ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ

ಉಡುಪಿಯಲ್ಲಿ ಹಾಡಹಗಲೇ ನಿಂತುಕೊಂಡಿದ್ದ ಕಾರು ಅಲ್ಲಾಡುತ್ತಿರುವುದನ್ನು ನೋಡಿದ ಜನ ಒಂದು ಕ್ಷಣ ಗಾಬರಿಯಾಗಿದ್ದಾರೆ. ಕಾರಿನ ಅಲುಗಾಟ ನೋಡಿದ ಸ್ಥಳಿಯರು ಹತ್ತಿರ ಹೋಗಿ ಬಾಗಿಲು ತೆರೆದು ನೋಡಿದಾಗ ಜೋಡಿಯ ರಾಸಲೀಲೆ ದರ್ಶನವಾಗಿದೆ.

ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ
ಕಾರಿನಲ್ಲಿ ರಾಸಲೀಲೆ

Updated on: Aug 08, 2024 | 10:58 PM

ಉಡುಪಿ (ಆಗಸ್ಟ್.07): ಉಡುಪಿಯ ನಗರಸಭೆ ಸಮೀಪದ ರಸ್ತೆಯಲ್ಲಿ ಹಾಡಹಗಲಲ್ಲೇ ಜೋಡಿಯೊಂದು ಕಾರಿನೊಳಗೆ ರತಿಕ್ರೀಡೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಹೌದು.. ನಿಂತಲ್ಲೇ ನಿಂತುಕೊಂಡಿದ್ದ ಕಾರು ಏಕಾಏಕಿ ಅಲ್ಲಾಡಲು ಶುರು ಮಾಡಿದೆ. ಇದನ್ನು ಸ್ಥಳೀಯರು ಕೆಲ ಸಮಯ ಗಾಬರಿಯಿಂದ ನೋಡುತ್ತ ನಿಂತಿದ್ದಾರೆ. ಆದರೂ ಸಹ ಅಕ್ಕಪಕ್ಕ ಯಾರು ಇಲ್ಲದೇ ಕಾರು ತನ್ನಷ್ಟಕ್ಕೆ ತಾನೇ ಮತ್ತಷ್ಟು ಅಲುಗಾಡತ್ತಲೇ ಇತ್ತು. ಕೊನೆಗೆ ಜನರು ಕುತೂಹಲದಿಂದ ಕಾರಿನ ಹತ್ತಿರ ಹೋಗಿ ಬಾಗಿಲು ತೆಗೆದಿದ್ದಾರೆ. ಆಗ ಯುವಕ-ಯುವತಿ ಕಾರಿನೊಳಗೆ ಏಕಾಂತದಲ್ಲಿರುವುದು ಕಂಡುಬಂದಿದೆ. ಕಾರಿನ ಡೋರ್ ಗ್ಲಾಸ್​ ಮರೆಮಾಚಿ ರಾಸಲೀಲೆಯಲ್ಲಿ ತೊಡಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಛೀಮಾರಿ ಹಾಕಿದ್ದಾರೆ.

ಅತಿ ಹೆಚ್ಚು ಜನರು ಸಂಚಾರ ಮಾಡುವ ನಗರಸಭೆಯ ಸಮೀಪದಲ್ಲಿಯೇ ಇರುವ ರಸ್ತೆಯಲ್ಲಿ ಕಾರು ಅಲ್ಲಾಡುವುದನ್ನು ನೋಡಿ ಜನರು ಕಿಟಕಿಯಿಂದ ಇಣುಕಿ ಹಾಕಿದ್ದಾರೆ. ಆದರೆ, ಕಾರಿಗೆ ಕಿಟಕಿಗಳಿಗೆ ಪರದೆಯ ರೀತಿಯಲ್ಲಿ ಬಟ್ಟೆಯನ್ನು ಹೊದಿಸಲಾಗಿತ್ತು. ಹಾಗಾಗಿ, ಹೊರಗಡೆ ಇದ್ದವರಿಗೆ ಒಳಗೆ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗಿಲ್ಲ. ಬಳಿಕ ಜನರು ಡೋರ್​ ತೆಗೆಯಲು ಪ್ರಯತ್ನಿಸಿದ್ದಾರೆ. ಬಳಿಕ ಕಾರಿನೊಳಗಿದ್ದ ಜೋಡಿ ಬಟ್ಟೆ ಸರಿ ಮಾಡಿಕೊಂಡು ಡೋರ್ ಓಪನ್ ಮಾಡಿದೆ. ಆಗ ಸಾರ್ವಜನಿಕರಿಗೆ ಕಾರಿನೊಳಗಿದ್ದ ಯುವಕ-ಯುವತಿಯ ದರ್ಶನವಾಗಿದೆ.

ಇದನ್ನೂ ಓದಿ: ಋತುಚಕ್ರದ ದಿನಗಳಲ್ಲೂ ಬಿಡಲ್ಲ: ಗಂಡನ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಮೆಟ್ಟಿಲೇರಿದ ಪತ್ನಿ

ಕಾರಿನೊಳಗೆ ಕಾಮದಾಟದಲ್ಲಿ ತೊಡಗಿದ್ದ ಜೋಡಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಜನರು ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜನರು,  ಸಾರ್ವಜನಿಕರ ಸ್ಥಳದಲ್ಲಿ ಅನೈತಿಕ ಚಟುವಟಿಕೆ ನಡೆಸಿ, ಮುಜುಗರ ಉಂಟು ಮಾಡಿದ್ದಾರೆಂದು  ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಬಳಿಕ ಜೋಡಿಯನ್ನು ಪೊಲೀಸರು  ಠಾಣೆಗೆ ಕರೆದುಕೊಂಡು ಹೋದರು. ಅತ್ತ ಜೋಡಿ ಠಾಣೆಗೆ ಹೋಗುತ್ತಿದ್ದಂತೆಯೇ ಇತ್ತ ಜನರು ಕಾರಿನಲ್ಲಿ ಏನಿದೆ ಎಂದು ಕುತೂಹಲದಿಂದ ಇಣುಕಿ ಇಣುಕಿ ನೋಡಿದ್ದಾರೆ. ಆಗ ಕಾರಿನೊಳಗೆ ಬಿಚ್ಚಿಟ್ಟಿದ್ದ ಪ್ಯಾಂಟ್ ಸಹ ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ