ಕಾನೂನು ಮಾತ್ರ ಪರಿಹಾರ ಅಲ್ಲ, ಸಮಾಜ ಜಾಗರೂಕವಾಗಿದ್ರೆ ಕಾನೂನು ಪ್ರಯೋಜನ: ಮತಾಂತರ ನಿಷೇಧದ ಬಗ್ಗೆ ಬಿಎಲ್ ಸಂತೋಷ್
ಲವ್ ಜಿಹಾದ್ಗೆ ನಮ್ಮ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಮನೆ ಮತ್ತು ಸಮಾಜ ಮಕ್ಕಳನ್ನು ಸರಿಯಾಗಿ ಬೆಳಸದ ಪರಿಣಾಮ ಇದು. ನಮ್ಮ ಸುತ್ತಮುತ್ತ ವ್ಯವಸ್ಥೆಯಲ್ಲಿನ ಭಯೋತ್ಪಾದನೆ ಗುರುತಿಸಬೇಕು ಎಂದು ಹೇಳಿದ್ದಾರೆ.
ಉಡುಪಿ: ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗುತ್ತದೆ. ಕಾಯ್ದೆ ಜಾರಿ ಬಗ್ಗೆ ಸಿಎಂ ಹೇಳಿದ್ದಾರೆ. ಕಾಯ್ದೆ ಜಾರಿ ಆಗುತ್ತೆ. ಆದರೆ ಯಾವತ್ತೂ ಕಾನೂನು ಮಾತ್ರ ಪರಿಹಾರ ಅಲ್ಲ. ಸಮಾಜ ಜಾಗರೂಕವಾಗಿದ್ರೆ ಮಾತ್ರ ಕಾನೂನು ಪ್ರಯೋಜನ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಡುಪಿಯಲ್ಲಿ ಬುಧವಾರ ಹೇಳಿಕೆ ನೀಡಿದ್ದಾರೆ.
ಉಡುಪಿಯ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಭಾಗಿ ಆಗಿದ್ದಾರೆ. ಸಮಾಜದಲ್ಲಿ ಜನಸಂಖ್ಯೆಯ ಅನುಪಾತ ಗಮನಿಸಬೇಕು. ವ್ಯತ್ಯಾಸ ಆಗ್ತಾ ಇದ್ಯಾ ನೋಡಿ. ನೆರೆಹೊರೆ ಸುರಕ್ಷಿತವಾಗಿದ್ರೆ ನಾವು ಸುರಕ್ಷಿತ. ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಮುಸಲ್ಮಾನರೇ ಗೆಲ್ತಾರೆ. ಗೆಲ್ಲಲಿ ಪರ್ವಾಗಿಲ್ಲ. ಆದ್ರೆ ಬೇರೆ ಯಾರೂ ಗೆಲ್ಲೋ ಹಾಗಿಲ್ಲ ಅಂದ್ರೆ ಹೇಗೆ ಸಾಧ್ಯ? ಲವ್ ಜಿಹಾದ್ಗೆ ನಮ್ಮ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಮನೆ ಮತ್ತು ಸಮಾಜ ಮಕ್ಕಳನ್ನು ಸರಿಯಾಗಿ ಬೆಳಸದ ಪರಿಣಾಮ ಇದು. ನಮ್ಮ ಸುತ್ತಮುತ್ತ ವ್ಯವಸ್ಥೆಯಲ್ಲಿನ ಭಯೋತ್ಪಾದನೆ ಗುರುತಿಸಬೇಕು ಎಂದು ಹೇಳಿದ್ದಾರೆ.
ರಾಮ ಕೃಷ್ಣರ ಹೆಸರು ಹೇಳಿಕೊಂಡು ಬದುಕಲು ಸಾಧ್ಯವಿಲ್ಲ. ಈಗ ನಡೆಸ ಬೇಕಾದ ಕರ್ಮ ನಡೆಸಲೇ ಬೇಕು. ಒಗ್ಗಟ್ಟು ಪ್ರದರ್ಶನ ಮಾಡಬೇಕು. ಜಾತಿ, ಊರು, ಧರ್ಮದ ಹೆಸರಲ್ಲಿ ಒಗ್ಗಟ್ಟು ಬೇಕು. ಪ್ರೇಮಕ್ಕೂ, ಪ್ರೀತಿಗೂ ಲವ್ ಜಿಹಾದ್ಗೂ ಸಂಬಂಧವೇ ಇಲ್ಲ. ವೀರಶೈವ ಮಹಾಸಭಾದವರು ಮತಾಂತರದ ವಿರುದ್ದ ಸಣ್ಣ ಸಣ್ಣ ತಂಡ ಮಾಡಿದ್ದಾರೆ. ಮತಾಂತರದ ಅಪಾಯ ಗ್ರಹಿಸಿದೆ ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದೇ ತರುತ್ತೇವೆ: ಆರಗ ಜ್ಞಾನೇಂದ್ರ ಮತಾಂತರ ನಿಷೇಧ ಕಾಯ್ದೆ ಇದೀಗ ಕೊನೇ ಹಂತದಲ್ಲಿ ಇದೆ. ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದೇ ತರುತ್ತೇವೆ. ಬೆಳಗಾವಿ ಅಧಿವೇಶನದಲ್ಲೇ ಮತಾಂತರ ಕಾಯ್ದೆ ತರುತ್ತೇವೆ. ಬಲವಂತವಾಗಿ ಮತಾಂತರ ಮಾಡುವವರಿಗೆ ಶಿಕ್ಷೆ ಆಗಬೇಕು ಎಂದು ಬೆಳಗಾವಿಯಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಯಾವ ಮತವನ್ನ ಆಚರಿಸಬೇಕು ಎಂದು ಸ್ವಾತಂತ್ರವಿದೆ. ಬಲವಂತವಾಗಿ ಮತಾಂತರ ಮಾಡುವವರಿಗೆ ಶಿಕ್ಷೆ ಆಗಲೇಬೇಕು. ಅದನ್ನು ಈ ಅಧಿವೇಶನಲ್ಲಿ ಮಂಡನೆ ಮಾಡುತ್ತೆವೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಮತಾಂತರಕ್ಕೊಂದು ಚೌಕಟ್ಟು ನಿಗದಿ ಮಾಡುವ ಬಗ್ಗೆ ಚರ್ಚೆ; ಸಿಎಂ ಬಸವರಾಜ ಬೊಮ್ಮಾಯಿ ಸಭೆ
ಇದನ್ನೂ ಓದಿ: ನಮ್ಮ ಧರ್ಮ ಉಳಿಸುವುದಕ್ಕಾಗಿ ಮತಾಂತರ ಕಾಯ್ದೆ ಜಾರಿ ಅನಿವಾರ್ಯ; ಸಚಿವ ಕೆಎಸ್ ಈಶ್ವರಪ್ಪ
Published On - 11:15 pm, Wed, 15 December 21