ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ, ಸಿಎಫ್ಐ ಕರಾಳ ದಿನಾಚರಣೆ- ಅಲ್ಪಬುದ್ಧಿಯವರು ಹೀಗೆ ಹೇಳ್ತಾರೆ ಎಂದ ಸಚಿವ ಸುನೀಲ್ ಕುಮಾರ್
ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ ಎಂದು ಸಿಎಫ್ಐ ಸಂಘಟನೆಯಿಂದ ಕರಾಳ ದಿನಾಚರಣೆ ಹಿನ್ನೆಲೆ ಯಾರೋ ಅಲ್ಪ ಬುದ್ಧಿ ಇರುವವರು ಈ ರೀತಿಯ ಮಾತುಗಳನ್ನಾಡುತ್ತಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. -ಸಚಿವ ಸುನೀಲ್ ಕುಮಾರ್
ಉಡುಪಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವಿಚಾರಕ್ಕೆ ಸಂಬಂಧಿಸಿ ಅಲ್ಪ ಬುದ್ಧಿ ಇರುವವರು ಈ ರೀತಿ ಮಾತಾಡುತ್ತಾರೆ ಎಂದು ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ ಎಂದು ಸಿಎಫ್ಐ ಸಂಘಟನೆಯಿಂದ ಕರಾಳ ದಿನಾಚರಣೆ ಹಿನ್ನೆಲೆ ಯಾರೋ ಅಲ್ಪ ಬುದ್ಧಿ ಇರುವವರು ಈ ರೀತಿಯ ಮಾತುಗಳನ್ನಾಡುತ್ತಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ನಮ್ಮ ಭಾಷೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಅರ್ಧಂಬರ್ಧ ತಿಳಿದುಕೊಂಡವರು ಬೇರೆ ಬೇರೆ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ಸಿಗಲಿದೆ. ಪೂರ್ಣ ವಿವರ ತಿಳಿದು ಮಾತನಾಡುವುದು ಉತ್ತಮ ಎಂದು ಉಡುಪಿಯಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿದ್ರು.
ಇನ್ನು ಇದೇ ವೇಳೆ ಹಾನಗಲ್, ಸಿಂದಗಿ ಫಲಿತಾಂಶದ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್, ಹಾನಗಲ್, ಸಿಂದಗಿಯಲ್ಲಿ ಬಿಜೆಪಿ ಪರ ಫಲಿತಾಂಶ ಬರುತ್ತೆ. ನಾಳಿನ ಫಲಿತಾಂಶ ಕಾಂಗ್ರೆಸ್‌ಗೆ ನಿರಾಶಾದಾಯಕವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ ಎಂದಿದ್ದಾರೆ.
ನಾಡಗೀತೆಯ ಬಗ್ಗೆ ನಾವು ಬಹಳ ಸ್ಪಷ್ಟವಾಗಿದ್ದೇವೆ. ರಾಗ ಸಂಯೋಜನೆ, ಕಾಲಮಿತಿ ನಿರ್ಧಾರಕ್ಕೆ ರಾಜ್ಯ ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಿದೆ. ಇಂದು ಅಥವಾ ನಾಳೆಯೊಳಗೆ ಅಂತಿರೂಪ ಸಿಗುತ್ತೆ. ಆಗ ನಾಡಗೀತೆಯ ಅಂತಿಮ ರೂಪ ಪ್ರಕಟಿಸುತ್ತೇವೆ ಎಂದು ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಕ್ತಿದೇವಿ ನೋಡಲು ಮುಗಿಬಿದ್ದ ಭಕ್ತರು; ಹಾಸನಾಂಬೆ ದರ್ಶನಕ್ಕೆ ಇನ್ನು ಐದು ದಿನಗಳು ಮಾತ್ರ ಬಾಕಿ