ಉಡುಪಿ: ಚಾಕೊಲೇಟ್ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ(6) ಮೃತ ಬಾಲಕಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದು, ಶಾಲಾ ಬಸ್‌ಗೆ ಕಾಯುತ್ತಿದ್ದಾಗ ಚಾಕೊಲೇಟ್ ತಿಂದಿದ್ದಾಳೆ. ಈ ವೇಳೆ ಬಾಲಕಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸಮನ್ವಿ ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದಳು. ಹೀಗಾಗಿ ಪೋಷಕರು ಚಾಕಲೇಟ್ ಕೊಟ್ಟು ಶಾಲೆಗೆ ಹೋಗಲು ಒಪ್ಪಿಸಿದ್ದಾರೆ. ಬಾಲಕಿ ಚಾಕಲೇಟ್ ಬಾಯಲಿಟ್ಟುಕೊಂಡು ತಾಯಿ ಕೈಹಿಡಿದು ಹೋಗಿ, ಶಾಲಾ ಬಸ್ ಹತ್ತಿಸುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ಬಾಲಕಿ ಬೀಳುತ್ತಿದ್ದಂತೆ ಬಾಯಿಂದ ಚಾಕಲೇಟ್ ಹೊರಗೆ ಬಿದ್ದಿದೆ. ನಂತರ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಮೃತದೇಹ ಮಣಿಪಾಲ ಶವಾಗಾರಕ್ಕೆ ರವಾನೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಖರತೆಯನ್ನು ವೈದ್ಯರು ಹೇಳಲಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ
ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದ್ದು, ಬಿಮ್ಸ್ ಆಸ್ಪತ್ರೆ ಎದುರು ಮಗುವಿನ ಪೋಷಕರ ಪ್ರತಿಭಟನೆ ಮಾಡುತ್ತಿದ್ದಾರೆ. ಗರ್ಭಿಣಿ ಸುನಿತಾ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡರು ವೈದ್ಯರು ನಿರ್ಲಕ್ಷವಹಿಸಿದ್ದಾರೆಂದು ಆರೋಪಿಸಲಾಗಿದೆ. ಗರ್ಭಿಣಿ ಸುನಿತಾ ನಿನ್ನೆ (ಜುಲೈ 19) ಇಡೀ ದಿನ ಹೊಟ್ಟೆನೋವಿನಿಂದ ಪರದಾಡಿದ್ದಾರೆ.
ಹೊನ್ನಿಹಾಳ ಗ್ರಾಮದ ನಿವಾಸಿ ಸುನಿತಾ ಎಂಟು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆಯಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ವೇಳೆ ಸಿಜೇರಿಯನ್ ಮಾಡುವಂತೆ ಮನವಿ ಮಾಡಿದರೂ ವೈದ್ಯರು ನಿರ್ಲಕ್ಷ್ಯಹಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇಂದು (ಜುಲೈ 20) ಹರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಒಂಬತ್ತು ತಿಂಗಳು ಒಂಬತ್ತು ದಿನ ಆದರೂ ಸೀಜರಿನ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಸೀಜರಿನ್ ಮಾಡದೆ ನಿರ್ಲಕ್ಷ್ಯ ತೋರಿ ಇಂದು ಮಗು ಸಾಯಿಸಿದ್ದಾರೆ. ನಮಗೆ ಜೀವಂತ ಮಗು ಕೊಡಿ ಅಂತ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿದ್ದಾರೆ.
Published On - 3:24 pm, Wed, 20 July 22