ಕಾಲು ಜಾರಿ ಕೆರೆಗೆ ಬಿದ್ದ ಮಕ್ಕಳು: ಇಬ್ಬರ ಸಾವು

ಆಟವಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದ ಬಾಲಕ ಅಯಾನ್​ನನ್ನು ರಕ್ಷಿಸಲು ತೆರಳಿದ್ದ ಬಾಲಕಿ ಮಯಾಕ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕಾಲು ಜಾರಿ ಕೆರೆಗೆ ಬಿದ್ದ ಮಕ್ಕಳು: ಇಬ್ಬರ ಸಾವು
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಮಕ್ಕಳು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 5:53 PM

ಬಾಗಲಕೋಟೆ: ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಬಳಿ ನಡೆದಿದೆ.

ಅಯಾನ್ ಮುಲ್ಲಾ (4), ಮಯಾಕ್ ಕೆರೂರು (7) ಉಗಲವಾಟ ಬಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕರು. ಆಟವಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದ ಬಾಲಕ ಅಯಾನ್​ನನ್ನು ರಕ್ಷಿಸಲು ತೆರಳಿದ್ದ ಬಾಲಕಿ ಮಯಾಕ್ ಕೂಡ ನೀರಿನಲ್ಲಿ ಮುಳುಗಿದ್ದಾಳೆ. ಸ್ಥಳಕ್ಕೆ ಕೆರೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಎಡದಂಡೆ ಕಾಲುವೆಯಲ್ಲಿ ಮುಳುಗುತ್ತಿದ್ದ ಮಗನನ್ನ ರಕ್ಷಿಸಲು ಧಾವಿಸಿದ ತಾಯಿ ನೀರುಪಾಲು