ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ ಆರೋಪ; ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

| Updated By: ಆಯೇಷಾ ಬಾನು

Updated on: Jun 16, 2021 | 9:01 AM

ಮೈಸೂರು ವಿವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗಿದೆ ಎಂದ ಹೇಳಲಾಗುತ್ತಿತ್ತು. ಏಪ್ರಿಲ್ 15, 22ರಂದು ಪ್ರಸಕ್ತ ಸಾಲಿನ ಪರೀಕ್ಷೆ ನಡೆದಿತ್ತು. ಪರೀಕ್ಷೆ ಮುಗಿದ ಬಳಿಕ ಬಿ‌ಎಸ್ಸಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಚಂದನ್, ಚೇತನ್, ಇತರೆ ವಿದ್ಯಾರ್ಥಿಗಳು ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಬರೆದಿದ್ದರು.

ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ ಆರೋಪ; ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್
ಮೈಸೂರು ವಿವಿ
Follow us on

ಮೈಸೂರು: ಮೈಸೂರು ವಿವಿ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಅಕ್ರಮ ಜಾಲ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ಇಬ್ಬರು ವಿದ್ಯಾರ್ಥಿಗಳ ಬಂಧನವಾಗಿದೆ. ಬಿಎಸ್ಸಿ ವಿದ್ಯಾರ್ಥಿಗಳಾದ ಚಂದನ್, ಚೇತನ್ ಅರೆಸ್ಟ್ ಆದವರು. ಲಾಡ್ಜ್‌ನಲ್ಲಿ ಪರೀಕ್ಷೆ ಬರೆಸಿದ್ದ ಕಿಂಗ್‌ಪಿನ್ ಮೊಹಮ್ಮದ್ ನಿಸಾರ್‌ಗಾಗಿ ಹುಡುಕಾಟ ನಡೆಯುತ್ತಿದೆ. ಬಂಧಿತ ವಿದ್ಯಾರ್ಥಿಗಳು ಕಳೆದ 2 ವರ್ಷಗಳಿಂದ ಅನುತ್ತೀರ್ಣರಾಗಿದ್ದರು ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ
ಮೈಸೂರು ವಿವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಲಾಡ್ಜ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗಿದೆ ಎಂದ ಹೇಳಲಾಗುತ್ತಿತ್ತು. ಏಪ್ರಿಲ್ 15, 22ರಂದು ಪ್ರಸಕ್ತ ಸಾಲಿನ ಪರೀಕ್ಷೆ ನಡೆದಿತ್ತು. ಪರೀಕ್ಷೆ ಮುಗಿದ ಬಳಿಕ ಬಿ‌ಎಸ್ಸಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಚಂದನ್, ಚೇತನ್, ಇತರೆ ವಿದ್ಯಾರ್ಥಿಗಳು ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಬರೆದಿದ್ದರು. ಈ ಪ್ರಕರಣ ಸಂಬಂಧ ಈಗ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನಿಸಾರ್, ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ, ರಾಕೇಶ್, ಚಂದನ್, ಚೇತನ್, ಬ್ಲೂ ಡೈಮಂಡ್ ಲಾಡ್ಜ್ ಮಾಲೀಕನ ವಿರುದ್ಧ ಕೇಸ್ ದಾಖಲಾಗಿದೆ. ಪರೀಕ್ಷೆ ನಡೆಯುವಾಗ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ದಾಳಿ ಮಾಡಿ ಆರೋಪಿಗಳ ಹೇಳಿಕೆ ಪಡೆದು ಆರೋಪಿಗಳನ್ನು ಬಿಟ್ಟ ಆರೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ವಿರುದ್ಧವೂ FIR ದಾಖಲಾಗಿದೆ. ಸೆಕ್ಷನ್ 420, 406, 408, 470, 471, 472, 473, 474 ಸೇರಿ ಹಲವು ಸೆಕ್ಷನ್‌ಗಳಡಿ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Gourd Juice Side Effects: ಸೋರೆಕಾಯಿ ಜ್ಯೂಸ್​ ಸೇವಿಸುವ ಮೊದಲು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ