ಗೋಮಾತೆಯನ್ನು ಪೂಜಿಸುವ ನಾಡಿನಲ್ಲಿ ಅದರ ಕೆಚ್ಚಲು ಕೊಯ್ಯುವ ದುಷ್ಕೃತ್ಯ ನಡೆದಿದೆ: ಬಿವೈ ವಿಜಯೇಂದ್ರ
ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯ ಹೇಳುತ್ತ ಮಾತು ಆರಂಭಿಸಿದ ವಿಜಯೇಂದ್ರ ಪೊಲೀಸರು ಯಾರೋ ಒಬ್ಬ ಅಮಾಯಕನನ್ನು ಬಂಧಿಸಿ ಕಣ್ಣೊರೆಸುವ ಕೆಲಸ ಮಾಡಿದ್ದಾರೆ, ಆದರೆ ಇದರ ಹಿಂದೆ ದೊಡ್ಡ ಕುತಂತ್ರ ಅಡಗಿದೆ, ಈ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಖಂಡಿತ ಒಳ್ಳೆಯದನ್ನು ಮಾಡಲ್ಲ ಎಂದ ವಿಜಯೇಂದ್ರ ಹೇಳಿದರು.
ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ರಾಜ್ಯ ಬಿಜೆಪಿ ಘಟಕ ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಮುಂದಾಗಿದೆ. ಬಿವೈ ವಿಜಯೇಂದ್ರ, ಆರ್ ಅಶೋಕ, ಪಿಸಿ ಮೋಹನ್ ಮತ್ತು ಇನ್ನೂ ಕೆಲ ಮುಖಂಡರು ಚಾಮರಾಜಪೇಟೆಯಲ್ಲಿರುವ ಹಸುಗಳ ಮಾಲೀಕ ಕರ್ಣರನ್ನು ಭೇಟಿಯಾಗಿ ಧೈರ್ಯ ಹೇಳಿದರು. ಗೋಮಾತೆಯನ್ನು ಪೂಜಿಸುವ ನಾಡಿನಲ್ಲಿ ದುರುಳರು ಹಸುವಿನ ಕೆಚ್ಚಲು ಕೊಯ್ದಿರುವುದು ಅಕ್ಷಮ್ಯ ಅಪರಾಧ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ರಾಜ್ಯದಲ್ಲಿ ಹಸುಗಳ ರಕ್ಷಣೆಯಾಗುತ್ತಿಲ್ಲ, ಯಾರಿಗೂ ಒಳ್ಳೆಯದನ್ನು ಮಾಡದ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಜಮೀರ್ ಅಹ್ಮದ್ ಕಾರಣ, ಭಾಸ್ಕರ್ ರಾವ್
Latest Videos