ಕಾರಿನಲ್ಲೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಜೋಡಿ: ವಿಷಯ ತಿಳಿಸಿದ್ದರೆ ಮದುವೆ ಮಾಡಿಸುತ್ತಿದ್ದೆವು ಎಂದ ಪೋಷಕರು

ಕಾರಿನಲ್ಲೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಜೋಡಿ: ವಿಷಯ ತಿಳಿಸಿದ್ದರೆ ಮದುವೆ ಮಾಡಿಸುತ್ತಿದ್ದೆವು ಎಂದ ಪೋಷಕರು
ಆತ್ಮಹತ್ಯೆಗೆ ಹರಣಾದ ಜೋಡಿ

ಉಡುಪಿಯ ರುದ್ರಭೂಮಿಯಲ್ಲಿ ಮಣ್ಣು ಎರಡೂ ಕಡೆಯ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಕುಟುಂಬಸ್ಥರು ಅಳಲನ್ನ ತೋಡಿಕೊಂಡಿದ್ದು, ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 23, 2022 | 8:30 AM

ಉಡುಪಿ: ಯುವಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿಗೆ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಬ್ರಹ್ಮಾವರ ತಾಲೂಕಿನ ಮಂದಾರ್ಥಿ‌ ಸಮೀಪದ ಹೆಗ್ಗುಂಜೆ ಗ್ರಾಮದಲ್ಲಿ ದುರ್ಘಟನೆ ನಡೆದಿತ್ತು. ಬೆಂಗಳೂರು ಆರ್​.ಟಿ ನಗರದ ಯಶವಂತ (23) ಜ್ಯೋತಿ (19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮಂಗಳೂರಿನಲ್ಲಿ ‌ಬಾಡಿಗೆ ಕಾರು ಪಡೆದು ಹೆಗ್ಗುಂಜೆಯಲ್ಲಿ ಕಾರಿನ ಹಿಂಬದಿ ಸೀಟಲ್ಲಿ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಬ್ಬಿಕೊಂಡೇ ಬೆಂಕಿಯಲ್ಲಿ‌ ಯುವಜೋಡಿ ಬೆಂದಿದೆ. ಮಕ್ಕಳ ಮೃತದೇಹ ಕಾಣಲು ಉಡುಪಿಗೆ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ಬಹುತೇಕ ಸುಟ್ಟುಹೋದ ದೇಹವನ್ನು ಉಡುಪಿಯ ರುದ್ರಭೂಮಿಯಲ್ಲಿ ಮಣ್ಣು ಎರಡೂ ಕಡೆಯ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಕುಟುಂಬಸ್ಥರು ಅಳಲನ್ನ ತೋಡಿಕೊಂಡಿದ್ದು, ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ. ಪ್ರೀತಿ ವಿಷಯ ಪ್ರಸ್ತಾಪ ಮಾಡಿದಿದ್ದರೆ ಕೂತು ಮಾತಾಡಿ ಮದುವೆ ಆದರೂ ಮಾಡಿಸ್ತಾಯಿದ್ದೆವು. ಹಣ ಕಾಲಿಯಾಗುವವರೆಗೆ ಸುತ್ತಾಡಿ ಕೈಯಲ್ಲಿ ಹಣ ಇಲ್ಲದಿದ್ದಾಗ ಬದುಕುವ ಧೈರ್ಯ ಇಲ್ಲವಾಯಿತು. ಕಷ್ಟ ಪಟ್ಟು ದುಡಿದು ಸಾಕುವ ತಾಕತ್ತು ಇಲ್ಲದ ಮೇಲೆ ಪ್ರೀತಿ ಮಾಡಿ ಏಕೆ ಓಡಿಹೋಗಬೇಕಿತ್ತು ಎಂದು ಹೇಳಿದರು.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಬಂದ ಮೆಸೇಜ್ ಅನ್ನು ಯಾರೂ ನೋಡದ ಹಾಗೆ ಮಾಡಬಹುದು: ಹೇಗೆ?

ಪ್ರೀತಿ ಮಾಡಿ ಹುಡುಗಿಯನ್ನ ಕರೆದುಕೊಂಡು ಹೋಗಿ ಶೋಕಿ ಮಾಡಬಾರದು. ಕೂಲಿ ನಾಲಿ ಮಾಡಿ ಹುಡುಗಿಯನ್ನು ಸಾಕಬೇಕು. ಭಯಬಿದ್ದು ಜೀವ ತೆಗೆದುಕೊಳ್ಳೋದು ತುಂಬಾ ‌ತಪ್ಪು. ಹುಡುಗಿ ಬಿಕಾಂ ಓದಿದ್ದಾಳೆ ಬುದ್ದಿವಂತೆ ಕೂಡ ಆದರೆ ಭಯದ ಸ್ವಭಾವ. ಎರಡು ವರ್ಷದಿಂದ ಮನೆಯಲ್ಲೇ ಇದ್ಲು ಎಲ್ಲೂ ಆಚೆ ಹೋಗ್ತಿರಲಿಲ್ಲ. ಅದ್ಹೇಗೆ ಈ ಹುಡುಗನೊಂದಿಗೆ ಸಂಪರ್ಕ ಆಯಿತು ಗೊತ್ತಿಲ್ಲ. ಬುಧವಾರ ಬೆಳಗ್ಗೆ ೧೧.೩೦ಕ್ಕೆ ಇಂಟರ್ ವ್ಯೂ ಹೇಳಿ ಹೊರಗೆ ಹೋದ ಮನೆ ಮಗಳು ಸಂಜೆವರೆಗೂ ಬಂದಿಲ್ಲ. ಮರುದಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಭಾನುವಾರ ಮುಂಜಾನೆ ೩ಗಂಟೆ ಸುಮಾರಿಗೆ ಈ ಆತ್ಮಹತ್ಯೆ ಗಮನಕ್ಕೆ ಬಂದಿದೆ. ಮಂಗಳೂರಿನಲ್ಲಿ ೧೨ ಸಾವಿರಕ್ಕೆ ಬಾಡಿಗೆ ಮನೆಯಲ್ಲೂ ಇದ್ದಿದ್ದಾರೆ. ತದನಂತರ ಸುತ್ತಾಡಲು ಹೋಗಿ ಹಣ ಖಾಲಿಯಾದ ಮೇಲೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ೨೦ ರಿಂದ ೩೦ ಸಾವಿರ ಹಣ ಖರ್ಚು ಮಾಡಿದ್ದಾರೆ. ಚೀಟಿಯಲ್ಲಿ ಕೂಡ ಬದುಕಲು ಕಷ್ಟವಾಗಿದೆ. ಮನೆಗೆ ಬಂದರೆ ಮದುವೆ ಮಾಡಿಸುತ್ತಿರೋ ಅನ್ನೋದು ಅನುಮಾನ ಈ ರೀತಿ ಬರೆದಿರೋ ಪತ್ರ ಸಿಕ್ಕಿದೆ. ಮನೆಯವರಿಗೂ ಈ ಬಗ್ಗೆ ಲೊಕೇಶನ್ ಸಹಿತ ಮೆಸೆಜ್ ರವಾನಿಸಿದ್ದಾರೆ. ಎರಡು ಕುಟುಂಬದ ನಡುವೆ ಅನುಮಾನ ಇಲ್ಲ ‌ಇದ್ದಿದ್ದರೆ ಹೊಡೆದಾಟ ಆಗುತ್ತಿತ್ತು. ಹುಡುಗ ಹುಡುಗಿ ಇಬ್ಬರದ್ದು ತಪ್ಪಿದೆ ಈ ತಪ್ಪಿನಿಂದ ಈ ಅನಾಹುತ ‌ನಡೆದಿದೆ ಎಂದು ಹುಡುಗಿ ಸಂಬಂಧಿ ಧನರಾಜು ಹಾಗೂ ಸೀನಪ್ಪ ಮಾಧ್ಯಮದ ಜೊತೆ ನೋವನ್ನ ಹಂಚಿಕೊಂಡಿದ್ದಾರೆ.

ಇನ್ನು ಮೃತ ಯಶವಂತ್ ತಂದೆ ವೆಂಕಟರಾವ್ ಮಾತನಾಡಿದ್ದು, ನನ್ನ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇಲ್ಲ. ನನ್ನ ಮಗ ತುಂಬ ಮುಗ್ಧ ಸ್ವಭಾವದವನು. ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ. ಬುಧವಾರ ಮಧ್ಯಾಹ್ನ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಕಂಪ್ಯೂಟರ್ ತರಗತಿಗೆ ಎಂದು ಹೋಗಿದ್ದಾನೆ. ಆ ಬಳಿಕ ಮೊಬೈಕ್ ಸ್ವಿಚ್ ಆಫ್ ಮಾಡಿದವ ಈವರೆಗೂ ಆನ್ ಮಾಡಿಲ್ಲ. ಬೇರೆಯವರ ಮೊಬೈಲ್ ನಿಂದ ೩ ಗಂಟೆ ಏಳು ನಿಮಿಷಕ್ಕೆ ಲಾಸ್ಟ್ ಮೆಸೆಜ್ ಮಾಡಿದ್ದಾನೆ. ಸಾರಿ ತಂದೆ ತಾಯಿಗೆ ತುಂಬ ನೋವು ಕೊಟ್ಟಿದ್ದೇನೆ. ನಾನು ಒಬ್ಬನೇ ಇರಕ್ಕಾಗುತ್ತಿಲ್ಲ. ನಾನು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಹುಡುಗಿ ಬಗ್ಗೆ ಈವರೆಗೆ ನಮಗೆ ಗೊತ್ತೇ ಇಲ್ಲ. ಈ ಮೊದಲು ಮನೆಯಲ್ಲೂ ಹೇಳಿಕೊಂಡಿಲ್ಲ. ಹೊರಗೆ ಸ್ನೇಹಿತರೂ ಕಡಿಮೆ ಹೆಚ್ವಾಗಿ ಮನೆಯಲ್ಲಿ ಇರುತ್ತಿದ್ದ. ಟಿವಿ ನೋಡುವುದು ಬಿಟ್ಟರೆ‌ ಮೊಬೈಲ್ ನಲ್ಲೇ ಹೆಚ್ಚು ಇರುತ್ತಿದ್ದ. ಕೇಳಿದಾಗಲೆಲ್ಲ ಬ್ಯಾಂಕ್ ಎಕ್ಸಾಮ್​ಗೆ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಿದ್ದ. ಆದರೆ ಈ ಘಟನೆ ಬಳಿಕ ನಮಗೆ ಶಾಕ್ ಆಗಿದೆ. ಪ್ರೀತಿ ಬಗ್ಗೆ ಹೇಳಿದ್ದರೆ ನಾವೇ ಮದುವೆ ಮಾಡಿ ಕೊಡುತ್ತಿದ್ದೆವು. ಈ ಕೆಟ್ಟ ನಿರ್ಧಾರಕ್ಕೆ ಬರುವ ಮೊದಲು ಹೆತ್ತವರಿಗೆ ಕರೆ ಮಾಡಬಹುದಿತ್ತು ಎಂದು ಹೇಳಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಮಾಡಿದ ಬೆನ್ನಲ್ಲೆ ಶವದ ಅಂತ್ಯಸಂಸ್ಕಾರ ಪೂರ್ಣಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಆಗಮಿಸಿದ್ದ ಎರಡು ಕುಟುಂಬಸ್ಥರು, ಸಂಪೂರ್ಣ ಸುಟ್ಟು ಕರಕಲಾಗಿದ್ದ ಶವ ನೋಡಿ ಕಂಗಾಲಾಗಿದ್ದಾರೆ. ಮರಣೋತ್ತರ ಪೂರ್ಣಗೊಂಡ ಬೆನ್ನಲ್ಲೇ ಅಂತಿಮ ಸಂಸ್ಕಾರ ನಡೆಸಲು ನಿರ್ಧಾರ ಮಾಡಿದ್ದರು. ಇಂದ್ರಾಳಿಯ ಸ್ಮಶಾನದಲ್ಲಿ ರಾತ್ರಿ ಒಂದು ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದು, ಕುಟುಂಬಸ್ಥರು ಬೂದಿ ಕೊಂಡೊಯ್ದರು. ಶವ ಸಂಪೂರ್ಣ ಸುಟ್ಟು ಕರಕಲಾದ ಕಾರಣ ಉಡುಪಿಯಲ್ಲಿ ಶವಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada