ಸಚಿವ ಸುನಿಲ್ ಕುಮಾರ್ ಎದುರು ನಿಂತಿರುವ ಪ್ರಮೋದ್ ಮುತಾಲಿಕ್​ ವಿರುದ್ಧ ಅಪಸ್ವರಗಳ ರಾಗಮಾಲಿಕೆ, ಬಿರುಸಿನ ಬಂಡಾಯದ ಧ್ವನಿ

Karkala Assembly Election: ಮುತಾಲಿಕ್ ಜೊತೆ ಗುರುತಿಸಿಕೊಂಡವರೇ ಈ ರೀತಿ ಮುತಾಲಿಕ್ ವಿರುದ್ಧ ಮಾತನಾಡುತ್ತಿರುವುದು ವೈಯಕ್ತಿಕ ವಿಚಾರವೋ ಅಥವಾ ರಾಜಕೀಯ ಪ್ರೇರಿತವೋ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ನಡುವೆ ಈ ಪತ್ರಿಕಾಗೋಷ್ಠಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಗೆ ಲಾಭ ಮಾಡಿಕೊಡುತ್ತಿರುದಂತೂ ಸತ್ಯ.

ಸಚಿವ ಸುನಿಲ್ ಕುಮಾರ್ ಎದುರು ನಿಂತಿರುವ ಪ್ರಮೋದ್ ಮುತಾಲಿಕ್​ ವಿರುದ್ಧ ಅಪಸ್ವರಗಳ ರಾಗಮಾಲಿಕೆ, ಬಿರುಸಿನ ಬಂಡಾಯದ ಧ್ವನಿ
ಪ್ರಮೋದ್ ಮುತಾಲಿಕ್​ ವಿರುದ್ಧ ಅಪಸ್ವರಗಳ ರಾಗಮಾಲಿಕೆ
Follow us
|

Updated on:Apr 11, 2023 | 5:17 PM

ಹಾಲಿ ಅಸೆಂಬ್ಲಿ ಚುನಾವಣೆ ನಿಮಿತ್ತ (Karnataka Assembly Elections 2023) ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರವು (Karkala Assembly Elections) ಕಣದಲ್ಲಿರಬಹುದಾದ ಅಭ್ಯರ್ಥಿಗಳಿಂದಾಗಿಯೆ ರಾಜ್ಯದಲ್ಲಿ ಅದಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇಂಧನ ಸಚಿವ ಸುನಿಲ್ ಕುಮಾರ್ ಎದುರು ಪಕ್ಷೇತರರಾಗಿ ಶ್ರೀರಾಮ ಸೇನೆಯ (Sri Ram Sena) ಪ್ರಮೋದ್ ಮುತಾಲಿಕ್ (Pramod Muthalik) ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಮುತಾಲಿಕ್ ವಿರುದ್ಧ ಅಪಸ್ವರಗಳ ರಾಗಮಾಲಿಕೆ ಕೇಳಿ ಬರುತ್ತಿದೆ.

ಮುತಾಲಿಕ್ ಮಾತಿಗೆ ಮರುಳಾಗಬೇಡಿ ಎಂದ ಮುತಾಲಿಕ್ ಹಳೆಯ ಬಳಗ: ಹೌದು ಹಿಂದೂ ಫೈಯರ್ ಬ್ರಾಂಡ್ ಖ್ಯಾತಿಯ ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲಿ ಪಕ್ಷೇತರಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ ದಿನದಿಂದ ಕ್ಷೇತ್ರದ ಮೇಲೆ ಇಡೀ ರಾಜ್ಯ ಕಣ್ಣಿಟ್ಟಿದೆ. ಮುಖ್ಯವಾಗಿ ಹಿಂದುತ್ವದ ಅಜೆಂಡಾ ಹಿನ್ನೆಲೆಯಲ್ಲಿ ಸಚಿವರಾಗಿರುವ ಸುನಿಲ್ ಕುಮಾರ್ ಮಂತ್ರಿ ಪದವಿ ಸಿಕ್ಕ ಬಳಿಕ ನೈಜ ಹಿಂದೂ ಕಾರ್ಯಕರ್ತರನ್ನ ಮರೆತಿದ್ದಾರೆ ಎನ್ನುವ ವಿಚಾರವನ್ನು ಮುಂದಿಟ್ಟು, ಮುತಾಲಿಕ್ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ.

ಇದುವರೆಗೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ, ಹಿಂದೂ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಇವೆ ವಿಚಾರಗಳನ್ನ ಮುತಾಲಿಕ್ ಇಡೀ ಕ್ಷೇತ್ರದಾದ್ಯಂತ ಹೇಳುತ್ತಿರುವುದು ಸಚಿವ ಸುನಿಲ್ ಕುಮಾರ್ ಅವರನ್ನು ಇರುಸುಮುರುಸು ಮಾಡಿದೆ. ಆದರೆ ಪ್ರಮೋದ್ ಮುತಾಲಿಕ್ ಅವರ ಜೊತೆಗೆ ಗುರುತಿಸಿಕೊಂಡಿದ್ದ ಉತ್ತರ ಕರ್ನಾಟಕ ಭಾಗದ ಕೆಲವೊಂದಿಷ್ಟು ಹಿಂದೂ ಮುಖಂಡರು ಈಗ ಮುತಾಲಿಕ್ ವಿರುದ್ಧ ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಕರೆದ ಉತ್ತರ ಕರ್ನಾಟಕ ಭಾಗದ ಹಿಂದೂ ಮುಖಂಡರು, ನೇರವಾಗಿ ಪ್ರಮೋದ್ ಮುತಾಲಿಕ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ.

ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದಲ್ಲಿ ನಮಗೆ ಮೋಸ ಮಾಡಿದ ಹಾಗೆ ತಾವು ಅವರನ್ನು ನಂಬಿ ಮೋಸ ಹೋಗಬೇಡಿ ಹಾಗೂ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ ಎಂದಿದ್ದಾರೆ. ಪ್ರಮೋದ್ ಮುತಾಲಿಕ ಹಿಂದುತ್ವದ ಪ್ರಖರ ಭಾಷಣದಿಂದ ಪ್ರಭಾವಿತರಾಗಿ ಉತ್ತರ ಕರ್ನಾಟಕದ ಭಾಗದಲ್ಲಿ 15 ವರ್ಷಗಳ ಕಾಲ ಹಿಂದು ಸಂಘಟನೆ ಬೆಳೆಸುವುದಕೋಸ್ಕರ ದುಡಿದರು. ಆದರೆ ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಹಿಂದುತ್ವ ಮತ್ತು ಅದರೊಳಗಿನ ಸತ್ಯ ಹಾಗೂ ವ್ಯವಹಾರಗಳೇ ಬೇರೆ. ಬೇರೆ ಬೇರೆ ರಾಜ್ಯದ ಯುವಕರ ಹೆಸರಿನಲ್ಲಿ ಸಂಗ್ರಹವಾದ ಹಣ ಹಿಂದುತ್ವಕ್ಕಾಗಿ ಹುತಾತ್ಮರಾದ ಹಿಂದೂ ಯುವಕರ ಮನೆಗೆ ಮುಟ್ಟಿಲ್ಲ ಎನ್ನುವ ಆರೋಪವನ್ನು ಮಾಡಿದ್ದಾರೆ.

ಒಟ್ಟಾರೆಯಾಗಿ ಈ ಹೊಸ ಬೆಳವಣಿಗೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮುತಾಲಿಕ್ ಜೊತೆ ಗುರುತಿಸಿಕೊಂಡವರೇ ಈ ರೀತಿ ಮುತಾಲಿಕ್ ವಿರುದ್ಧ ಮಾತನಾಡುತ್ತಿರುವುದು ವೈಯಕ್ತಿಕ ವಿಚಾರವೋ ಅಥವಾ ರಾಜಕೀಯ ಪ್ರೇರಿತವೋ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ನಡುವೆ ಈ ಪತ್ರಿಕಾಗೋಷ್ಠಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಗೆ ಲಾಭ ಮಾಡಿಕೊಡುತ್ತಿರುದಂತೂ ಸತ್ಯ.

ವರದಿ: ಪ್ರಜ್ವಲ್ ಅಮಿನ್, ಟಿವಿ9, ಉಡುಪಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Tue, 11 April 23

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?