ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ
ನಮ್ಮ ಭವಿಷ್ಯದ ನಿರ್ಮಾಣದಲ್ಲಿ ಶಾಂತವೇರಿ ಗೋಪಾಲಗೌಡ ಸದಾಕಾಲ ಮಾರ್ಗದರ್ಶನ ಮಾಡ್ತಿದ್ದಾರೆ. ಸ್ವಂತ ಜಮೀನು ಇಲ್ಲದಿದ್ದರೂ ಇತರ ಗೇಣಿದಾರರಿಗೆ ಜಮೀನು ಕೊಡಬೇಕು ಅಂತ ಹೋರಾಟ ಮಾಡಿದ್ರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಆದರ್ಶ ಬದುಕನ್ನು ಶಾಂತವೇರಿಗೋಪಾಲ ಗೌಡರು ಬದುಕಿದ್ದರು. ಇವರ ಆಸ್ತಿ ಜನರ ವೈಚಾರಿಕತೆ ಅಂತ ಭಾವಿಸಿದ್ದರು. ಜನರಲ್ಲಿ ವೈಚಾರಿಕತೆ ಇರೋವರೆಗೂ ಅವರು ಜೀವಂತ ಇರ್ತಾರೆ. ನಮ್ಮ ಭವಿಷ್ಯದ ನಿರ್ಮಾಣದಲ್ಲಿ ಇವ್ರು ಸದಾಕಾಲ ಮಾರ್ಗದರ್ಶನ ಮಾಡ್ತಿದ್ದಾರೆ. ಸ್ವಂತ ಜಮೀನು ಇಲ್ಲದಿದ್ದರೂ ಇತರ ಗೇಣಿದಾರರಿಗೆ ಜಮೀನು ಕೊಡಬೇಕು ಅಂತ ಹೋರಾಟ ಮಾಡಿದ್ರು. ಇಂತಹ ಅಪರೂಪದ ಘಟನೆ ಆಗಿನ ಕಾಲದಲ್ಲಿ ನಡೆಯಲು ಸಾಧ್ಯ. ಇಂದು ಆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಇಂದು (ಮಾರ್ಚ್ 14) ಬೆಂಗಳೂರಿನಲ್ಲಿ ನಡೆಯುತ್ತಿದೆ. ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.
ಅವರು ಕರ್ನಾಟಕ ರೈತರ ಬದುಕಿನಲ್ಲಿ ಹೆಜ್ಜೆ ಗುರುತನ್ನು ಬಿಟ್ಟುಹೋಗಿದ್ದಾರೆ. ಸದನದ ಒಳಗೆ ಅವರ ವಾಕ್ಚಾತುರ್ಯ ಒಳ್ಳೆಯದಿತ್ತು. ಇಡೀ ಬದುಕನ್ನ ಜನರಿಗಾಗು ಗಂಧದಂತೆ ತೇದಿದ್ದಾರೆ. ಕುವೆಂಪು, ಕಡಿದಾಳ ಮಂಜಪ್ಪ ಹೀಗೇ ಸಾಕಷ್ಟು ಜನ ಆ ಪ್ರದೇಶದಿಂದ ಬಂದಿದ್ದಾರೆ. ನಾನು ಆರಗಣ್ಣನಿಗೆ ಹೇಳಿದ್ದೆನೆ ಶೀಘ್ರವಾಗಿ ಆ ಸ್ಥಳಗಳಿಗೆ ಭೇಟಿ ನೀಡ್ತೇನೆ. ಅಲ್ಲಿಂದ ಪ್ರೇರಣೆ ಪಡೆದುಕೊಳ್ಳುತ್ತೆನೆ ಎಂದು ಶಾಂತವೇರಿ ಗೋಪಾಲಗೌಡರ ಊರಿನ ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ 2 ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ 2 ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ, ವರಿಷ್ಠರು ಹೇಳಿದಾಗ ಸಚಿವ ಸಂಪುಟ ಪುನಾರಚನೆ: ಸಿಎಂ ಬೊಮ್ಮಾಯಿ
Published On - 11:26 am, Mon, 14 March 22