ಬೆಂಗಳೂರು-ಮೈಸೂರು ರೈಲು ಕೆಲ ದಿನ 90 ನಿಮಿಷ ತಡವಾಗಿ ಸಂಚಾರ, 116 ರೈಲು ಗಾಡಿಗಳ ಸಂಖ್ಯೆ ಬದಲು

ಬೆಂಗಳೂರು-ಮೈಸೂರು ರೈಲು ಕೆಲ ದಿನಗಳ ಕಾಲ 90 ನಿಮಿಷ ತಡವಾಗಿ ಸಂಚರಿಸಲಿದೆ. ನೈಋತ್ಯ ರೈಲ್ವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಕೆಂಗೇರಿ ನಡುವೆ ನಿರ್ವಹಣಾ ಕಾಮಗಾರಿಗಳನ್ನು ನಡೆಸುತ್ತಿದೆ. ಹಲವು ವಿಶೇಷ ರೈಲುಗಳಿಗೆ ಜನವರಿ 1ರಿಂದ ನಿಯಮಿತ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಹೊಸ ರೈಲು ಸಂಖ್ಯೆಗಳನ್ನು SWR ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಬೆಂಗಳೂರು-ಮೈಸೂರು ರೈಲು ಕೆಲ ದಿನ 90 ನಿಮಿಷ ತಡವಾಗಿ ಸಂಚಾರ, 116 ರೈಲು ಗಾಡಿಗಳ ಸಂಖ್ಯೆ ಬದಲು
ಎಸ್​ಎಂವಿಟಿ ಬೆಂಗಳೂರು
Follow us
ವಿವೇಕ ಬಿರಾದಾರ
|

Updated on:Dec 18, 2024 | 8:26 AM

ಬೆಂಗಳೂರು, ಡಿಸೆಂಬರ್​ 18: ಬೆಂಗಳೂರು-ಮೈಸೂರು (Bengaluru-Mysore) ರೈಲು (Train) ಕೆಲ ದಿನಗಳ ಕಾಲ 90 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ (South Western Railway) ಪ್ರಕಟಣೆಯಲ್ಲಿ ತಿಳಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರೈಲು ತಡವಾಗಿ ಹೊರಡಲಿದೆ.

ಎಸ್​ಎಂವಿಟಿ ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಜರ್‌ ವಿಶೇಷ ರೈಲು (08270) ಡಿಸೆಂಬರ್​ 22, 24, 27, 29, 31 ಹಾಗೂ 2025 ಜನವರಿ 3 ಮತ್ತು 5 ರಂದು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಹೊರಡಲಿದೆ.

ಇದೇ ರೈಲು (06270) ಡಿಸೆಂಬರ್​ 26, ಮತ್ತು ಜನವರಿ 2 ರಂದು 30 ನಿಮಿಷ ತಡವಾಗಿ ಹೊರಡಲಿದೆ.

116 ವಿಶೇಷ ರೈಲು ಗಾಡಿಗಳ ಸಂಖ್ಯೆ ಬದಲು

ಪ್ರಯಾಣಿಕರಲ್ಲಿನ ಗೊಂದಲ ನಿವಾರಿಸಲು ನೈಋತ್ಯ ರೈಲ್ವೆಯು 116 ವಿಶೇಷ ಪ್ರಯಾಣಿಕ ರೈಲುಗಳಿಗೆ 2025ರ ಜನವರಿ 1ರಿಂದ ನಿಯಮಿತ ರೈಲುಗಳ ಸಂಖ್ಯೆ ನೀಡುತ್ತಿದೆ. ಈವರೆಗೆ ವಿಶೇಷ ರೈಲುಗಳ ಸಂಖ್ಯೆ ‘0’ (ಸೊನ್ನೆ) ಸಂಖ್ಯೆಯಿಂದ ಪ್ರಾರಂಭವಾಗುತ್ತಿತ್ತು. ಇನ್ಮುಂದೆ ಈ ರೈಲುಗಳ ಸಂಖ್ಯೆ “5,6,7” ರಿಂದ ಆರಂಭವಾಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್​ ವ್ಯತ್ಯಯ

ಕೋವಿಡ್ ಸಂದರ್ಭದಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ರದ್ದುಗೊಂಡು ಬಳಿಕ ಪುನಃ ವಿಶೇಷ ರೈಲುಗಳಾಗಿ ಇವು ಸಂಚಾರ ಮಾಡುತ್ತಿದ್ದವು. ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ವಿಶೇಷ ರೈಲುಗಳ ಟಿಕೆಟ್ ಶುಲ್ಕ ಹೆಚ್ಚು ಹಾಗೂ ಪದೇ ಪದೇ ಸಂಚಾರ ಅವಧಿ ವಿಸ್ತರಿಸಬೇಕಾದ ಕಾರಣ ಮುಂಗಡ ಬುಕ್ಕಿಂಗ್ ಕೂಡ ಸಮಸ್ಯೆ ಆಗುತ್ತದೆ. ಕಳೆದ ಲೋಕ ಸಭೆ ಚುನಾವಣೆ ವೇಳೆ ಸಂದರ್ಭದಲ್ಲಿ ಈ ರೈಲುಗಳನ್ನು ನೈಋತ್ಯ ರೈಲ್ವೆ ವಲಯವು ನಿಯಮಿತ ರೈಲುಗಳಾಗಿ ಪರಿವರ್ತಿಸಿ ಓಡಿಸುತ್ತಿದೆ. ಅದಾಗಲೇ ಈ ರೈಲುಗಳ ದರ ಹಿಂದಿನಂತೆ ಕಡಿಮೆಗೊಂಡಿದೆ.

ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು ಪ್ರಯಾಣಿಕರು https://swr.indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 am, Wed, 18 December 24

ಜಪ ಮಾಲೆಯಲ್ಲಿನ 108 ಮಣಿಗಳ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
ಜಪ ಮಾಲೆಯಲ್ಲಿನ 108 ಮಣಿಗಳ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ