ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ಬೆಲೆಕೊಡುತ್ತಿಲ್ಲ; ಸರ್ಕಾರದ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್

ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಹಿನ್ನೆಲೆ ಘಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಫಾಜಿಲ್ ಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ.

ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ಬೆಲೆಕೊಡುತ್ತಿಲ್ಲ; ಸರ್ಕಾರದ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್
ಶ್ರೀ ರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್
Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2022 | 8:59 AM

ಉಡುಪಿ: ಹಿಂದೂ ಯುವಕರ ಹತ್ಯೆ ನಡೆಯುತ್ತಿರುವುದು ಸರ್ಕಾರದ (government) ವೈಫಲ್ಯದಿಂದ. ಬಿಜೆಪಿ‌ ನಾಯಕರು ಅವರ ಮಕ್ಕಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ಬೆಲೆಕೊಡುತ್ತಿಲ್ಲ ಎಂದು ನಗರದಲ್ಲಿ ಶ್ರೀ ರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು. ಪ್ರವೀಣ್ ಸಾವಿನ ದಿನ‌ ಕಾರ್ಯಕರ್ತರ ಆಕ್ರೋಶದ ಸ್ಯಾಂಪಲ್ ‌ಬಿಜೆಪಿ ಸರ್ಕಾರ ನೋಡಿದೆ. ಹಿಂದೂ ಕಾರ್ಯಕತರನ್ನು ಕಡೆಗೆ ಗಮನ ಹರಿಸದ ಸರ್ಕಾರಕ್ಕೆ ಧಿಕ್ಕಾರ. ಸಾವಿರಾರು ಯುವಕ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಆಕ್ರೋಶ ಹೊರಹಾಕಿರುವುದು ಸ್ವಾಗತ ಅರ್ಹ ಎಂದು ಹೇಳಿದರು.

ಇದನ್ನೂ ಓದಿ; ಮಂಗಳೂರಿನ ಸುರತ್ಕಲ್​​ನಲ್ಲಿ ಫಾಜಿಲ್​ ಹತ್ಯೆ ಪ್ರಕರಣ: ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದ ಮಾಜಿ ಸಚಿವ ಯು.ಟಿ.ಖಾದರ್

ಇನ್ನೂ ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣ ಸಂಬಂಧ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಬಿಜೆಪಿ ಚಾಮುಂಡೇಶ್ವರಿ ಗ್ರಾಮಾಂತರ ಯುವ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ನೀಡಿದ್ದು,
ಯುವಮೋರ್ಚಾ ಅಧ್ಯಕ್ಷ ಗೊರೂರು ಚೇತನ್ ಪ್ರಧಾನ ಕಾರ್ಯದರ್ಶಿ ಶಿವು, ನಂದೀಶ್, ಕಾರ್ಯದರ್ಶಿಗಳಾದ ರಿತೇಶ್, ಮೋಹನ್, ಸಂಜು, ಮಹದೇವಸ್ವಾಮಿ, ಉಪಾಧ್ಯಕ್ಷರಾದ ಉದಯ್, ಕಿರಣ್, ಜಿಲ್ಲಾ ಕಾರ್ಯದರ್ಶಿ ನೇಹಾ, ನಗರ ಸಾಮಾಜಿಕ ಜಾಲತಾಣ ಒಬಿಸಿ ಮೋರ್ಚಾದ ಜೀವನ್, ಮೈಸೂರು ನಗರ ಕಾರ್ಯಕಾರಣಿ ಸದಸ್ಯ ಶಿವಾನಂದ್ ರಾವ್ ತಾಲ್ಲೂಕು ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ ನಾಗರಾಜ್ ರಾಜೀನಾಮೆ ನೀಡಿದ್ದಾರೆ.

ಫಾಜಿಲ್​ ಮಂಗಲಪೇಟೆ ಹತ್ಯೆ; ಪೊಲೀಸ್ ಬಂದೋಬಸ್ತ್​ 

ಮಂಗಳೂರು ನಗರದ ಹೊರವಲಯದ ಸುರತ್ಕಲ್​​ನಲ್ಲಿ ಮತ್ತೊಬ್ಬ ಯುವಕನ ಕೊಲೆಯಾಗಿದೆ. ಫಾಜಿಲ್​ ಮಂಗಲಪೇಟೆ (23) ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುರತ್ಕಲ್​, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್​ ಹಾಕಲಾಗಿದ್ದು, ಸುರತ್ಕಲ್​ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವದಂತಿಗಳಿಗೆ ಕಿವಿಗೊಡಬೇಡಿ

ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಹಿನ್ನೆಲೆ ಘಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಫಾಜಿಲ್ ಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ. ಕೊಲೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದೇವೆ. ಕೊಲೆ ಸಂಬಂಧ ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ ಕದಡುವ ಪ್ರಯತ್ನ ನಡೆಸಬಾರದು ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.