AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಚಕ್ರದ ದಿನಗಳಲ್ಲೂ ಬಿಡಲ್ಲ: ಗಂಡನ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಮೆಟ್ಟಿಲೇರಿದ ಪತ್ನಿ

ಕಟ್ಟಿಕೊಂಡ ಗಂಡನೇ ಪತ್ನಿಯ ಬಳಿ ವಿಕೃತಿ ಮೆರೆದಿರುವ ಅಮಾನುಷ ಘಟನೆ ಶಿಡ್ಲಘಟ್ಟ ನಗರದ ಪಿಲೇಚರ್ಸ್ ಕ್ವಾಟ್ರಸ್‍ನಲ್ಲಿ ನಡೆದಿದೆ. ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳಿವೆ. ಆದರೂ ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ. ಇನ್ನು ಲೈಂಗಿಕ ಜಾಲತಾಣಗಳ ವೀಡಿಯೋ, ಪೋಟೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು ಎಂದು ಕಿರುಕುಳ ನೀಡುತ್ತಿದ್ದ ಹಿನ್ನಲೇ ನ್ಯಾಯಕ್ಕಾಗಿ ಇದೀಗ ಆತನ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಋತುಚಕ್ರದ ದಿನಗಳಲ್ಲೂ ಬಿಡಲ್ಲ: ಗಂಡನ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಮೆಟ್ಟಿಲೇರಿದ ಪತ್ನಿ
ಗಂಡನ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಮೆಟ್ಟಿಲೇರಿದ ಪತ್ನಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Aug 08, 2024 | 7:04 PM

Share

ಚಿಕ್ಕಬಳ್ಳಾಪುರ, ಆ.08: ಜಿಲ್ಲೆಯ ಶಿಡ್ಲಘಟ್ಟ(Sidlaghatta) ನಗರದ ಪಿಲೇಚರ್ಸ್ ಕ್ವಾಟ್ರಸ್‍ನಲ್ಲಿ ವಿಕೃತ ಘಟನೆಯೊಂದು ನಡೆದಿದೆ. ಎಸ್.ಮೊಸಿನ್‍ ಪಾಷ(39) ಎಂಬಾತ ಹೆಂಡತಿಯ ಜೊತೆ ವಿಕೃತವಾಗಿ ವರ್ತಿಸಿದ್ದು, ಆತನ ಕಿರುಕುಳಕ್ಕೆ ಆತನ ತಾಯಿ ಕೂಡ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಇನ್ನು ಇವರಿಗೆ ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳಿವೆ. ಆದರೂ ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ. ಇನ್ನು ಲೈಂಗಿಕ ಜಾಲತಾಣಗಳ ವೀಡಿಯೋ, ಪೋಟೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು, ಹೀಗೆ ಮಾಡು ಎಂದು ವಿಕೃತ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಸಾಲದೆಂಬಂತೆ ಪತ್ನಿಯ ಏಕಾಂತ ಪೋಟೋ, ವೀಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ. ತನ್ನ ವಿಕೃತ ಲೈಂಗಿಕ ಕಿರುಕುಳಕ್ಕೆ ಪತ್ನಿ ಸಾಥ್ ನೀಡುತ್ತಿಲ್ಲವೆಂದು ಪತ್ನಿಯ ಎದುರಲ್ಲೆ ಬೇರೆ ಮಹಿಳೆಯ ಜೊತೆ ವೀಡಿಯೋ ಕಾಲ್ ಮಾಡಿ ವಿಕೃತ ಆನಂದ ಪಡುತ್ತಿದ್ದ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಕೊಲೆಯತ್ನ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ:ಪತ್ನಿಯನ್ನು ಕೊಂದು ಫೇಸ್‌ಬುಕ್‌ ಲೈವ್‌ ಮಾಡಿದ್ದ ಕ್ರೂರ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಸಾವು

ಪತ್ನಿಯ ಋತುಚಕ್ರಕ್ಕೂ ಅಡ್ಡಿಯಾದ ಭಂಡ ಗಂಡ

ಇನ್ನು ಮೊಸಿನ್‍ಪಾಷ ಪತ್ನಿ, ಈತನ ಅತಿಯಾದ ಲೈಂಗಿಕ ಕಿರುಕುಳಕ್ಕೆ ಸ್ಪಂದಿಸದೇ ಇದ್ದಾಗ, ಪತ್ನಿಯ ಋತುಚಕ್ರಕ್ಕೂ ಪಾಪಿ ಅಡ್ಡಿಪಡಿಸುತ್ತಿದ್ದನಂತೆ. ಪತ್ನಿ ಋತುಚಕ್ರವಾದಾಗ ತನ್ನ ಅಭಿಲಾಷೆ ತೀರಿಸುವಂತೆ ಕಿರುಕುಳ ಕೊಡುತ್ತಿದ್ದನಂತೆ.

ಪತ್ನಿಯ ಖಾಸಗಿ ಪೋಟೋ, ವೀಡಿಯೋ ತೆಗೆದು ಮಾರಾಟ ಮಾಡುವ ಬೆದರಿಕೆ

ಬೆಂಗಳೂರಿನಲ್ಲಿ ತನಗೆ ತಿಳಿದಿರುವ ಆಪ್ರಿಕನ್ನರಿದ್ದಾರೆ. ಅವರಿಗೆ 40 ಸಾವಿರ ರೂಪಾಯಿಗೆ ಪತ್ನಿಯನ್ನು ಮಾರಾಟ ಮಾಡಿರುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತಿದ್ದನಂತೆ. ಅಕ್ಕಪಕ್ಕದ ಮನೆಯ ಯುವತಿಯರ, ಹೆಂಗಸರ ಮೊಬೈಲ್ ನಂಬರ್​ಳನ್ನು ತಂದುಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಳೆದ 2024 ಜುಲೈ 26 ರಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಗಂಡನ ಹಲ್ಲೆ ಹಾಗೂ ಕಿರುಕುಳದಿಂದ ಬಚಾವ್ ಆಗಿರುವ ಆತನ ಪತ್ನಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸು ಶಿಡ್ಲಘಟ್ಟಕ್ಕೆ ಆಗಮಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು

ಇನ್ನು ಈ ಘಟನೆಗೆ ಸಂಬಂಧಿಸಿ ಮಹಿಳೆಯ ಬಳಿ ಬಿಎನ್‍ಎಸ್ ಕಾಯ್ದೆ 75, 77, 118(2), 351(2), 351(3) ರೆ/ವಿ 3(5) ರೀತ್ಯಾ ಶಿಡ್ಲಘಟ್ಟ ನಗರಠಾಣೆ ಪಿಎಸ್‍ಐ ವೇಣುಗೋಪಾಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್