ಹಿಜಾಬ್ ವಿವಾದದ ಅತಿದೊಡ್ಡ ಎಕ್ಸ್‌ಕ್ಲೂಸಿವ್ ಸುದ್ದಿ: ನವೆಂಬರ್ ತಿಂಗಳಲ್ಲೇ ನಡೆದಿತ್ತು ಹಿಜಾಬ್ ವಿವಾದಕ್ಕೆ ಮಾಸ್ಟರ್ ಪ್ಲಾನ್!?
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಈ ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲ್ಯಾನ್ ಶುರುವಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. 4 ಹಿಜಾಬ್ ಹೋರಾಟಗಾರ್ತಿಯರು ಏಕಕಾಲಕ್ಕೆ ಟ್ವಿಟರ್ ಖಾತೆ ತೆರೆದು ಸಿಎಫ್‌ಐ(ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಪ್ರಮೋಟ್‌ಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಉಡುಪಿ: ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್(Hijab) ವರ್ಸಸ್ ಕೇಸರಿ ಶಾಲು(Kesari Shawl) ಕಿಡಿ, ಈಗ ದೇಶವ್ಯಾಪಿ ವ್ಯಾಪಿಸಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಗಳು ಉಂಟಾಗಿವೆ. ಈ ಬಗ್ಗೆ ನಿನ್ನೆ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಮೌಖಿಕ ಆದೇಶ ನೀಡಿದೆ. ಸೋಮವಾರದಿಂದ ಹೈಸ್ಕೂಲ್ ಹಾಗೂ ಕಾಲೇಜು ಆರಂಭವಾಗಲಿದ್ದು ವಿದ್ಯಾರ್ಥಿಗಳು ಧರ್ಮಗಳನ್ನು ಸೂಚಿಸುವ ಕೇಸರಿ ಶಾಲು-ಹಿಜಾಬ್ ಧರಿಸಬಾರದು ಎಂದು ತಿಳಿಸಿದೆ. ಆದ್ರೆ ಇಷ್ಟರ ಮಟ್ಟಿಗೆ ಸಂಘರ್ಷ ಉಂಟು ಮಾಡಿದ ಹಿಜಾಬ್ ವಿವಾದ ಶುರುವಾಗಿದ್ದು ಯಾವಾಗ? ಹೇಗೆ ಎಮಬುದರ ಡಿಟೈಲ್ಸ್ ಇಲ್ಲಿದೆ ಓದಿ.
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಈ ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲ್ಯಾನ್ ಶುರುವಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. 4 ಹಿಜಾಬ್ ಹೋರಾಟಗಾರ್ತಿಯರು ಏಕಕಾಲಕ್ಕೆ ಟ್ವಿಟರ್ ಖಾತೆ ತೆರೆದು ಸಿಎಫ್‌ಐ(ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಪ್ರಮೋಟ್‌ಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ನವೆಂಬರ್ ತಿಂಗಳಲ್ಲಿ ಬಾಬ್ರಿ ಮಸೀದಿ ತೀರ್ಪಿನ ವಿರುದ್ಧ ಈ ಯುವತಿಯರು ಟ್ವೀಟ್ ಮಾಡಿದ್ದರು. ಯುವತಿಯರ ಪ್ರತಿ ಟ್ವೀಟ್‌ಗೆ CFI ರಾಷ್ಟ್ರಾಧ್ಯಕ್ಷ ರಿಟ್ವೀಟ್ ಮಾಡಿದ್ದರು ಎಂದು ವಿಜಯ್ ಪಟೇಲ್ CFI ಟ್ವಿಟರ್ ಟ್ರೆಂಡ್ ರಹಸ್ಯ ಬಯಲು ಮಾಡಿದ್ದಾರೆ.
ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಯುವತಿಯರು ಸಿಎಎಫ್ಐ ಸಕ್ರಿಯ ಕಾರ್ಯಕರ್ತರಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಟ್ವೀಟ್ ಮಾಡಿದ್ದರು. ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ ಸೇರಿದಂತೆ ಕೆಲವರ ಟ್ವಿಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದೆ. ಈ ಯುವತಿಯರು ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿದ್ದರು. ನವೆಂಬರ್ 21ರಂದು ಮಸೀದಿಯಲ್ಲಿ ಮೈಕ್ ಬಳಕೆ ಸಮರ್ಥಿಸಿ ಟ್ವೀಟ್ ಮಾಡಿದ್ದರು. ಡಿ.12ರಂದು ದೆಹಲಿ ದಂಗೆ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಟ್ವೀಟ್ ಮಾಡಿದ್ದರು. ಡಿ.24ರ ಬಳಿಕ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದರು. ಸದ್ಯ ಈ ನಾಲ್ಕು ಯುವತಿಯರ ಟ್ವಿಟರ್ ಟ್ರಾಕ್ ರೆಕಾರ್ಡಿನಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಅಡಗಿವೆ.