ಸೆಪ್ಟೆಂಬರ್ 2ನೇ ವಾರದಿಂದ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ತರಗತಿ ಆರಂಭ
ವ್ಯಾಕ್ಸಿನೇಶನ್ ಪಡೆಯದಿದ್ದಲ್ಲಿ ವಿಶ್ವವಿದ್ಯಾಲಯದಿಂದ ಉಚಿತ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.
ಉಡುಪಿ: ಮಣಿಪಾಲ ವಿಶ್ವವಿದ್ಯಾಲಯದಲ್ಲಿ (Manipal University) ಸೆಪ್ಟೆಂಬರ್ ಎರಡನೇ ವಾರದಿಂದ ತರಗತಿ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಕೊವಿಡ್ ನಿಯಮಗಳನ್ನು ಅನುಸರಿಸಿ ತರಗತಿಗಳು ಆರಂಭವಾಗಲಿದೆ. ಒಂದು ವಾರ ಕ್ವಾರಂಟೈನ್ ಬಳಿಕ ತರಗತಿಗೆ ತೆರಳಲು ಅನುಮತಿ ನೀಡಲಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೊರ ರಾಜ್ಯದಿಂದ ಕಾಲೇಜಿಗೆ ಆಗಮಿಸುವಾಗಲೂ ಸ್ಕ್ರೀನಿಂಗ್ ಕಡ್ಡಾಯವಾಗಲಿದೆ.
ವ್ಯಾಕ್ಸಿನೇಶನ್ ಪಡೆಯದಿದ್ದಲ್ಲಿ ವಿಶ್ವವಿದ್ಯಾಲಯದಿಂದ ಉಚಿತ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ಹೊರ ರಾಜ್ಯಕ್ಕೆ ತೆರಳುವ ಮೊದಲು ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮುಂದುವರೆಯಲಿದೆ. ಆನ್ಲೈನ್ ತರಗತಿ ಮುಂದುವರೆಯಲಿದೆ. ಮಣಿಪಾಲ ಹೈಯರ್ ಎಜ್ಯುಕೇಶನ್ ಹಾಗೂ ಟ್ಯಾಪ್ಮಿಯಲ್ಲಿ ನಿಯಮದಂತೆ ತರಗತಿ ಆರಂಭಗೊಳ್ಳಲಿದೆ.
ಇದನ್ನೂ ಓದಿ:
Upanishads: ಪೋಲಂಡ್ನ ವಿಶ್ವವಿದ್ಯಾನಿಲಯವೊಂದರ ಲೈಬ್ರರಿ ಗೋಡೆಯಲ್ಲಿವೆ ಉಪನಿಷತ್ ಬರಹಗಳು!
(Manipal University classes starts from 2nd week of September)