ಉಡುಪಿ ಐಆರ್​ಬಿ ಟೋಲ್ ಬಳಿ ಕಾರು ಡಿಕ್ಕಿ! ಸೆಕ್ಯೂರಿಟಿ ಗಾರ್ಡ್ ಸಾವು, ಟೋಲ್ ಸಿಬ್ಬಂದಿ ಗಂಭೀರ

ಉಡುಪಿ ಐಆರ್​ಬಿ ಟೋಲ್ ಬಳಿ ಕಾರು ಡಿಕ್ಕಿ! ಸೆಕ್ಯೂರಿಟಿ ಗಾರ್ಡ್ ಸಾವು, ಟೋಲ್ ಸಿಬ್ಬಂದಿ ಗಂಭೀರ
ಟೋಲ್ ಬಳಿ ಕಾರು ಡಿಕ್ಕಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಘಟನಾ ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44) ಸ್ಥಿತಿ ಗಂಭೀರವಾಗಿದೆ. ಟೋಲ್ ಗೇಟ್​ಗೆ ಕಾರು ಡಿಕ್ಕಿ ಹೊಡೆಯುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9kannada Web Team

| Edited By: sandhya thejappa

Dec 13, 2021 | 12:46 PM

ಉಡುಪಿ: ಬೈಂದೂರು ತಾಲೂಕಿನ ಶಿರೂರು ಐಆರ್​ಬಿ ಟೋಲ್ ಬಳಿ ಕಾರು ಡಿಕ್ಕಿಯಾಗಿ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಟೋಲ್ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ. ಇಂದು (ಡಿಸೆಂಬರ್ 13) ಮುಂಜಾನೆ 2 ಗಂಟೆ ಸುಮಾರಿಗೆ ಕಾರೊಂದು ಟೋಲ್ ಗೇಟ್​ಗೆ ಡಿಕ್ಕಿ ಹೊಡೆದಿದೆ. ಅತೀ ವೇಗದಿಂದ ಬಂದು ಟೋಲ್ ಪ್ಲಾಝಾದ ಬ್ಯಾರಿಕೇಡ್​ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಇನ್ನು ಘಟನಾ ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44) ಸ್ಥಿತಿ ಗಂಭೀರವಾಗಿದೆ. ಟೋಲ್ ಗೇಟ್​ಗೆ ಕಾರು ಡಿಕ್ಕಿ ಹೊಡೆಯುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಬಸ್, ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿ ಬಾಗಲಕೋಟೆ: ಶಾಲಾ ಬಸ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿಯಾಗಿದೆ. ಆದರೆ ನಡೆದ ಅಪಘಾತದಲ್ಲಿ ಸಾವು- ನೋವು ಸಂಭಿಸಿಲ್ಲ. ಬನಹಟ್ಟಿ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಓವರ್‌ಟೇಕ್ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಟ್ರ್ಯಾಕ್ಟರ್‌ಗೆ ಗುದ್ದಿದೆ. ಶಾಲಾ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.

ಟಾಟಾ ಏಸ್, ಕಾರಿನ ಮಧ್ಯೆ ಡಿಕ್ಕಿ; ನಾಲ್ವರಿಗೆ ಗಾಯ ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ಟಾಟಾ ಏಸ್ ನುಗ್ಗಿದೆ. ಟಾಟಾ ಏಸ್‌ಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ನಾಲ್ವರಿಗೆ ಗಾಯವಾಗಿದೆ. ಚಳ್ಳಕೆರೆ ಪಟ್ಟಣದಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ

Income Tax Returns: ಡಿಸೆಂಬರ್​ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆ ಒತ್ತಾಯ

ವೇದಿಕೆಗೆ ಬರುವ ವೇಳೆ ಅಚಾನಕ್ಕಾಗಿ ಉಯ್ಯಾಲೆಯಿಂದ ಬಿದ್ದ ವಧುವರ: ಆಘಾತಕಾರಿ ಘಟನೆಯ ವೀಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada