ಸಾಲದ ಶೂಲಕ್ಕೆ ಹಾವೇರಿಯಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ
ರಾಣೆಬೆನ್ನೂರು ತಾಲೂಕಿನ ಮೆನಸಿನಹಾಳ ಗ್ರಾಮದಲ್ಲಿ ಹನುಮಂತಪ್ಪ ದೊಡ್ಡಮನಿ (40) ಎಂಬ ರೈತ ನೇಣಿಗೆ ಶರಣಾಗಿದ್ದಾನೆ. ರೈತ ಹನುಮಂತಪ್ಪ ತಂದೆ ಹೆಸರಿನಲ್ಲಿ ಎರಡು ಎಕರೆ ಮೂವತ್ತೈದು ಗುಂಟೆ ಜಮೀನು ಹೊಂದಿದ್ದು, ಕೃಷಿ ಕೆಲಸಕ್ಕೆಂದು ಬ್ಯಾಂಕ್ ಮತ್ತು ಕೈಸಾಲ ಸೇರಿ ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು.
ಹಾವೇರಿ: ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ರೈತರು ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಲೆ ಇದ್ದಾರೆ. ಒಮ್ಮೆ ಮಳೆ ಕಡಿಮೆಯಾಗಿ ರೈತರು ತೊಂದರೆಗೆ ಒಳಗಾಗಿದ್ದರು. ಮತ್ತೊಮ್ಮೆ ಸತತ ಮಳೆಯಿಂದ ಬೆಳೆ ಹಾಳಾಗಿದ್ದವು. ಪ್ರಸಕ್ತ ವರ್ಷವೂ ಮಳೆರಾಯನ ಕಣ್ಣಾಮುಚ್ಚಾಲೆಯಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಅನ್ನೋ ಚಿಂತೆ ರೈತರನ್ನು ಕಾಡುತ್ತಿದೆ. ಮಾಡಿದ ಸಾಲ ತೀರಿಸಲು ಆಗದೆ ಜಿಲ್ಲೆಯಲ್ಲಿ ಒಂದೇ ದಿನ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈತರು ನೇಣಿಗೆ ಶರಣಾಗಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆನಸಿನಹಾಳ ಗ್ರಾಮದಲ್ಲಿ ಹನುಮಂತಪ್ಪ ದೊಡ್ಡಮನಿ (40) ಎಂಬ ರೈತ ನೇಣಿಗೆ ಶರಣಾಗಿದ್ದಾನೆ. ರೈತ ಹನುಮಂತಪ್ಪ ತಂದೆ ಹೆಸರಿನಲ್ಲಿ ಎರಡು ಎಕರೆ ಮೂವತ್ತೈದು ಗುಂಟೆ ಜಮೀನು ಹೊಂದಿದ್ದು, ಕೃಷಿ ಕೆಲಸಕ್ಕೆಂದು ಬ್ಯಾಂಕ್ ಮತ್ತು ಕೈಸಾಲ ಸೇರಿ ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಮತ್ತೊಂದೆಡೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ನಾಗವಂದ ಗ್ರಾಮದಲ್ಲಿ ಈರಪ್ಪ ಆನ್ವೇರಿ (53) ಎಂಬ ರೈತ ತೇಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತ ಈರಪ್ಪನಿಗೆ ಮೂರು ಎಕರೆ ಜಮೀನಿದ್ದು, ಬ್ಯಾಂಕ್ ಮತ್ತು ಕೈಸಾಲ ಸೇರಿ ಸುಮಾರು ಆರು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿಕೊಂಡಿದ್ದರಂತೆ.
ಕಂಗಾಲಾಗಿಸಿದ ಬೆಳೆ ಹಾನಿ ಮೆನಸಿನಹಾಳ ಗ್ರಾಮದ ರೈತ ಹನುಮಂತಪ್ಪ ಕಳೆದ ಎರಡ್ಮೂರು ವರ್ಷಗಳಿಂದ ಮೆಕ್ಕೆಜೋಳ, ಹತ್ತಿ ಬೆಳೆದಿದ್ದರು. ಒಮ್ಮೆ ಅತಿಯಾದ ಮಳೆ ಬೆಳೆ ಹಾನಿ ಮಾಡಿತ್ತು. ಈ ಬಾರಿಯೂ ಮೆಕ್ಕೆಜೋಳ ಬಿತ್ತನೆ ಮಾಡಿದ ನಂತರ ಮಳೆ ಬಂದಿರಲಿಲ್ಲ. ಇದರಿಂದ ಬೇಸತ್ತು ಹನುಮಂತಪ್ಪ ನೇಣಿಗೆ ಶರಣಾಗಿದ್ದಾನೆ. ನಾಗವಂದ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ರೈತ ಈರಪ್ಪ ಕಳೆದ ಎರಡ್ಮೂರು ವರ್ಷಗಳಿಂದ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಬೆಳೆದಿದ್ದ. ಆದರೆ ಮೂರು ವರ್ಷಗಳಿಂದ ಒಮ್ಮೆ ಅತಿವೃಷ್ಟಿಯಾಗಿ ಬೆಳೆ ಹಾಳಾಗಿತ್ತು. ಕಳೆದ ಬಾರಿಯೂ ಅತಿಯಾದ ಮಳೆ ಆಗಿತ್ತು. ಆದರೂ ಅಲ್ಪ ಸ್ವಲ್ಪ ಮೆಕ್ಕೆಜೋಳ ಮತ್ತು ಹತ್ತಿ ಬೆಳೆದಿತ್ತು. ಆದರೆ ಮೆಕ್ಕೆಜೋಳಕ್ಕೆ ಸೂಕ್ತ ದರ ಸಿಕ್ಕಿರಲಿಲ್ಲ. ಈ ವರ್ಷವೂ ಮುಂಗಾರಿನ ಆರಂಭದಲ್ಲಿ ಉತ್ತಮ ಮಳೆಯಾಗಿ ಬಿತ್ತನೆ ನಂತರ ಮಳೆ ಬಂದಿರಲಿಲ್ಲ. ಹೀಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಬೇಸತ್ತು ರೈತ ಈರಪ್ಪ ನೇಣಿಗೆ ಶರಣಾಗಿದ್ದಾನೆ.
ಪರಿಹಾರಕ್ಕೆ ಆಗ್ರಹ ಸರಕಾರ ಕೂಡಲೇ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಸರಕಾರದ ರೈತ ವಿರೋಧಿ ನೀತಿಗಳಿಂದ ಇವತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದರೆ ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಬಾರದು ಕೈಗೊಳ್ಳಬಾರದು. ಈಗಾಗಲೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವುದರ ಜೊತೆಗೆ ಅವರ ಮಕ್ಕಳಿಗೆ ಸರಕಾರ ಉಚಿತ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಒತ್ತಾಯಿಸಿದರು.
ಇದನ್ನೂ ಓದಿ
K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?
ಹಳೆಯ ಪ್ರಕರಣ ಇಟ್ಟುಕೊಂಡು ಸುಮಲತಾಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ; ಕುಮಾರಸ್ವಾಮಿ ಪರ ಬ್ಯಾಟಿಂಗ್
(Two farmer commits suicide in one day at haveri)