ರಾಜ್ಯಕ್ಕೆ ಬಂದಿದೆ ಅಪರೂಪದ ನಾಯಿ, ಸೌತ್ ಆಫ್ರಿಕಾ ಮೂಲದ ಆಫ್ರಿಕನ್ ಲಯನ್ ಡಾಗ್

| Updated By: ವಿವೇಕ ಬಿರಾದಾರ

Updated on: Nov 06, 2022 | 6:04 PM

ಆಫ್ರಿಕನ್ ಲಯನ್ ಡಾಗ್ ನಾಲ್ಕು ನಾಯಿಗಳು ಒಂದೆಡೆ ಸೇರಿದರೆ, ಸಿಂಹವನ್ನೇ ಹೊಡೆದು ಕೊಂದುಬಿಡುತ್ತವಂತೆ.

ರಾಜ್ಯಕ್ಕೆ ಬಂದಿದೆ ಅಪರೂಪದ ನಾಯಿ, ಸೌತ್ ಆಫ್ರಿಕಾ ಮೂಲದ ಆಫ್ರಿಕನ್ ಲಯನ್ ಡಾಗ್
ಆಫ್ರಿಕನ್ ಲಯನ್ ಡಾಗ್
Follow us on

ಈ ಜಾತಿಯ ನಾಲ್ಕು ನಾಯಿಗಳು ಒಂದೆಡೆ ಸೇರಿದರೆ, ಸಿಂಹವನ್ನೇ ಹೊಡೆದು ಕೊಂದುಬಿಡುತ್ತವಂತೆ, ಅಂತಹ ಅಪರೂಪದ ನಾಯಿ ಉಡುಪಿ ಜಿಲ್ಲೆಗೆ ಬಂದಿದೆ. ರಾಜ್ಯದ ಬೇರೆಲ್ಲೂ ಈ ತಳಿಯ ನಾಯಿ ಅಧಿಕೃತವಾಗಿ ಸಾಕುತ್ತಿಲ್ಲ. ಸೌತ್ ಆಫ್ರಿಕಾ ಮೂಲದ ನಾಯಿಯೊಂದು ಇದೀಗ ಸೌತ್ ಕರ್ನಾಟಕದಲ್ಲಿ ಜನಾಕರ್ಷಣೆಗೆ ಪಾತ್ರವಾಗಿದೆ.

ಉಡುಪಿಯ ಅಜ್ಜರಕಾಡು ನಿವಾಸಿ ವಿಶ್ವನಾಥ್ ಅಪರೂಪದ ಜಿಂಬಾಬ್ವೆ ಮೂಲದ ರೊಡೇಶಿಯನ್ ರಿಡ್ಜ್ ಬ್ಯಾಕ್ ತಳಿಯ 42 ದಿನದ ಗಂಡು ನಾಯಿ ಮರಿಯನ್ನು ಖರೀದಿಸಿದ್ದಾರೆ. ಈ ನಾಯಿ ಕರ್ನಾಟಕದ ಕ್ಯಾನಲ್ ಕ್ಲಬ್ ನಲ್ಲಿ ನೊಂದಣಿ ಪಡೆದ ಏಕೈಕ ನಾಯಿಯಾಗಿದೆ.

ಈ ತಿಳಿಯ ನಾಲ್ಕು ನಾಯಿಗಳು ಸೇರಿದರೇ ಒಂದು ಸಿಂಹವನ್ನು ಕೊಲ್ಲುತ್ತವೆ. ಹೀಗಾಗಿ ಈ ತಳಿಯ ನಾಯಿ ಮರಿಯನ್ನು 1,10,000 ರೂ. ನೀಡಿ ಖರೀದಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ ನಾಯಿ ಪ್ರೇಮಿ ವಿಶ್ವನಾಥ್ ಕಾಮತ್.
ಚೆನೈ ಮೂಲದ ವಿವೇಕ್ ಎಂಬವರು ಸೌತ್ ಆಫ್ರಿಕಾದಲ್ಲಿ ನೊಂದಣಿ ಹೊಂದಿರುವ ಅಪರೂಪದ ತಳಿಯ ನಾಯಿ ಮರಿಗಳನ್ನು ಚೆನೈಗೆ ತಂದು ಬ್ರೀಡ್ ಮಾಡಿದ್ದಾರೆ. ಅವರಿಂದ ವಿಶ್ವನಾಥ್ ಅವರು 42 ದಿನದ ನಾಯಿ ಮರಿಯನ್ನು ಖರೀದಿಸಿ, ಚೆನೈನಿಂದ ರೈಲಿನ ಮೂಲಕ ಉಡುಪಿಗೆ ಕರೆ ತಂದಿದ್ದಾರೆ. ಈ ನಾಯಿಗೆ ಆಫ್ರಿಕನ್ ಲಯನ್ ಡಾಗ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವಿಪರೀತ ಸಿಟ್ಟಿನ ನಾಯಿ ತಳಿ ಇದಾಗಿದ್ದು, ಒಂದೇ ತಳಿಯ ನಾಲ್ಕು ನಾಯಿಗಳು ಒಟ್ಟಿಗೆ ಸೇರಿದರೇ ಸಿಂಹವನ್ನು ಕೊಲ್ಲುವ ತಾಕತ್ತು ಇದಕ್ಕಿದೆ‌. ಹೀಗಾಗಿ ಲಯನ್ ಡಾಗ್ ಎಂಬ ಹೆಸರು ಇದೆಯಂತೆ.

ಕಳೆದ 25 ವರ್ಷಗಳಿಂದ ವಿವಿಧ ತಳಿಯ ನಾಯಿಯನ್ನು ಸಾಕುತ್ತಿರುವ ವಿಶ್ವನಾಥ್ ಕಾಮತ್ ಮತ್ತು ಅವರ ಪತ್ನಿ ಪ್ರಿಯಾ ಕಾಮತ್ ಪ್ರಸ್ತುತ 9 ನಾಯಿಗಳನ್ನು ಸಾಕುತ್ತಿದ್ದಾರೆ. ಅಮೇರಿಕನ್ ಬುಲ್ಲಿ, ಡಾಬರ್ ಮ್ಯಾನ್, ಲ್ಯಾಬರ್ ಡಾಂಗ್, ಪಗ್ ಸೇರಿದಂತೆ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ನಾಯಿ ಪ್ರೇಮಿಯಾಗಿರುವ ವಿಶ್ವನಾಥ್ ಕಾಮತ್ ಕಳೆದ 6 ವರ್ಷಗಳ ಹಿಂದೆ ತನ್ನ ಪ್ರೀತಿಯ ಡಾಬರ್ ಮ್ಯಾನ್ ರಾಷ್ಟ್ರೀಯ ಮಟ್ಟದ ಡಾಗ್ ಶೋನಲ್ಲಿ ಚಾಂಪಿಯನ್ ಆದ ಸವಿ ನೆನಪಿಗಾಗಿ ತಮ್ಮ ಕೈಯಲ್ಲಿ ಡಾಬರ್ ಮ್ಯಾನ್ ನಾಯಿಯ ಟ್ಯಾಟೋ ಹಾಕಿಕೊಂಡಿದ್ದಾರೆ. ಅವರು ಡಾಬರ್ ಮ್ಯಾನ್​ಗೆ ಇಟ್ಟಿರುವ ಬಾಂಡ್ ಎಂಬ ಹೆಸರನ್ನು ಬರೆಸಿಕೊಂಡಿದ್ದಾರೆ.

ರೊಡೇಶಿಯನ್ ರಿಡ್ಜ್ ಬ್ಯಾಕ್ ತಳಿಯ ನಾಯಿಯ, ಭುಜದಿಂದ ಸೊಂಟದವರೆಗೆ 2 ಇಂಚು ಅಗಲದ ನೇರ ರೋಮಗಳಿವೆ. ಈ ನಾಯಿಯ ಆಕರ್ಷಣೆಯ ಪ್ರಮುಖ ಭಾಗವಾಗಿದೆ. ಈ ತಳಿಯು 10 ರಿಂದ 13 ವರ್ಷಗಳವರೆಗೆ ಮಾತ್ರ ಬದಕುತ್ತೆ. ಬೇಟೆಗಾರಿಕೆ, ಕಾವಲುಗಾರಿಕೆ ಬಲವಾದ ಇಚ್ಛಾಶಕ್ತಿ ಹಾಗೂ ಮಾಲೀಕನಿಗೆ ನಿಷ್ಠಾವಂತವಾಗಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Sun, 6 November 22