ಸಾಧನೆಗೆ ವಯಸ್ಸಿನ ಹಂಗಿಲ್ಲ, 60ರ ಇಳಿ ವಯಸ್ಸಿನಲ್ಲೂ ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್​​ಗೆ ಸೇರ್ಪಡೆ

| Updated By: ಆಯೇಷಾ ಬಾನು

Updated on: Jan 25, 2022 | 2:13 PM

60 ವರ್ಷದ ವೃದ್ಧ ಗಂಗಾಧರ್, ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ. ಈ ಗಂಗಾಧರ್ ಉಡುಪಿಯ ಕಡೆಕಾರು ನಿವಾಸಿ. ನಿರಂತರ ಐದೂವರೆ ತಾಸು ಕಡಲಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.

ಸಾಧನೆಗೆ ವಯಸ್ಸಿನ ಹಂಗಿಲ್ಲ, 60ರ ಇಳಿ ವಯಸ್ಸಿನಲ್ಲೂ ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್​​ಗೆ ಸೇರ್ಪಡೆ
ಗಂಗಾಧರ್
Follow us on

ಉಡುಪಿ: 60 ವರ್ಷದ ವೃದ್ಧ ಕೈಗಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳಿಗೆ ಸರಪಳಿ ಬಿಗಿದು ಸಮುದ್ರಕ್ಕೆ ಜಿಗಿದು ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ತಮ್ಮ 60 ವರ್ಷದ ಬದಿಕಿನಲ್ಲೂ ಮಾದರಿಯಾಗಿದ್ದಾರೆ.

ಕೈಗಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳಿಗೆ ಸರಪಳಿ ಬಿಗಿದು ಸಮುದ್ರಕ್ಕೆ ಜಿಗಿಗಿದ್ದೇ ಜಿಗಿದಿದ್ದು ಭೋರ್ಗರೆದು ಬರುವ ಅಲೆಗಳಿಗೆ ಎದೆಯೊಡ್ಡಿ, ಮೀನುಗಳಂತೆ ಈಜಿ ದಡ ಸೇರಿದಾಗ ದಾಖಲೆಯ ಪುಟ ತೆರೆದಿತ್ತು. ಹೌದು.. ವಯಸ್ಕರೇ ಈಜಲು ಪರದಾಡ್ತಾರೆ. ಸ್ವಲ್ಪ ದೂರ ಹೋಗ್ತಿದ್ದಂತೆ ಕೈಕಾಲು ಸೋತು ಸುಸ್ತಾಗಿ ಬಿಡ್ತಾರೆ. ಇಂಥಾದ್ರಲ್ಲಿ 60 ವರ್ಷದ ವೃದ್ಧ ಗಂಗಾಧರ್, ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ.

ಈ ಗಂಗಾಧರ್ ಉಡುಪಿಯ ಕಡೆಕಾರು ನಿವಾಸಿ. ನಿರಂತರ ಐದೂವರೆ ತಾಸು ಕಡಲಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಗಂಗಾಧರ್, ಉಡುಪಿಯ ಪಡುಕೆರೆ ಸಾಗರ ತೀರದಿಂದ ಈಜಲು ಆರಂಭಿಸಿದ್ರು. ಮಧ್ಯಾಹ್ನ 1.20ರ ಸುಮಾರಿಗೆ ಗಂಗಾಧರ್ ದಡ ಸೇರಿದ್ದು, ಮೂರೂವರೆ ಕಿಲೋ ಮೀಟರ್ ಈಜಿ ಗಂಗಾಧರ್ ದಾಖಲೆ ಮಾಡಿದ್ರು. ಸ್ಥಳದಲ್ಲೇ ಇದ್ದ ಅಧಿಕಾರಿಗಳು, ಪ್ರಾವಿಜನ್ ಸರ್ಟಿಫಿಕೇಟ್ ವಿತರಣೆ ನೀಡಿ ಗೌರವಿಸಿದ್ರು.

ಇನ್ನು, ಸಮುದ್ರದಲ್ಲಿ ಮೂರೂವರೆ ಕಿಲೋ ಮೀಟರ್ ದೂರ ಈಜುವುದು ಸುಮ್ನೆ ಅಲ್ಲ. ಕ್ಷಣ ಕ್ಷಣಕ್ಕೂ ಹವಾಮಾನ ಏರಿಳಿತವಾಗುತ್ತಿರುತ್ತೆ. ಡೇಂಜರಸ್ ಸಸ್ತನಿಗಳ ಭಯ ಕಾಡುತ್ತೆ. ವೇಗದ ಅಲೆಗಳ ಆರ್ಭಟವೂ ಭೀತಿ ಹುಟ್ಟಿಸುತ್ತೆ. ಇಷ್ಟೆಲ್ಲಾ ಚಾಲೆಂಜ್ಗಳನ್ನು ಮೆಟ್ಟಿ ನಿಂತು, ಇಳಿ ವಯಸ್ಸಿನಲ್ಲೂ ಗಂಗಾಧರ್ ಸಾಧನೆ ಮಾಡಿದ್ದು, ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ವರದಿ: ಹರೀಶ್, ಟಿವಿ9, ಉಡುಪಿ.

ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿದ ಗಂಗಾಧರ್

ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿದ ಗಂಗಾಧರ್

ಇದನ್ನೂ ಓದಿ: Cryptocurrency: 25 ದಿನದೊಳಗೆ 52.26 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ

Published On - 1:46 pm, Tue, 25 January 22