Kollur Mookambika temple: ಏ. 30 ರಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಅದಿಪರಾಶಕ್ತಿ ಶ್ರೀ ಕ್ಷೇತ್ರದಲ್ಲಿ ಮರುಕಳಿಸಲಿದೆ ಗತ ವೈಭವ

Kollur Mookambika temple Astabandha Brahmakalashotsava: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಇದೇ ಏಪ್ರಿಲ್ 30 ರಿಂದ ಮೇ 11 ನೇ ತಾರೀಕಿನವರೆಗೂ ನಡೆಯಲಿದೆ.

Kollur Mookambika temple: ಏ. 30 ರಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಅದಿಪರಾಶಕ್ತಿ ಶ್ರೀ ಕ್ಷೇತ್ರದಲ್ಲಿ ಮರುಕಳಿಸಲಿದೆ ಗತ ವೈಭವ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
Follow us
ಸಾಧು ಶ್ರೀನಾಥ್​
|

Updated on: Apr 17, 2023 | 8:23 AM

ಇಪ್ಪತ್ತೊಂದು ವರ್ಷಗಳ ನಂತರ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ (Kollur Mookambika temples) ಭಕ್ತಾಧಿಗಳ ಪಾಲಿಗೆ ಮತ್ತೆ ಆ ಸುವರ್ಣ ಘಳಿಗೆ ಬಂದಿದೆ. ಉಡುಪಿ (Udupi) ಜಿಲ್ಲೆಯ ಬೈಂದೂರು (Baindur) ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ (Astabandha Brahmakalashotsava) ಹಾಗೂ ಶ್ರೀ ಮನ್ಮಹಾ ರಥೋತ್ಸವವು ಇದೇ ಏಪ್ರಿಲ್ 30 ರಿಂದ ಮೇ 11 ನೇ ತಾರೀಕಿನವರೆಗೂ ನಡೆಯಲಿದೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ಸಮಿತಿಯ ಅಧ್ಯಕ್ಷತೆಯನ್ನ ಶ್ರೀ ಚಂದ್ರಶೇಖರ ಶೆಟ್ಟಿಯವರು ವಹಿಸಿದ್ದು, ಈಗಾಗಲೇ ಹಲವು ಸಮಿತಿಗಳ ರಚಿಸಿ ಪೂರ್ವಾ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ವಿವರಗಳು ಹೀಗಿವೆ:

ಏ. 30 ರಂದು ಪ್ರಾತ: ಕಾಲ- ಗುರು ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಬ್ರಹ್ಮಕೂರ್ಚಹೋಮ, ಮಧುಪರ್ಕ, ನಾಂದೀ ಪುಣ್ಯಾಹ, ಮಹಾಗಣಪತಿ ಹೋಮ, ಮೃತ್ತಿಕಾಹರಣ, ಬೀಜವಾಪನ, ಕೌತುಕ ಬಂಧನ, ಚತುರ್ವೇದ ಪಾರಾಯಣ ಆರಂಭ ಇತ್ಯಾದಿ ಪೂರ್ವಾರಂಗ ಕಾರ್ಯಕ್ರಮ.

ರಾತ್ರಿ- ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತುಹೋಮ, ರಾಕ್ಷೋಘ್ನಹೋಮ, ಕಲಶಸ್ಥಾಪನೆ, ಅಸ್ತ್ರಯಾಗ, ಅಗ್ನಿ ಜನನ, ಅಧಿವಾಸಹೋಮ ಇತ್ಯಾದಿ

ಮೇ 1 ರಂದು ಪ್ರಾತ:ಕಾಲ- ನವಗ್ರಹ ಹೋಮ, ಶಾಂತಿ ಹೋಮ, ಬಂಧಶಿಥಿಲಾ ಪ್ರಾಯಶ್ಚಿತ ಹೋಮ, ಮಹಾಪೂಜೆ ರಾತ್ರಿ- ಪ್ರಸಾಧ ಶುದ್ಧಿ, ಲಿಂಗ ಶುದ್ಧಿ, ಬಂಧಕಾಲಾಸಂಕೋಚ, ಶಕ್ತಿಹೋಮ, ತತ್ವಹೋಮ, ಪೀಠಚಲನೆ, ನಾಳಶೋಧನ, ಆಧಿವಾಸಹೋಮ, ಪೀಠಾಧಿವಾಸ, ಕ್ಷೇತ್ರಪಾಲಪೂಜೆ, ಕವಾಟಬಂಧನಮೇ 2 ರಂದು (ಸಾರ್ವಜನಿಕರಿಗೆ ಪ್ರವೇಶವಿಲ್ಲ)

ಅಧಿವಾಸ ಹೋಮ, ಪೀಠ ಪ್ರತಿಷ್ಠಾ ಹೋಮ, ಬಂಧಶುದ್ಧಿ ಹೋಮ, ಸುಮುಹೂರ್ತದಲ್ಲಿ ಅಷ್ಟಬಂಧ ಸ್ಥಾಪನೆ, ಕಲಾವೃದ್ಧಿ ಹೋಮ, ತತ್ವ ಹೋಮ, ಪರಿಪೂರ್ಣ ಭಾವನಾ, ಸಿಂಹಯೋಗ ಧ್ವಜಾರೋಹಣ,‌ ಧ್ವಜಪೂಜೆ, ಕ್ಷೇತ್ರಪಾಲಪೂಜೆ, ಮೂಲಮಂತ್ರಹವನ

ರಾತ್ರಿ- ಯೋಗ ಶಾಲೆಯಲ್ಲಿ ನಿತ್ಯ ಹೋಮ, ದಿಶಾಹೋಮ, ಧ್ವಜಪೂಜೆ, ಕ್ಷೇತ್ರಪಾಲಪೂಜೆ, ಅಷ್ಟಾವಧಾನ

ಮೇ 3 ರಂದು ( ಸಾರ್ವಜನಿಕರಿಗೆ ದರ್ಶನವಿಲ್ಲ)

ಪ್ರಾತ:ಕಾಲ- ಅಧಿವಾಸ ಹೋಮ, ಶಾಂತಿ, ಪ್ರಾಯಶ್ಚಿತ, ಮಹಾಶಾಂತಿ, ಮಹಾಪ್ರಾಯಶ್ಚಿತ್ತ,

ರಾತ್ರಿ- ಶ್ರೀ ದೇವಿ ಗಾಯತ್ರಿಹೋಮ,‌ ಪರಿವಾರಹೋಮ, ಅಷ್ಟಬಂಧ ಸ್ಥಾಪನಾಂಗಹೋಮ, ನಿತ್ಯಹೋಮ‌ ಮೂಲಮಂತ್ರಾದಿಹೋಮ, ಧ್ವಜಪೂಜೆ, ಕ್ಷೇತ್ರಪಾಲಪೂಜೆ, ಸಹಸ್ರಕಲಶಮಂಡಲೋದ್ಧಾರ.

ಮೇ 4 ರಂದು (ದೇವಿಯ ದರ್ಶನ ಪ್ರಾರಂಭ)

ಪ್ರಾತ‌: ಕಾಲ- ನಿರೀಕ್ಷೆ, ತತ್ವಹೋಮ, ಸೂಕ್ತಹೋಮ

ಸಂಜೆ- ಸಹಸ್ರಕಲಶಸ್ಥಾಪನೆ ಬ್ರಹ್ಮಕಲಶಾಧಿವಾಸಹೋಮ

ರಾತ್ರಿ- ನಿತ್ಯಹೋಮ, ಅಧಿವಾಸಹೋಮ, ಧ್ವಜಪೂಜೆ, ಕ್ಷೇತ್ರಪಾಲಪೂಜೆ, ಅಷ್ಟಾವಧಾನ

ಮೇ 5 ರಂದು ಪ್ರಾತ : ಕಾಲ- ಯಾಗೇಶ್ವರೀಹೋಮ, ಸಹಸ್ರ ಕಲಶಗಳೊಂದಿಗೆ ಬ್ರಹ್ಮಕಲಾಭಿಷೇಕ, ಮಹಾಪೂಜೆ ಧ್ವಜಪೂಜೆ, ಕ್ಷೇತ್ರಪಾಲಪೂಜೆ, ಚತುರ್ವೇದ, ಪಾರಾಯಣ ಸಮಾಪ್ತಿ

ರಾತ್ರಿ- ಭೇರಿತಾಡನ, ಪಳಹಪೂಜೆ, ವಿಶೇಷಬಲಿ ಆರಂಭ, ಪಲ್ಲಕ್ಕಿ ಉತ್ಸವ, ಮಯೂರಾರೋಹಣೋತ್ಸವ, ಡೋಲಾರೋಹಣೋತ್ಸವ, ಪುಪ್ಪಮಂಡಪೋತ್ಸವ

ಮೇ 6 ರಂದು ಪ್ರಾತಃ ಕಾಲ – ಅಧಿವಾಸಹೋಮ ಸಂಜೆ- ಮಾಂಗಲ್ಯೋತ್ಸವ ರಾತ್ರಿ- ವೃಷಭರೋಹಣೋತ್ಸವ

ಮೇ 7 ರಂದು ಪ್ರಾತಃ ಕಾಲ-ಅಧಿವಾಸಹೋಮ ಸಂಜೆ- ಮಾಂಗಲ್ಯೋತ್ಸವ ರಾತ್ರಿ- ಗಜಾರೋಹಣೋತ್ಸವ

ಮೇ 8 ರಂದು ಪ್ರಾತಃ ಕಾಲ- ಅಧಿವಾಸಹೋಮ ಇತ್ಯಾದಿ ಸಂಜೆ- ಮಾಂಗಲ್ಯೋತ್ಸವ ರಾತ್ರಿ- ಹಿರೇರಂಗಪೂಜೆ, ಸಿಂಹಾರೋಹಣೋತ್ಸವ

ಮೇ 9 ರಂದು ಪ್ರಾತಃ ಕಾಲ – ಅಧಿವಾಸಹೋಮ, ರಥಶುದ್ಧಿಹೋಮ, ಮಹಾಪೂಜೆ, ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ

ರಾತ್ರಿ- ಕ್ಷೇತ್ರಪಾಲಪೂಜೆ, ಭೂತಬಲಿ

ಮೇ 10 ರಂದು ಪ್ರಾತ: ಕಾಲ – ಅಧಿವಾಸಹೋಮ, ಮಹಾಪೂಜೆ ರಾತ್ರಿ- ಯಾತ್ರಾಹೋಮ, ಓಕುಳಿ, ಚೂರ್ಣೋತ್ಸವ, ಅವಭೃತಸ್ನಾನ, ಮೃಗಯಾ

ಮೇ 11 ರಂದು ಪ್ರಾತ: ಕಾಲ- ಅಶ್ವಾರೋಹಣೋತ್ಸವ, ಮಹಾಪೂರ್ಣಾಹುತಿ, ಧ್ವಜಾವರೋಹಣ, ಪೂರ್ಣಕುಂಭಾಭಿಷೇಕ, ಆಶೀರ್ವಚನ

ಸುಮಾರು 21 ವರ್ಷಗಳ ನಂತರ ಕೊಲ್ಲೂರು ಮುಕಾಂಬಿಕೆ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ನಡೆಯುತ್ತಿದ್ದು, ಸಮಕಾಲೀನ ಪೀಳಿಗೆಯ ಜೀವಮಾನದಲ್ಲಿ ಒದಗಿ ಬಂದಿರುವ ಈ ಅಪೂರ್ವ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಿಯ ಸೇವೆಯಲ್ಲಿ ತೊಡಗಿಸಿಕೊಂಡು ದೇವಿಯ ಕೃಪೆಗೆ ಪಾತ್ರರಾಗುವ ಸದಾವಕಾಶ ಲಭಿಸಿದೆ.

ಈ ನಿಟ್ಟಿನಲ್ಲಿ ಭಕ್ತಾಧಿಗಳಿ ಅಪಾರ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಈ ಶುಭ ಕಾರ್ಯವನ್ನು ಯಶಸ್ವಿಗೊಳಿಸುವ ಮೂಲಕ ಮೂಕಾಂಬಿಕೆ ದೇವಿಯ ಕೃಪೆಗೆ ಪಾತ್ರರಾಗುವ ಸದವಕಾಶ ಲಭಿಸಿದೆ ಎಂದು ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ದೇವಸ್ಥಾನ, ಶ್ರೀಕ್ಷೇತ್ರ ಕೊಲ್ಲೂರು (Temple management committee president Keradi Chandrashekar Shetty) ತಿಳಿಸಿದ್ದಾರೆ.

ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಇದೇ ಏ. 30 ರಿಂದ ಮೇ. 11 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವುದು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತವಾಗಿ 1800 ಕಲಶ ಸ್ಥಾಪನೆಯನ್ನ ಮೇ. 4ನೇ ತಾರೀಕಿನಂದು ಹಮ್ಮಿಕೊಂಡಿದ್ದೇವೆ. ಈ ಕಲಶಾಭಿಷೇಕವನ್ನ 5 ನೇ ತಾರೀಕಿನಂದು ನೆರವೇರಿಸುತ್ತಿದ್ದೇವೆ. 1 ಸಾವಿರ ಬೆಳ್ಳಿಯ ಕಲಶ ಹಾಗೂ 8 ಚಿನ್ನದ ಕಲಶವನ್ನ ಅಭಿಷೇಕಕ್ಕಾಗಿ ಬಳಸುತ್ತಿದ್ದೇವೆ. ಭಕ್ತರು ಈ ಕಲಶವನ್ನ ತಾಯಿಗೆ ಅರ್ಪಿಸುವುದರ ಮುಖಾಂತರ ಪ್ರಸಾದ ರೂಪದಲ್ಲಿ ಅದನ್ನ ಹಿಂಪಡೆಯಬಹುದು.

ಈ ವಿಶೇಷ ಸಂದರ್ಭದಲ್ಲಿ ಭಕ್ತಾಧಿಗಳು ತನುಮನಧನ ಸೇವೆ ಸಲ್ಲಿಸುವ ಮೂಲಕ ತಾಯಿಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಕಾಣಿಕೆ ಅಥವಾ ವಿಶೇಷ ಪೂಜೆಯ ನಿಧಿ ಸಮರ್ಪಣೆಯನ್ನ ಚೆಕ್ ಅಥವಾ ಡಿ.ಡಿ. ಅಲ್ಲದೇ ಕ್ಯೂ ಆರ್ ಕೋಡ್ ಮುಖಾಂತರ ಸಲ್ಲಿಸಬಹುದು. ದೇವಸ್ಥಾನದ ಆಫೀಸ್ ಅಥವಾ ಕೌಂಟರ್ ನಲ್ಲಿ ಮಾಹಿತಿಯನ್ನ ಪಡೆದು ಸಮರ್ಪಿಸಬಹುದು. ದೇವಸ್ಥಾನದ ವತಿಯಿಂದ ಯಾವುದೇ ಮಧ್ಯವರ್ತಿಗಳು ಇಟ್ಟಿರುವುದಿಲ್ಲ. ಭಕ್ತರು ಯಾವುದೇ ಮಧ್ಯವರ್ತಿಗಳನ್ನ ಸಂಪರ್ಕಿಸದೇ ನಗದು ರೀತಿಯ ದೇಣಿಗೆಯನ್ನ ನೀಡದೇ… ನೇರವಾಗಿ ದೇವಸ್ಥಾನದ ಆಫೀಸ್ ನಲ್ಲಿ ವಿಚಾರಿಸಿ ಪಾವತಿಸಬೇಕಾಗಿ ದೇವಸ್ಥಾನದ ಪರವಾಗಿ ಚಂದ್ರಶೇಖರ ಶೆಟ್ಟಿ ಕೋರಿದ್ದಾರೆ‌.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್