ಮದ್ಯ ಪ್ರಿಯರಿಗೆ ಬಿಗ್​ ಶಾಕ್! ಕರ್ನಾಟಕದಾದ್ಯಂತ ಮೇ 19ರವರೆಗೆ ಮದ್ಯ ಮಾರಾಟಗಾರರಿಂದ ಮುಷ್ಕರ

ಹೊಸಪೇಟೆ, ಬೆಳಗಾವಿ, ಮೈಸೂರು ಮಂಗಳೂರು ವಿಭಾಗದಲ್ಲಿ ಮದ್ಯ ಸಿಗಲ್ಲ. ಮೇ ತಿಂಗಳ 19ನೇ ತಾರೀಖಿನವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. 

ಮದ್ಯ  ಪ್ರಿಯರಿಗೆ ಬಿಗ್​ ಶಾಕ್! ಕರ್ನಾಟಕದಾದ್ಯಂತ ಮೇ 19ರವರೆಗೆ ಮದ್ಯ ಮಾರಾಟಗಾರರಿಂದ ಮುಷ್ಕರ
ಪ್ರಾತಿನಿಧಿಕ ಚಿತ್ರ
Edited By:

Updated on: May 05, 2022 | 9:17 PM

ಉಡುಪಿ: ನಾಳೆಯಿಂದ ಮೇ 19ರವರೆಗೆ ಮದ್ಯ (Liquor) ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಿಸಿದ್ದಾರೆ. ಕೆಎಸ್​​ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ, ಅಬಕಾರಿ ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ದಿನ ಮದ್ಯ ಖರೀದಿ ಮಾಡಿದ್ದರೆ ರಾಜ್ಯದಲ್ಲಿ 70 ಕೋಟಿ ರೂಪಾಯಿ ನಷ್ಟ. ಹಾಗಾಗಿ ವಿಭಾಗಮಟ್ಟದಲ್ಲಿ ಮದ್ಯ ಖರೀದಿ ನಿಲ್ಲಿಸಲು ನಿರ್ಧಾರ ಮಾಡಲಾಗಿದೆ. ನಾಳೆ ಕಲಬುರಗಿ ವಿಭಾಗದಲ್ಲಿಯೂ ಮದ್ಯ ವ್ಯಾಪಾರಿಗಳಿಂದ ಮುಷ್ಕರ ಮಾಡಲಾಗುತ್ತಿದೆ. ಹೊಸಪೇಟೆ, ಬೆಳಗಾವಿ, ಮೈಸೂರು ಮಂಗಳೂರು ವಿಭಾಗದಲ್ಲಿ ಮದ್ಯ ಸಿಗಲ್ಲ. ಮೇ ತಿಂಗಳ 19ನೇ ತಾರೀಖಿನವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ.

ಮುಷ್ಕರ್​ ಎಲ್ಲೆಲ್ಲಿ ಮತ್ತು ಯಾವಾಗ!

ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ.

ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ.

ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ,ಉಡುಪಿ, ಉತ್ತರಕನ್ನಡ.

ಮೇ 17ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ,ತುಮಕೂರ್.

ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆ ಎಸ್ ಬಿ ಸಿ ಎಲ್ ಡಿಪೋಗಳಲ್ಲಿ ಮಧ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 4:28 pm, Thu, 5 May 22