ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಬಿರುಕು, ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್

ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಅದ್ಯಾಕೋ ಗೊತ್ತಿಲ್ಲ ಅಸಮಾಧಾನ ಸ್ಪೋಟವಾಗಿದೆ. ರಾಜ್ಯ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇಬೇಕು ಅಂತ ಪಟ್ಟು ಹಿಡಿದು ಸರ್ಕಾರಕ್ಕೆ ಸೆಡ್ಡು ಹೊಡೆದು ಅಸ್ತಿತ್ವಕ್ಕೆ ಬಂದಿದ್ದ ಸಂಘಟನೆಯಲ್ಲಿ ಈಗ ಉಚ್ಚಾಟನೆ ಮತ್ತು ರಾಜೀನಾಮೆ ಪರ್ವ ಆರಂಭವಾಗಿದೆ.

ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಬಿರುಕು, ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್
ಕೆಎಸ್​ಆರ್​ಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 16, 2021 | 8:31 AM

ಬೆಂಗಳೂರು: ರಾಜ್ಯ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಪ್ರತಿಭಟನೆ ಮಾಡಿ ಸಾರಿಗೆ ಬಂದ್ ಮಾಡಿಸಿದ್ದ ನೌಕರರ ಕೂಟದಲ್ಲಿ ಬಿರುಕು‌ ಮೂಡಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಎರಡು ಬಾರಿ ರಾಜ್ಯಾದ್ಯಂತ ಸಂಪೂರ್ಣ ಸಾರಿಗೆ ಮುಷ್ಕರ ಮಾಡಿ ಬಸ್ ಸಂಚಾರ ಸ್ಥಗಿತಗೊಳಿದ್ದ ಒಕ್ಕೂಟದಲ್ಲಿ ಇಂದು ಭಿನ್ನಮತ ಸ್ಫೋಟಗೊಂಡಿದೆ. ಸಾರಿಗೆ ನೌಕರರ ಕೂಟದ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಕಾರ್ಯಕಾರಣಿ ಸಭೆ ಮಾಡಿ, ಜಂಟಿ ಕಾರ್ಯದರ್ಶಿಯಾಗಿದ್ದ ಆನಂದ್ ಅವ್ರನ್ನ ಕೂಟದಿಂದ ಉಚ್ಛಾಟನೆ ಮಾಡಲಾಗಿದೆ. ಆನಂದ್ ಸಾರಿಗೆ ನೌಕರರ ಕೂಟದಲ್ಲಿ ವಿರೋಧಿ ಚಟುವಟಿಕೆಗಳನ್ನೂ ಮಾಡ್ತಿದ್ದಾರೆ ಅಂತಾ ಉಚ್ಛಾಟಿಸಲಾಗಿದ್ಯಂತೆ.

ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್ ಇನ್ನೂ ಸಾರಿಗೆ ನೌಕರರ ಕೂಟದ ಈ ನಿರ್ಧಾರದ ವಿರುದ್ಧ ಆನಂದ್ ಪರ ಇರೋ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರಾದ ಚಂದ್ರಶೇಖರ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ, ನೌಕರರ ಕೂಟದಲ್ಲಿ ರಾಜಕೀಯ ಶುರುವಾಗಿದೆ ಅಂತಾ ರಾಜೀನಾಮೆ ನೀಡಿದ್ದಾರೆ. ಸಾರಿಗೆ ಕೂಟದ ಪ್ರಚಾರ ಸಮಿತಿಯ ಅಧ್ಯಕ್ಷ ಹೆಚ್.ಜಿ. ನಾಗೇಂದ್ರ, ಕಾರ್ಯದರ್ಶಿಯಾದ ಚೇತನ್ ರಾಜ್, ರಾಜ್ಯ ಖಜಾಂಚಿ ಜಗದೀಶ್ ಹೆಚ್.ಆರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಷ್ಟಲ್ಲದೆ ಸಾರಿಗೆ ಕೂಟದ ಒಕ್ಕಲಿಗರ ಸಮಿತಿ ಹಾಗೂ ಎಸ್ಸಿ ಎಸ್ ಟಿ ಸಮಿತಿಯವರು ಸೇರಿದಂತೆ ಪದಾಧಿಕಾರಿಗಳು ರಾಜಿನಾಮೆ ನೀಡಲು ನಿರ್ಧಾರ ಮಾಡಿದ್ದಾರೆ.

ಒಟ್ನಲ್ಲಿ ಚಂದ್ರಶೇಖರ್ ಌಂಡ್ ಟೀಮ್ ಆನಂದ್ ಸಂಘ ವಿರೋಧಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿದ್ರು ಅಂತಿದ್ರೆ ಇತ್ತ ಆನಂದ್ ಌಂಡ್ ಟೀಮ್ ಮಾತ್ರ ಚಂದ್ರು ಸರ್ವಾಧಿಕಾರಿ ಎನ್ನುತ್ತಿದೆ. ಈ ನಡುವೆ ಇವ್ರನ್ನು ನಂಬಿ ಸಾರಿಗೆ ಸಂಸ್ಥೆಯನ್ನು ಎದುರು ಹಾಕಿಕೊಂಡ ನೌಕರರು ಬಲಿಯಾದ್ರಾ ಅಥವಾ ನೌಕರರಿಗೆ ನ್ಯಾಯ ಕೊಡಿಸಲು ಹೋದ ಕೋಡಿಹಳ್ಳಿ ಚಂದ್ರಶೇಖರ್ ಪ್ರಯತ್ನ ಠುಸ್ ಆಗುತ್ತಾ ಅನ್ನೋದೇ ನೌಕರರ ಮುಂದಿರೋ ಪ್ರಶ್ನೆಯಾಗಿದೆ.

ಇದನ್ನೂ ಓದಿ: Petrol Price Today: ಇಂದು ಸಹ ಏರಿಕೆಯಾದ ಪೆಟ್ರೋಲ್​, ಡೀಸೆಲ್​ ಬೆಲೆ; ಬೆಂಗಳೂರಿನಲ್ಲಿ ಶತಕ ಬಾರಿಸುವ ನಿರೀಕ್ಷೆ

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ