Viral Video: ನಡುರಸ್ತೆಯಲ್ಲಿ ಬಸ್ ನಿಲ್ಲಿಸಿದ ಕುಂದಾಪುರ ಬಸ್ನ ಕುಡುಕ ಚಾಲಕ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್
ಉಡುಪಿಯ ಮೂಲದ್ದು ಎಂದು ಹೇಳಲಾಗಿರುವ ‘ಭಾರತಿ’ ಹೆಸರಿನ ಬಸ್ ಓಡಿಸುತ್ತಿದ್ದ ಚಾಲಕ, ಕುಡಿದು ಅಮಲೇರಿಸಿಕೊಂಡು ರಸ್ತೆಗೆ ಬಿದ್ದಿದ್ದಾನೆ.
ಉಡುಪಿ: ಕುಂದಾಪುರ ಮಾರ್ಗದಲ್ಲಿ ಖಾಸಗಿ ಬಸ್ ಓಡಿಸುತ್ತಿದ್ದ ಚಾಲಕನೊಬ್ಬ ಮದ್ಯ ಸೇವಿಸಿ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ, ತಾನೂ ಕೆಳಗಿಳಿದು ರಸ್ತೆಗೆ ಬಿದ್ದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಡುಪಿಯ ಮೂಲದ್ದು ಎಂದು ಹೇಳಲಾಗಿರುವ ‘ಭಾರತಿ’ ಹೆಸರಿನ ಬಸ್ ಓಡಿಸುತ್ತಿದ್ದ ಚಾಲಕ, ಕುಡಿದು ಅಮಲೇರಿಸಿಕೊಂಡು ರಸ್ತೆಗೆ ಬಿದ್ದಿದ್ದಾನೆ. ಈ ಮೂಲಕ ವಿಡಿಯೊದ ವಿಲನ್ ಆಗಿದ್ದಾನೆ.
ಮೊದಲೇ ಕುಡಿದು ಚಾಲಕ ಬಸ್ ಏರಿದ್ದ. ಮಧ್ಯೆರಾತ್ರಿ ರಸ್ತೆ ಮಧ್ಯ ವಿರಾಮಕ್ಕೆಂದು ಬಸ್ ನಿಲ್ಲಿಸಿದ್ದ. ಈ ವೇಳೆ ಮತ್ತೊಮ್ಮೆ ಮದ್ಯ ಸೇವಿಸಿ, ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ. ಓಲಾಡುತ್ತಾ ಬಸ್ ಬಳಿಗೆ ಬಂದು ಬಸ್ ಚಾಲು ಮಾಡಲು ಯತ್ನಿಸಿದ. ಇದನ್ನು ಗಮನಿಸಿದ ಪ್ರಯಾಣಿಕರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆಯಿತು. ಪ್ರಯಾಣಿಕರೊಬ್ಬರು ಚಾಲಕನಿಗೆ ಪೆಟ್ಟುಕೊಟ್ಟರು.
ಮೊದಲೇ ದೇಹದ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಹೆದ್ದಾರಿಯ ಮೇಲೆ ಬಿದ್ದ. ಸ್ಥಳದಲ್ಲಿದ್ದವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಈ ವಿಡಿಯೊ ಇದೀಗ ವೈರಲ್ ಆಗಿದೆ. ಆದರೆ ಚಾಲಕನ ಹೆಸರಾಗಲೀ, ಬಸ್ಸು ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು ಎನ್ನುವ ಮಾಹಿತಿಯಾಗಲೀ ಈವರೆಗೆ ಲಭ್ಯವಾಗಿಲ್ಲ.
Published On - 2:26 pm, Thu, 15 September 22