AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈನಾನ್ಷಿಯರ್‌ ಅಜೇಂದ್ರ ಶೆಟ್ಟಿ ಹತ್ಯೆ; ಕಚೇರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆ

ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿದ್ದ ಅಜೇಂದ್ರ ಶೆಟ್ಟಿ ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಫೈನಾನ್ಸ್ ನಡೆಸುತ್ತಿದ್ದರು. ಅಜೇಂದ್ರ ಶೆಟ್ಟಿಯನ್ನು ಹುಡಾಕಾಟ ನಡೆಸುತ್ತಿದ್ದ ಸ್ನೇಹಿತರಿಗೆ ಫೈನಾನ್ಸ್ ಒಳಗೆ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಅವರ ಶವ ಪತ್ತೆಯಾಗಿದೆ.

ಫೈನಾನ್ಷಿಯರ್‌ ಅಜೇಂದ್ರ ಶೆಟ್ಟಿ ಹತ್ಯೆ; ಕಚೇರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆ
ಅಜೇಂದ್ರ ಶೆಟ್ಟಿ (33)
TV9 Web
| Updated By: preethi shettigar|

Updated on:Aug 02, 2021 | 1:21 PM

Share

ಉಡುಪಿ: ಡ್ರೀಮ್ ಫೈನಾನ್ಸ್‌ನ ಫೈನಾನ್ಷಿಯರ್‌ ಅನ್ನು ತಡರಾತ್ರಿ ಕಚೇರಿಯಲ್ಲಿಯೇ ಕತ್ತು ಸೀಳಿ  ಹತ್ಯೆಗೈಯಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಳ್ವಾಡಿಯ ಫೈನಾನ್ಸ್​ನಲ್ಲಿ ಅಜೇಂದ್ರ ಶೆಟ್ಟಿ (33) ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಜೇಂದ್ರ ಶೆಟ್ಟಿ ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಕಚೇರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಿಳಿದಿದೆ.

ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿದ್ದ ಅಜೇಂದ್ರ ಶೆಟ್ಟಿ ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಫೈನಾನ್ಸ್ ನಡೆಸುತ್ತಿದ್ದರು. ಅಜೇಂದ್ರ ಶೆಟ್ಟಿಯನ್ನು ಹುಡಾಕಾಟ ನಡೆಸುತ್ತಿದ್ದ ಸ್ನೇಹಿತರಿಗೆ ಫೈನಾನ್ಸ್ ಒಳಗೆ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದು, ಕುಂದಾಪುರ ತಾಲೂಕಿನ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪೊಲೀಸ್ ವಿಚಾರಣೆಯ ವೇಳೆ ವ್ಯವಹಾರದಲ್ಲಿ ಹಣಕಾಸಿನ ವೈಮನಸ್ಸು ಹಿನ್ನೆಲೆ ಕೊಲೆ ಮಾಡಿರುವುದಾಗಿ ಅನೂಪ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಉಡುಪಿ ಎಸ್‌ಪಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ. ಪಾಲುದಾರ ಅನೂಪ್ ಶೆಟ್ಟಿಯೇ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದು, ಗೋವಾ ರಾಜ್ಯದ ಕೊಲ್ವಾ ಬೀಚ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ.

ಮೈಸೂರು: ಟ್ರ್ಯಾಕ್ಟರ್‌ನಿಂದ ಬಿದ್ದು ಮಹಿಳೆ ಸಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಕೃಷಿ ಕೆಲಸಕ್ಕೆ ಹೋಗುತ್ತಿದ್ದ 24 ವರ್ಷದ ರೂಪಾ ಮೃತ ದುರ್ದೈವಿ. ಟ್ರ್ಯಾಕ್ಟರ್‌ನಲ್ಲಿ ಹೆಚ್ಚು ಜನರನ್ನು ಸಾಗಿಸುತ್ತಿದ್ದಿದ್ದೇ ಘಟನೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ಆಸ್ಪತ್ರೆ 3ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು ಆಸ್ಪತ್ರೆ 3ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವಿಗೀಡಾದ ಘಟನೆ ಮೈಸೂರಿನ ವಿ.ವಿ.ಮೊಹಲ್ಲಾದ ಬೃಂದಾವನ ಆಸ್ಪತ್ರೆಯಲ್ಲಿ ನಡೆದಿದೆ. ವಿಜಯನಗರ ನಿವಾಸಿ ಹರೀಶ್(37) ಮೃತ ದುರ್ದೈವಿ. ನಿನ್ನೆ ಡೆಂಗ್ಯೂ ಜ್ವರದ ಕಾರಣ ತಪಾಸಣೆಗೆ ಹೋಗಿದ್ದ ಹರೀಶ್, ಕಾಲು ಜಾರಿ ಮೂರನೇ ಮಹಡಿಯಿಂದ ಬಿದ್ದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಚಿಕಿತ್ಸೆ ಫಲಿಸದೆ ಇಂದು ಹರೀಶ್ ಸಾವಿಗೀಡಾಗಿದ್ದಾರೆ. ಸದ್ಯ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Katihar Mayor Murder: ಕತಿಹಾರ್ ಮೇಯರ್ ಬರ್ಬರ ಹತ್ಯೆ; ನಿನ್ನೆ ರಾತ್ರಿ ನಡುರಸ್ತೆಯಲ್ಲೇ ಗುಂಡು ಹಾರಿಸಿ ಕೊಲೆ

Mangaluru: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣ; 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Published On - 1:08 pm, Sat, 31 July 21