ಮಂಗಳೂರಿನ ಸುರತ್ಕಲ್​​ನಲ್ಲಿ ಫಾಜಿಲ್​ ಹತ್ಯೆ ಪ್ರಕರಣ: ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದ ಮಾಜಿ ಸಚಿವ ಯು.ಟಿ.ಖಾದರ್

ನಿಷೇಧಾಜ್ಞೆ ಇರುವ ಸೂಕ್ಷ್ಮ ಪ್ರದೇಶಗಳ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಬೇಡ ಎಂದು ಮುಸ್ಲಿಮರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಅಥವಾ ನಿಷೇಧಾಜ್ಞೆ ಇಲ್ಲದ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ.

ಮಂಗಳೂರಿನ ಸುರತ್ಕಲ್​​ನಲ್ಲಿ ಫಾಜಿಲ್​ ಹತ್ಯೆ ಪ್ರಕರಣ: ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದ ಮಾಜಿ ಸಚಿವ ಯು.ಟಿ.ಖಾದರ್
ಮಾಜಿ ಸಚಿವ ಯು.ಟಿ.ಖಾದರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 29, 2022 | 8:40 AM

ಮಂಗಳೂರು: ನೈಜ ಆರೋಪಿಗಳನ್ನ ಬಂಧನ ಮಾಡಿ ಶಿಕ್ಷೆ ಕೊಡುವ ಕೆಲಸ ಮಾಡಲಿ ಎಂದು ನಗರದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ (UT Khader) ಹೇಳಿಕೆ ನೀಡಿದರು. ಪಕ್ಷಪಾತವಿಲ್ಲದೆ ನ್ಯಾಯ ಕೊಡಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಮಂಗಳೂರಿನಲ್ಲಿ ಶಾಂತಿ ನಲೆಸುವ ಕೆಲಸ ಮಾಡಬೇಕಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಂದಾಗಲೇ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನ್ಯಾಯ ಇಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದಾಗ ಕಾನೂನು ಕೈಗೆತ್ತಿಕೊಳ್ತಾರೆ. ಸಿಎಂ ಬೊಮ್ಮಾಯಿ ಕೊಲೆಯಾದ ಮಸೂದ್ ಮನೆಗೆ ಹೋಗಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದರು.

ಇದನ್ನೂ ಓದಿ; ಸುರತ್ಕಲ್ ಫಾಜಿಲ್ ಅಮಾನುಷ ಹತ್ಯೆ, ಅತ್ಯುಗ್ರವಾಗಿ ಖಂಡಿಸ್ತೇನೆ, ಜನತೆ ಶಾಂತಿಯಿಂದ ಸಹಕರಿಸಬೇಕು -ಗೃಹ ಸಚಿವ ಆರಗ ಜ್ಞಾನೇಂದ್ರ

ಮಸೂದ್ ಬರ್ಬರ ಕೊಲೆ ಹಿನ್ನೆಲೆ ಎಸ್‌ಡಿಎಫ್‌ಐ ಜಿಲ್ಲಾಧ್ಯಕ್ಷ ಅಬೂಬಕರ್ ಹೇಳಿಕೆ ನೀಡಿದ್ದು, ನಿನ್ನೆ ಆರ್‌ಎಸ್‌ಎಸ್‌ ಹಿನ್ನೆಲೆ ಇರುವ ವ್ಯಕ್ತಿಗಳಿಂದ ಹತ್ಯೆಯಾಗಿದೆ. ಅಮಾಯಕ ವ್ಯಕ್ತಿಯನ್ನ ಸೂರತ್ಕಲ್‌ನಲ್ಲಿ ಕೊಲೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಶವದ ಮೇಲೆ ಆಡಳಿತವನ್ನ ಮಾಡುತ್ತಿದ್ದಾರೆ. ಕೊಲೆಯಿಂದ ರಾಜಕೀಯ ಶಕ್ತಿಗಳ ಕೈವಾಡ ಇದೆ. ಮಂಗಳೂರಿನಲ್ಲಿ ಇದುವರೆಗೆ 3ಜನರ ಕೊಲೆಯಾಗಿದೆ. ಮಸೂದ್ ಕೊಲೆಯಾದ ಸಂದರ್ಭದಲ್ಲಿ ಯಾರು ಧ್ವನಿ ಎತ್ತಲಿಲ್ಲ. ಪ್ರವೀಣ್ ಹತ್ಯೆಯನ್ನ ನಾನು ಖಂಡನೆ ಮಾಡುತ್ತೇನೆ. ನಿನ್ನೆ ಸಿಎಂ ಬೊಮ್ಮಾಯಿ ಬಂದು ಕೇವಲ ಪ್ರವೀಣ್ ಮನೆಗೆ ಭೇಟಿ ನೀಡಿದರು ಎಂದು ಹೇಳಿದರು.

ಪ್ರವೀಣ್ ನೆಟ್ಟಾರು ಕೊಲೆ ಬೆನ್ನಲ್ಲೇ ಮತ್ತೊಂದು ಕೊಲೆ:

ದೇಶವ್ಯಾಪಿ ಗಮನ ಸೆಳೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ (Praveen Nettar) ಕೊಲೆ ಪ್ರಕರಣಗಳ ಬೆನ್ನಿಗೇ ನಗರ ಹೊರವಲಯದ ಸುರತ್ಕಲ್​​ನಲ್ಲಿ ಮತ್ತೊಬ್ಬ ಯುವಕನ ಕೊಲೆಯಾಗಿದೆ. ಫಾಜಿಲ್​ ಮಂಗಲಪೇಟೆ (Fazil Murder) (23) ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುರತ್ಕಲ್​, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್​ ಹಾಕಲಾಗಿದ್ದು, ಸುರತ್ಕಲ್​ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: 

ನಿಷೇಧಾಜ್ಞೆ ಇರುವ ಸೂಕ್ಷ್ಮ ಪ್ರದೇಶಗಳ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಬೇಡ ಎಂದು ಮುಸ್ಲಿಮರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಅಥವಾ ನಿಷೇಧಾಜ್ಞೆ ಇಲ್ಲದ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ಪ್ರಾರ್ಥನೆ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ.

Published On - 8:25 am, Fri, 29 July 22