ನಮ್ಮಿಂದ ಸಿಎಂ ಆದವರು ನಮ್ಮನ್ನು ಕೊಚ್ಚೆ ಎಂದರೆ ಅವರು ಸಹ ಕೊಚ್ಚೆ ಅಲ್ವಾ? ಹೆಚ್ ಸಿ ಬಾಲಕೃಷ್ಣ
ಒಕ್ಕಲಿಗರ ಧೀಮಂತ ನಾಯಕ ಮತ್ತು ಮಾಜಿ ಪ್ರಧಾನಿಯಾಗಿರುವ ಹೆಚ್ ಡಿ ದೇವೇಗೌಡ ಅವರು ರಾಜ್ಯದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರನ್ನು, ನೂರು ರೂಪಾಯಿಗಳಿಗೆ ರೌಡಿಯೊಬ್ಬನ ಬಳಿ ಕೆಲಸಕ್ಕಿದ್ದೋನು, ರೌಡಿಗಳಿಗೆ ಟೀ ಸರಬರಾಜು ಮಾಡುತ್ತಿದದವನು ಅಂತ ಹೇಳೋದು ಸರಿಯೇ ಎಂದು ಬಾಲಕೃಷ್ಣ ಪ್ರಶ್ನಿಸಿದರು.
ಬೆಂಗಳೂರು: ಬಿಎಸ್ ಯಡಿಯೂರಪ್ಪನವರು ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಏನೆಲ್ಲ ಮಾತಾಡಿದಾಗ, ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪ ಅಲ್ಲ; ಪುಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ ಮತ್ತು ಜಮೀರ್ ಅಹ್ಮದ್ ಅವರ ನೆರವಿನಿಂದ ಸಿಎಂ ಆಗಿದ್ದು ಅಂತ ಹೇಳಿದ್ದರು, ಈಗ ನಾವು ನಾಲ್ವರನ್ನು ಕುಮಾರಸ್ವಾಮಿ ಕೊಚ್ಚೆ ಅನ್ನುತ್ತಾರೆಂದರೆ ಸರಿ, ಕೊಚ್ಚೆಯನ್ನು ತಬ್ಬಿಕೊಂಡ ಅವರು ಸಹ ಕೊಚ್ಚೆ ತಾನೇ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪುಟ್ಟರಾಜು ಮಂಡ್ಯಕ್ಕೆ ಅಭ್ಯರ್ಥಿ ಅಂತ ಫಿಕ್ಸ್ ಆಗಿತ್ತು, ಕೊನೆ ಘಳಿಗೆಯಲ್ಲಿ ಕುಮಾರಸ್ವಾಮಿ ಮದುವೆ ಗಂಡಾದರು: ಬಾಲಕೃಷ್ಣ
Latest Videos