ಉಡುಪಿ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು: ನಾರ್ವೆಗೆ ಹೊರಟಿತು ಬೃಹತ್ ಹಡಗು

| Updated By: Ganapathi Sharma

Updated on: Dec 18, 2024 | 7:43 AM

ಭಾರತದಿಂದ ನಾರ್ವೆ ದೇಶಕ್ಕೆ ಬೃಹತ್ ಹಡಗು ರವಾನೆಗೆ ಸಿದ್ಧವಾಗಿದೆ. ಭಾರತದ ಜೊತೆ ನಾರ್ವೆ ಸುಮಾರು 2000 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಆತ್ಮ ನಿರ್ಭರ ಭಾರತ - ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿ ಹಡಗು ಪೂರೈಕೆ ಮಾಡಬೇಕಿದೆ. ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಿರ್ಮಾಣ ಮಾಡಿದ ಮೊದಲ ಹಡಗು ಪಾಶ್ಚಿಮಾತ್ಯ ದೇಶದ ಕಡೆ ಮುಖ ಮಾಡಿದೆ.

ಉಡುಪಿ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು: ನಾರ್ವೆಗೆ ಹೊರಟಿತು ಬೃಹತ್ ಹಡಗು
ಉಡುಪಿಯಿಂದ ನಾರ್ವೆಗೆ ಹೊರಟ ಹಡಗು
Follow us on

ಉಡುಪಿ, ಡಿಸೆಂಬರ್ 18: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ ದೇಶಕ್ಕೆ 3800 TDW ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆಯ ವಿಲ್ಸನ್ ಎಎಸ್ ಕಂಪನಿಯ ಸಿಬ್ಬಂದಿಗಳು ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್​​ಗೆ ಬಂದು ಖರೀದಿ ಪ್ರಕ್ರಿಯೆಯನ್ನು ಪೂರೈಸಿದರು. ಒಪ್ಪಂದಕ್ಕೆ ಸಹಿ ಹಾಕುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ ತೆಂಗಿನಕಾಯಿ ಒಡೆದು, ಮಾಲೆ ಹಾಕಿ, ಪ್ರಸಾದ ಹಚ್ಚಿ ಆರತಿ ಎತ್ತಿ ಪೂಜೆ ಮಾಡಲಾಯಿತು.

02_89.43 ಉದ್ದ, 13.2 ಮೀಟರ್ ಅಗಲದ ಹಡಗು 4.2 ಮೀಟರ್ ಡ್ರಾಫ್ಟ್ ಹೊಂದಿದೆ. ಸರಕು ಸಾಗಾಣಿಕೆ ಮಾಡುವ ಪರಿಸರ ಸ್ನೇಹಿ ಹಡಗು ಇದಾಗಿದೆ. ಮೊದಲ ಬಾರಿಗೆ ಉಡುಪಿಯಿಂದ ನಾರ್ವೆಗೆ ಹಡಗು ಪೂರೈಸಲಾಗುತ್ತಿದೆ. ಈ ಹಡಗನ್ನು ವಿಭಿನ್ನ ಶೈಲಿಯಲ್ಲಿ ತಯಾರಿಸಲಾಗಿದೆ.

ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಹಡಗು ಪೂರೈಕೆ

ಆತ್ಮ ನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಈ ಬೃಹತ್ ನೌಕೆ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್​ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1000ಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಉದ್ಯೋಗ ಪಡೆದಿದ್ದಾರೆ.

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಿರ್ಮಿಸಿದ ಹಡಗು

ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ಪ್ರಪಂಚದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ 10 ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5 ರ ಗುರಿಮುಟ್ಟುವ ಗುರಿಯನ್ನು ಭಾರತ ಸರಕಾರ ಹಾಕಿಕೊಂಡಿದೆ.

ಇದನ್ನೂ ಓದಿ: ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ, ರಾತ್ರಿ 1 ಗಂಟೆವರೆಗೂ ನಡೆದ ಅಧಿವೇಶನ: ದಶಕದ ಬಳಿಕ ದಾಖಲೆ

ನಾರ್ವೆ ದೇಶದ ವಿಲ್ಸನ್ ಎಎಸ್ ಕಂಪನಿಯು ಒಟ್ಟು 14 ಹಡಗುಗಳನ್ನು ನಿರ್ಮಿಸಿ ಪೂರೈಸುವಂತೆ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ಗೆ ಮನವಿ ಮಾಡಿದ್ದು, ಒಪ್ಪಂದ ಮಾಡಿಕೊಂಡಿದೆ. ಅದರಂತೆ ಮೊದಲ ಹಡಗು ಈಗ ಪೂರೈಕೆಯಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 am, Wed, 18 December 24