AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ನಿಂತಿದ್ದ ಅಪ್ರಾಪ್ತೆಯನ್ನೂ ಬಿಡದ ಕಾಮುಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ?

ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಿಕ್ಕಬಳ್ಳಾಪುರದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್​​ ಮಾಡಿದ್ದು, ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.  ಸಂತ್ರಸ್ತೆ ಪಿಯುಸಿ ವಿದ್ಯಾರ್ಥಿನಿ ಎನ್ನಲಾಗಿದೆ.

ರಸ್ತೆ ಬದಿ ನಿಂತಿದ್ದ ಅಪ್ರಾಪ್ತೆಯನ್ನೂ ಬಿಡದ ಕಾಮುಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ?
ಬಂಧಿತ ಆರೋಪಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jan 13, 2026 | 7:26 PM

Share

ಚಿಕ್ಕಬಳ್ಳಾಪುರ, ಜನವರಿ 13: ಡ್ರಾಪ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿರುವ ಆರೋಪ ಚಿಕ್ಕಬಳ್ಳಾಪುರದಲ್ಲಿ ಕೇಳಿಬಂದಿದೆ. ರಾತ್ರಿ ಪೂರ್ತಿ ಕೂಂಬಿಂಗ್ ನಡೆಸಿ ಘಟನೆ ಸಂಬಂಧ ಆರೋಪಿ ಗಣೇಶ್​​ ಎಂಬಾತನನ್ನು ಬಂಧಿಸಿರುವ ಪೊಲೀಸರು, ಅಪ್ರಾಪ್ತ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ.

ಇದನ್ನೂ ಓದಿ: ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ; ಸಂತ್ರಸ್ತೆ ಹೇಳಿದ್ದೇನು?

ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್​​ ಟ್ರೇಸ್​​ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್​​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಚಿಕ್ಕಬಳ್ಳಾಪುರ ಮೂಲದ ಆರೋಪಿ ಗಣೇಶನಿಗೆ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವ ವಿಷಯ ತನಿಖೆ ವೇಳೆ ಗೊತ್ತಾಗಿದೆ. ಸಂತ್ರಸ್ತ ಬಾಲಕಿ ಮೊದಲೇ ತಂದೆ ಕಳೆದುಕೊಂಡಿದ್ದು, ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆಯಿಂದ ಆಕೆ ಮತ್ತಷ್ಟು ಅಘಾತಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದ್ದು, ಪೆರೇಸಂದ್ರ ಠಾಣೆಯ ಪೊಲೀಸರು ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:52 pm, Tue, 13 January 26

ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ