ಕೊಪ್ಪಳದಲ್ಲಿ ವಿದ್ಯುತ್ ಹರಿದು ತಾಯಿ, ಇಬ್ಬರು ಮಕ್ಕಳ ಸಾವು

ಮನೆಯಲ್ಲಿ ಬಟ್ಟೆ ಒಣ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದಾರೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಪ್ಪಳದಲ್ಲಿ ವಿದ್ಯುತ್ ಹರಿದು ತಾಯಿ, ಇಬ್ಬರು ಮಕ್ಕಳ ಸಾವು
ಕೊಪ್ಪಳದಲ್ಲಿ ವಿದ್ಯುತ್ ಹರಿದು ತಾಯಿ, ಇಬ್ಬರು ಮಕ್ಕಳ ಸಾವು
Follow us
TV9 Web
| Updated By: ಆಯೇಷಾ ಬಾನು

Updated on:May 06, 2022 | 2:15 PM

ಕೊಪ್ಪಳ: ವಿದ್ಯುತ್ ಹರಿದು ತಾಯಿ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ. ತಾಯಿ ಶೈಲಮ್ಮ(28), ಮಕ್ಕಳಾದ ಪವನ್(2), ಸಾನ್ವಿ(3) ಮೃತ ದುರ್ದೈವಿಗಳು. ಮನೆಯಲ್ಲಿ ಬಟ್ಟೆ ಒಣ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದಾರೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಚಿಹಳ್ಳಿ ಕ್ರಾಸ್ ಬಳಿ ಗಾರ್ಮೆಂಟ್ಸ್‌ ಬಸ್ ಪಲ್ಟಿ, ಐವರಿಗೆ ಗಾಯ ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಬಾಚಿಹಳ್ಳಿ ಕ್ರಾಸ್ ಬಳಿ ತಿಪಟೂರಿನ ಗಾರ್ಮೆಂಟ್ಸ್‌ಗೆ ಮಹಿಳೆಯರನ್ನ ಕರೆದೊಯ್ಯುತ್ತಿದ್ದ ಗಾರ್ಮೆಂಟ್ಸ್‌ ಬಸ್ ಪಲ್ಟಿಯಾಗಿ ಐವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾರ್ಮೆಂಟ್ಸ್‌ ಬಸ್‌ನಲ್ಲಿ ತೆರಳುತ್ತಿದ್ದ ಉಳಿದ ಆರು ಸಿಬ್ಬಂದಿ ಪಾರಾಗಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿ ಹೊಡೆದಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಹರಿದು 50ಕ್ಕೂ ಹೆಚ್ಚು ಕುರಿಗಳು‌ ಸ್ಥಳದಲ್ಲೇ ದುರ್ಮರಣ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗವಿಮಠ ಬಳಿ ಲಾರಿ ಹರಿದು 50ಕ್ಕೂ ಹೆಚ್ಚು ಕುರಿಗಳು‌ ಸ್ಥಳದಲ್ಲೇ ಮೃತಪಟ್ಟಿವೆ. ಘಟನೆಯಲ್ಲಿ ಆಂಧ್ರದ ಮಡಕಶಿರಾ ಮೂಲದ ಕುರಿಗಾಹಿ ಚಂದ್ರಪ್ಪಗೆ ಗಾಯಗಳಾಗಿವೆ. ಹುಲಿಯೂರುದುರ್ಗದಿಂದ ಕುಣಿಗಲ್ ಕಡೆ ತೆರಳುವಾಗ ಅವಘಡ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈಜಲು ಹೋಗಿದ್ದ ಬಾಲಕ ನೀರುಪಾಲು ಕೋಲಾರ ಜಿಲ್ಲೆಯ ಕೆಜಿಎಫ್ನ ಮಸ್ಕಾಂ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹರಿಹರನ್ 15 ಮೃತ ಬಾಲಕ. ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ಆಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲಕನ ಗಮನ ಬೇರೆಡೆ ಸೆಳೆದು ಹಣ ಕದ್ದೊಯ್ದವರು ಅರೆಸ್ಟ್ ಕಾರು ಚಾಲಕನ ಗಮನ ಬೇರೆಡೆ ಸೆಳೆದು ಹಣ ಕದ್ದೊಯ್ದ ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 4, 2022 ರಂದು ಡ್ರೈವರ್ ಪಕ್ಕದ ಸೀಟ್ ನಲ್ಲಿ ಹಣ ಇಟ್ಟುಕೊಂಡು ಹೋಗ್ತಿದ್ದ ಕಾರು ಚಾಲಕನನ್ನು ಹಿಂಬಾಲಿಸಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಕಾರಿನ ಟೈರ್ ಪಂಚರ್ ಆಗಿದೆ ಎಂದಿದ್ದಾರೆ. ಈ ವೇಳೆ ಚಾಲಕ ಕಾರಿನಿಂದ ಕೆಳಗಿಳಿದು ಟೈರ್ ನೋಡಿದ್ದಾನೆ. ಆಗ ಕಾರಿನಲ್ಲಿದ್ದ ನಗದು ಹಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5.65 ಲಕ್ಷ ನಗದು ಹಣ 2 ಮೊಬೈಲ್, 2 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಕಾರ್ತಿಕ್ ಮತ್ತು ಗೋಪಿ ಬಂಧಿತ ಆರೋಪಿಗಳು.

ಇನ್ನಷ್ಟು ಕ್ರೈಂ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ

Published On - 2:15 pm, Fri, 6 May 22