ಬೈಕ್ಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಬೊಲೆರೋ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಬೊಲೆರೋ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿಯಲ್ಲಿ ನಡೆದಿದೆ.

ಅಪಘಾತದ ಭೀಕರ ದೃಶ್ಯಗಳು
ಹಾವೇರಿ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಬೊಲೆರೋ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರರಾದ ಮಂಜು ಸೋಮನಕಟ್ಟಿ ಹಾಗೂ ಬಸವರಾಜ ವಾಲ್ಮೀಕಿ ಅಸು ನೀಗಿದ್ದಾರೆ.
ಮೃತರು ಜಿಲ್ಲೆಯ ಗಣಜೂರು ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಸವಾರರು ಕದರಮಂಡಲಗಿ ದೇಗುಲಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ.
ಮುಳಬಾಗಿಲು ಬಳಿ ಕಾರು ಪಲ್ಟಿ: 8 ವರ್ಷದ ಬಾಲಕಿ ಸ್ಥಳದಲ್ಲೇ ಸಾವು