಾನ ಕಾರ್ಯಕ್ರಮ ನಡೆಯುತ್ತದೆ.
ಜಿಲೆಟಿನ್ ಸ್ಫೋಟ: ಜಮೀನು ಮಾಲೀಕ ಬಂಧನ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿ ಜಮೀನು ಮೂಲ ಮಾಲೀಕ ಅವಿನಾಶ್ ಕುಲಕರ್ಣಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಫೋಟ ದುರಂತ: ಭೇಟಿ ಕೊಟ್ಟ ಸಚಿವ ಈಶ್ವರಪ್ಪ
ಶಿವಮೊಗ್ಗ ಗಣಿ ಪ್ರದೇಶಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಆಗಮಿಸಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಸಿಎಂ ಬಿಎಸ್‌ವೈ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತದ ಹಿನ್ನೆಲೆ ಇಂದು ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗಕ್ಕೆ ಆಗಮಿಸುತ್ತಾರೆ. ಈ ವೇಳೆ ದುರಂತ ನಡೆದ ಸ್ಥಳಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ.
ಗಣಿಗಾರಿಕೆಯನ್ನು ಗುತ್ತಿಗೆ ಪಡೆದಿರುವ ಸುಧಾಕರ್ ವಶ
ಹುಣಸೋಡು ಸೇರಿ ಅನೇಕ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ಗುತ್ತಿಗೆ ಪಡೆದಿರುವ ಸುಧಾಕರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳದಲ್ಲಿ ಬೀಡುಬಿಟ್ಟಿರುವ ಜಿಲ್ಲಾಧಿಕಾರಿ, ಎಸ್ಪಿ
ಶಿವಮೊಗ್ಗ ಕಲ್ಲು ಗಣಿ ಪ್ರದೇಶಕ್ಕೆ ಮೂರು ಆ್ಯಂಬುಲೆನ್ಸ್ಗಳ ಬಂದಿದೆ. ಜಿಲ್ಲಾಧಿಕಾರಿ, ಎಸ್ಪಿ ಆಗಮಿಸಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆಸ್ಪತ್ರೆಗೆ ಇಬ್ಬರ ಮೃತದೇಹ ಶಿಫ್ಟ್
ಶಿವಮೊಗ್ಗ ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ದುರ್ಘಟನೆಯಲ್ಲಿ ಹಲವು ಕಾರ್ಮಿಕರು ಮೃತಪಟ್ಟಿದ್ದು, ಮೆಗ್ಗಾನ್ ಆಸ್ಪತ್ರೆಗೆ ಇಬ್ಬರ ಮೃತ ದೇಹವನ್ನು ರವಾನೆ ಮಾಡಲಾಗಿದೆ.
ಜೆಡಿಎಸ್ ಮುಖಂಡ ನರಸಿಂಹ ಬಂಧನ
ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್ ಪೂರೈಸುತ್ತಿದ್ದ ಜೆಡಿಎಸ್ ಮುಖಂಡ ನರಸಿಂಹರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಫೋಟ ದುರಂತ: ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ಶಿವಮೊಗ್ಗ ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತವಾಗಿದ್ದು, ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ದುರ್ಘಟನೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
Pained by the loss of lives in Shivamogga. Condolences to the bereaved families. Praying that the injured recover soon. The State Government is providing all possible assistance to the affected: PM @narendramodi
— PMO India (@PMOIndia) January 22, 2021
ಸ್ಫೋಟ ದುರಂತ ಸಂಭವಿಸಿದ ಪ್ರದೇಶದಲ್ಲಿ ಹಣ ಪತ್ತೆ
ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟವಾದ ಪ್ರದೇಶದಲ್ಲಿ ಎರಡು ಸಾವಿರದ ನೋಟಿನ ಲಕ್ಷ ರೂಪಾಯಿ ಅಧಿಕ ಹಣ ಪತ್ತೆಯಾಗಿದ್ದು, ಸ್ಫೋಟದ ತೀವ್ರತೆಗೆ ನೋಟುಗಳು ಚೆಲ್ಲಾ ಪಿಲ್ಲಿಯಾಗಿವೆ.
ಸ್ಫೋಟ ದುರಂತ: ರಾಜೇಗೌಡ ಪ್ರತಿಕ್ರಿಯೆ
ಶಿವಮೊಗ್ಗ ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟಕ್ಕೆ ಯಾವುದೇ ಮನೆ ಬಿದ್ದಿರುವ ಪ್ರಕರಣಗಳು ವರದಿ ಆಗಿಲ್ಲ. ಮನೆಗಳು ಅಲ್ಲಾಡಿವೆ, ಕಿಟಕಿ ಗಾಜುಗಳು ಪುಡಿಪುಡಿ ಆಗಿವೆ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಡೈನಮೈಟ್ಸ್ ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹ ಛಿದ್ರಛಿದ್ರ
ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿಯ ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟವಾಗಿದ್ದು, ಜಿಲೆಟಿನ್ ಸ್ಫೋಟಗೊಂಡ ತೀವ್ರತೆಗೆ ಐವರು ಸಾವನ್ನಪ್ಪಿದ್ದಾರೆ.
Published On - Jan 22,2021 5:33 PM