ಇತ್ತಂಡಗಳ ನಡುವೆ ಗಲಾಟೆ: ಮಣಿಪಾಲದ ಹೆಸರಾಂತ ಬಾರ್​ನಲ್ಲಿ ಮಾರಾಮಾರಿ

ಮಣಿಪಾಲದ ಹೆಸರಾಂತ ಬ್ಯಾಕಸ್ ಇನ್ ಬಾರ್​ನಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ.

ಇತ್ತಂಡಗಳ ನಡುವೆ ಗಲಾಟೆ: ಮಣಿಪಾಲದ ಹೆಸರಾಂತ ಬಾರ್​ನಲ್ಲಿ ಮಾರಾಮಾರಿ
ಬಾರ್​ನಲ್ಲಿ ಮಾರಾಮಾರಿ
Follow us
ಗಂಗಾಧರ​ ಬ. ಸಾಬೋಜಿ
|

Updated on:May 14, 2023 | 9:59 PM

ಉಡುಪಿ: ಮಣಿಪಾಲದ ಹೆಸರಾಂತ ಬ್ಯಾಕಸ್ ಇನ್ ಬಾರ್ (bar) ​ನಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಚುನಾವಣೆ ಮತ ಎಣಿಕೆ ಹಿನ್ನಲೆಯಲ್ಲಿ ನಿನ್ನೆಯವರೆಗೂ ಬಾರ್​ ಬಂದ್ ಆಗಿತ್ತು. ಇಂದು ನಿತ್ಯ ವ್ಯವಹಾರದ ನಿಮಿತ್ತ ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು. ಸಂಜೆ ವೇಳೆಗೆ ಬಾರ್ ಗೆ ಆಗಮಿಸಿದ ಎರಡು ತಂಡಗಳ ನಡುವೆ ವಾದ-ವಿವಾದ ಉಂಟಾಗಿದ್ದು, ವಾಗ್ವಾದ ಜೋರಾದ ಬಳಿಕ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಬಾರ್ ಗಲಾಟೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿದ್ಯುತ್ ತಂತಿ ತುಳಿದು ಯುವಕ ಸಾವು

ಕೋಲಾರ: ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ. ಮಾಗೊಂದಿ ಗ್ರಾಮದ ಸುದರ್ಶನ್ (23) ಮೃತ ಯುವಕ. ತಮ್ಮದೆ ತೋಟದಲ್ಲಿ ಮೋಟರ್​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಕಾರವಾರ: ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸುತ್ತಿದ್ದಂತೆ, ಕೇಸರಿ ಧ್ವಜದ ಪಕ್ಕ ಮುಸ್ಲಿಂ ಧ್ವಜ ಹಾರಾಟ ನಡೆಸಲಾಯಿತು. ಇದೀಗ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಲಾಗಿದೆ. ಉತ್ತರಕನ್ನಡ‌ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತಿದ್ದಂತೇ ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಬಹುಮತ; ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು

ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಸುಮಾರು 15 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಟ್ಕಳ ಮೂಡಶಿರಾಲಿಯ ರಾಮಚಂದ್ರ ನಾಯ್ಕ್, ಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ಇವರ ಪತ್ನಿ, ಮಕ್ಕಳನ್ನು ದೂಡಿ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕ ಯುವಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ‌ ನಡೆಸಿದ್ದಾರೆ.

ಇಸ್ಲಾಂ ಪ್ಲ್ಯಾಗ್ ಹಿಡಿದು ಸಂಭ್ರಮಾಚರಣೆ: ವಿಡಿಯೋ ವೈರಲ್​ 

ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ ಹಿನ್ನೆಲೆ ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದಲ್ಲದೆ, ಕೇಸರಿ ಧ್ವಜದ ಪಕ್ಕ ಅದನ್ನು ಅಳವಡಿಸಿದ್ದರು. ಭಟ್ಕಳ ಸಂಶುದ್ದಿನ್ ಸರ್ಕಲ್ ಮೇಲೆ ನಿಂತು ಕೇಸರಿ ಭಾವುಟ ಪಕ್ಕದಲ್ಲಿ ಇಸ್ಲಾಂ ಪ್ಲ್ಯಾಗ್ ಹಿಡಿದು ಸಂಭ್ರಮಾಚರಣೆ ನಡೆಸಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದರ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು.

ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಅವರು ಬಿಜೆಪಿಯ ಸುನೀಲ್ ನಾಯ್ಕ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಮಂಕಾಳು ವೈದ್ಯ ಗೆಲುವನ್ನ ಸಂಭ್ರಮಿಸುವ ವೇಳೆ ಭಟ್ಕಳ ಪಟ್ಟಣದಲ್ಲಿರುವ ಸಂಶುದ್ದೀನ್ ವೃತ್ತದ ಮೇಲೇರಿದ ಮುಸ್ಲಿಂ ಯುವಕರು ಕೇಸರಿ ಧ್ವಜದ ಪಕ್ಕ ನಿಂತು ಇಸ್ಲಾಂ ಧ್ವಜ ಪ್ರದರ್ಶನ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:55 pm, Sun, 14 May 23

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?