ನಾಗವಾರ ಬಳಿ 30 ನಿಮಿಷಗಳ ಅವಧಿಯಲ್ಲಿ ಒಂದೇ ಗುಂಡಿಗೆ ಬಿದ್ದ ಎರಡು ಗೂಡ್ಸ್ ಕ್ಯಾರಿಯರ್​ಗಳು!

ನಾಗವಾರ ಬಳಿ 30 ನಿಮಿಷಗಳ ಅವಧಿಯಲ್ಲಿ ಒಂದೇ ಗುಂಡಿಗೆ ಬಿದ್ದ ಎರಡು ಗೂಡ್ಸ್ ಕ್ಯಾರಿಯರ್​ಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 15, 2024 | 7:08 PM

ಟ್ರಾಫಿಕ್ ಪೊಲೀಸ್ ಮತ್ತು ಜನ ಗೂಡ್ಸ್ ಕ್ಯಾರಿಯರ್​ಗಳನ್ನು ಎತ್ತಲು ನೆರವಾದರು. ಎರಡು ಅಪಘಾತಗಳು ನಡೆದ ನಂತರ ಟ್ರ್ಯಾಕ್ಟರ್ ಒಂರದಲ್ಲಿ ಮಣ್ಣು ತರಿಸಿ ಗುಂಡಿಯನ್ನು ಮುಚ್ಚಲಾಯಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ನಗರದ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ ಮತ್ತು ಜನ ಬ್ರ್ಯಾಂಡ್ ಬೆಂಗಳೂರನ್ನು ಆನಂದಿಸುತ್ತಿದ್ದಾರೆ!

ಬೆಂಗಳೂರು: ನಾಗವಾರ ಜಂಕ್ಷನ್ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್ ಒಂದು ಪ್ರತಿಷ್ಠಿತ ಪ್ರದೇಶವಾದರೂ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿರುತ್ತದೆ. ಮಳೆ ಸುರಿಯಾಲಾರಂಭಿಸಿದರೆ ಟೆಕ್ ಪಾರ್ಕ್ ಒಂದು ದ್ವೀಪವಾಗಿ ಪರಿಣಮಿಸುತ್ತದೆ. ಈ ಭಾಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಮುಖ್ಯರಸ್ತೆಯನ್ನು ಬಂದ್ ಮಾಡಿದ್ದು ಸರ್ವಿಸ್ ರೋಡಲ್ಲಿ ವಾಹನಗಳು ಸಂಚರಿಸುತ್ತವೆ. ಇದೇ ರೋಡಲ್ಲಿ ಎರಡು ಆಟೋ ಗೂಡ್ಸ್ ಕ್ಯಾರಿಯರ್ ಗಳು ರಸ್ತೆಗುಂಡಿಯ ಕಾರಣ ಮುಗುಚಿ ಬೀಳುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ