ಮಟ್ಟುಗುಳ್ಳ ಮಾತ್ರ ಬೆಳೆಯುತ್ತಿದ್ದ ಮಟ್ಟುವಿನ ಗದ್ದೆಗಳಲ್ಲಿ ಭರಪೂರ ಕಲ್ಲಂಗಡಿ ಫಸಲು; ರೈತನ ಮೊಗದಲ್ಲಿ ಮಂದಹಾಸ
ಪ್ರಯೋಗ ಶೀಲ ಪ್ರಗತಿಪರ ಕೃಷಿಕ ಯಶೋಧರ ಅವರು, ಕಲ್ಲಂಗಡಿ ಕೃಷಿ ಕೈ ಹಾಕಿದ್ರು. ಮೊದ ಮೊದಲು ಸಣ್ಣ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಮಾಡಿ, ಸದ್ಯ ಎಕರೆ ಗಟ್ಟಲೇ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಉಡುಪಿ, ಮಂಗಳೂರು ಹಾಗೂ ಬೆಂಗಳೂರಗಳಲ್ಲಿ ಕರಾವಳಿ ಕಲ್ಲಂಗಡಿ ಅಂತ ಹೆಚ್ಚಿನ ಬೇಡಿಕೆ ಕೂಡ ಇದೆ.
ಉಡುಪಿ: ಮಟ್ಟುಗುಳ್ಳ ಬಿಟ್ರೆ ಆ ಭೂಮಿಯಲ್ಲಿ ಬೇರೆ ತರಕಾರಿ(Vegetable) ಕೃಷಿ ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ, ಪ್ರಯೋಗಶೀಲ ರೈತರೊಬ್ಬರು ಕಲ್ಲಂಗಡಿ ಕೃಷಿI(agriculture) ಮಾಡಿ ಲಾಭ ಕಂಡಿದ್ದಾರೆ. ಕರಾವಳಿಯ ಮಣ್ಣಲ್ಲೂ ಕಲ್ಲಂಗಡಿ ಬೆಳೆಯಬಹುದು ಎಂದು ಆ ಮೂಲಕ ತೋರಿಸಿಕೊಟ್ಟಿದ್ದಾರೆ. ಮಟ್ಟುವಿನ ಈ ಗದ್ದೆಗಳಲ್ಲಿ ಹಿಂದೆ ಮಟ್ಟುಗುಳ್ಳವನ್ನು ಮಾತ್ರ ಬೆಳೆಯುತ್ತಿದ್ದರು. ಮಟ್ಟುಗುಳ್ಳ ಪೇಟೆಂಟ್ ಪಡೆದ ಕರಾವಳಿ ಏಕಮಾತ್ರ ತರಕಾರಿ ಕೂಡ ಆಗಿದೆ. ಆದರೆ ಹೆಚ್ಚಿನ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ಮಟ್ಟುಗುಳ್ಳ ಇಳುವರಿ ಸರಿಯಾಗಿ ಸಿಗುತ್ತಿರಲಿಲ್ಲ. ಪ್ರಯೋಗಶೀಲ ರೈತರು(Farmers) ಹೊಸ ಹೊಸ ಬೆಳೆಯನ್ನು ಬೆಳೆದು ಸೈ ಅನ್ನಿಸಿಕೊಂಡ ಉದಾಹರಣೆ ಕಾಣಿಸಿಗುತ್ತಿದೆ.
ಪ್ರಯೋಗ ಶೀಲ ಪ್ರಗತಿಪರ ಕೃಷಿಕ ಯಶೋಧರ ಅವರು, ಕಲ್ಲಂಗಡಿ ಕೃಷಿ ಕೈ ಹಾಕಿದ್ರು. ಮೊದ ಮೊದಲು ಸಣ್ಣ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಮಾಡಿ, ಸದ್ಯ ಎಕರೆ ಗಟ್ಟಲೇ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಉಡುಪಿ, ಮಂಗಳೂರು ಹಾಗೂ ಬೆಂಗಳೂರಗಳಲ್ಲಿ ಕರಾವಳಿ ಕಲ್ಲಂಗಡಿ ಅಂತ ಹೆಚ್ಚಿನ ಬೇಡಿಕೆ ಕೂಡ ಇದೆ.
ಯಶೋಧರ ಅವರ ಕಲ್ಲಂಗಡಿ ಪ್ರಯೋಗ ನೋಡಿದ, ಊರಿನ ಅಕ್ಕಪಕ್ಕದ ಕೃಷಿಕರು ತಾವು ಕೂಡ ಕಲ್ಲಂಗಡಿ ಬೆಳೆ ಮಾಡುತ್ತಿದ್ದಾರೆ. ಒಂದು ಕಡೆ ಸಮುದ್ರ ಮತ್ತೊಂದು ಕಡೆ ನದಿ ಇರುವ ಮಟ್ಟುವಿನ ಉಪ್ಪು ನೀರುಸಿಹಿ ನೀರು ಮಿಶ್ರಿತವಾದ ಭೂಮಿಯಲ್ಲಿ ಬೆಳೆದ ಕಲ್ಲಂಗಡಿ ಅತ್ಯಂತ ರುಚಿಕರವಾಗಿದೆ. ಸಾವಯವವಾಗಿ ಬೆಳೆಯುವ ಕಲ್ಲಂಗಡಿಯನ್ನು ವ್ಯಾಪಾರಿಗಳು ಮನೆಯಿಂದ ಖರೀದಿ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ಪ್ರಮೋದ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಕೇವಲ ಮಟ್ಟುಗುಳ್ಳ ತರಕಾರಿ ಬೆಳೆಗೆ ಮಾತ್ರ ಸೀಮಿತ ಆಗಿದ್ದ ಮಟ್ಟುವಿನ ಗದ್ದೆಗಳಲ್ಲಿ ಸದ್ಯ ಕಲ್ಲಂಗಡಿ ಹಣ್ಣು ಕಾಣಿಸಿಕೊಳ್ಳುತ್ತಿದೆ. ರೈತರು ಒಂದೇ ಬಗೆಯ ತರಕಾರಿ ಮಾಡುವುದಕ್ಕಿಂತ ಬೇರೆ ಬೇರೆ ಬೆಳೆಯ ಬಗ್ಗೆಯೂ ಯೋಚನೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುವುದಕ್ಕೆ ಇದೇ ಉದಾಹರಣೆ.
ವರದಿ:ಹರೀಶ್ ಪಾಲೆಚ್ಚಾರ್
ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ
CM Bommai Budget: ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ. ಕೃಷಿ, ಪೂರಕ ಚಟುವಟಿಕೆಗೆ 33,700 ಕೋಟಿ ರೂ