ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ: ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್

ಸಿದ್ದರಾಮಯ್ಯ ಅವರಿಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ. ಜನ ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ ಎಂದು ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ: ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್
ಬಿ.ಎಲ್. ಸಂತೋಷ್
Updated By: preethi shettigar

Updated on: Dec 15, 2021 | 2:03 PM

ಉಡುಪಿ: ಸಿದ್ಧರಾಮಯ್ಯ ಸಂಘವನ್ನು, ಆರ್​ಎಸ್​ಎಸ್​ ಅನ್ನು ಪುಂಖಾನುಪುಂಖವಾಗಿ ಬೈಯುತ್ತ ಓಡಾಡಿದರು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂದರ್ಭ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು. ಸಾವರ್ಕರ್ ಜೀವನ ಪ್ರತಿ ಯುವಕರಿಗೆ ತಲುಪಿಸಬೇಕು. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಯಲ್ಲಿ ಇದ್ದಾರೆ. ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ ಸಿದ್ದರಾಮಯ್ಯ ಅವರ ಎಲ್ಲಾ ಮಾತಿಗೆ ಉತ್ತರ ಕೊಡಬೇಕಾಗಿಲ್ಲ. ಸಿದ್ದರಾಮಯ್ಯ ಅವರಿಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ. ಜನ ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ ಎಂದು ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ನಡೆದ ಶಕ್ತಿಕೇಂದ್ರಗಳ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೋಸ್ಕರ ಬಿಜೆಪಿಯಲ್ಲಿ ಯಾರು ಬಲಿದಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಈ ಸಾಲಿನಲ್ಲಿ ಬರುವ ಮೊದಲನೆ ಹೆಸರು ಶಾಮ್ ಪ್ರಸಾದ್ ಮುಖರ್ಜಿ.ಸಿದ್ದರಾಮಯ್ಯ ಅವರ ನಾಲಿಗೆಗೆ ಲಂಗು ಇಲ್ಲ, ಲಗಾಮು ಇಲ್ಲ, ಸಂಸ್ಕಾರವೂ ಇಲ್ಲ. ಮೂರು ಇಲ್ಲದೆ ಇರುವುದರಿಂದ ಈ ಪ್ರಶ್ನೆಯನ್ನು ಹಾದಿಬೀದಿಯಲ್ಲಿ ಕೇಳುತ್ತಿರುತ್ತಾರೆ. ಶಾಂತವಾಗಿ ಮನೆಯಲ್ಲಿ ಕುಳಿತುಕೊಂಡು ಶಾಮ್​ ಪ್ರಸಾದ ಮುಖರ್ಜಿ ಯಾರು ಎಂದು ಓದಲಿ ಎಂದು ಹೇಳಿದ್ದಾರೆ.

ಆತ್ಮಸಾಕ್ಷಿಯನ್ನು ಭಗವಂತ ಎಲ್ಲರಿಗೂ ಕೊಟ್ಟಿದ್ದಾನೆ. ಆದರೆ ಆತ್ಮಸಾಕ್ಷಿಯನ್ನು ಕೆಲವರು ಕೊಂದು ಹಾಕುತ್ತಾರೆ. ಅದರಲ್ಲಿ ನಮ್ಮ ವಿರೋಧ ಪಕ್ಷದ ನಾಯಕರೂ ಕೆಲವರಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಿಳಿಸಿದ್ದಾರೆ.

ವಿಧಾನ ಪರಿಷತ್ ರದ್ದು ಗೊಳಿಸುವ ಸಮಯ ಬಂದಿದೆಯಲ್ಲವೇ? ಹೀಗಂತ ಪಕ್ಷದ ಹಿರಿಯ ಮತ್ತು ಸಂವೇದನೆ ಇರುವ ಕಾರ್ಯಕರ್ತರೊಬ್ಬರು ನನ್ನನ್ನು ಪ್ರಶ್ನಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ‌ ಪ್ರಶ್ನೆ ಉದ್ಭವಿಸುವುದಿಲ್ಲ. ಮತ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬರಿಗೆ ಇರಬೇಕಾದ ಅತಿ ದೊಡ್ಡ ಗುಣ. ದಕ್ಷಿಣ ಕನ್ನಡ ಮತ್ತು ಉಡುಪಿ ಶೇ.99 ರಷ್ಟು ನಾವು ಮಾರಾಟಕ್ಕಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ನಾವು ಮಾರಾಟಕ್ಕಿಲ್ಲ, ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ. ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರಿಗೆ ಈ ಬದ್ಧತೆ ಬೇಕು ಎಂದು  ಬಿ.ಎಲ್ .ಸಂತೋಷ್ ಹೇಳಿದ್ದಾರೆ.

ಇದನ್ನೂ ಓದಿ:

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಕೋನರೆಡ್ಡಿ: ಸ್ವಾಗತಿಸಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ

Abolish Legislative Council: ಮೊದಲು ವಿಧಾನ ಪರಿಷತ್ ರದ್ದಾಗಬೇಕು- ಸ್ವತಃ ಮೇಲ್ಮನೆ ಸದಸ್ಯ ಲಕ್ಷ್ಮಣ ಸವದಿ ತೀವ್ರ ವಿಷಾದ

Published On - 1:51 pm, Wed, 15 December 21