Cryptocurrency: 25 ದಿನದೊಳಗೆ 52.26 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಬಂಡವಾಳ ಮೌಲ್ಯವು 2022ರಲ್ಲಿ ಜನವರಿ 1ರಿಂದ ಈಚೆಗೆ ಇಲ್ಲಿಯ ತನಕ 52.26 ಲಕ್ಷ ಕೋಟಿ ರೂಪಾಯಿ ಕುಸಿತ ಕಂಡಿದೆ.

Cryptocurrency: 25 ದಿನದೊಳಗೆ 52.26 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jan 25, 2022 | 1:18 PM

2022ನೇ ಇಸವಿಯಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ಬಹಳ ಕೆಟ್ಟ ಆರಂಭವನ್ನು ಪಡೆದುಕೊಂಡಿದ್ದು, ಮೌಲ್ಯವನ್ನು ಕಳೆದುಕೊಂಡಿದೆ. ಪ್ರತಿ ದಿನ ಇಳಿಕೆ ಕಾಣುತ್ತಲೇ ಇದೆ. ಕಾಯಿನ್​ಜಿಕೋ ಡೇಟಾದ ಪ್ರಕಾರ, ಈ ವರ್ಷದ ಶುರುವಿನಿಂದ ಇಲ್ಲಿಯವರೆಗೆ 70 ಸಾವಿರ ಕೋಟಿ ಅಮೆರಿಕನ್ ಡಾಲರ್​ನಷ್ಟು (ಭಾರತದ ರೂಪಾಯಿ ಲೆಕ್ಕದಲ್ಲಿ 52,25,990 ಕೋಟಿ ಅಥವಾ 52.26 ಲಕ್ಷ ಕೋಟಿ) ಸದ್ಯಕ್ಕೆ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಮೌಲ್ಯ 1.62 ಲಕ್ಷ ಕೋಟಿ ಡಾಲರ್​ನಷ್ಟಿದೆ. ಅಂದ ಹಾಗೆ ಕಳೆದ ವರ್ಷದ ನವೆಂಬರ್​ನಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 3.1 ಲಕ್ಷ ಕೋಟಿ ಅಮೆರಿಕನ್ ಡಾಲರ್​ಗಳಷ್ಟು ಇತ್ತು. 2022ರ ಜನವರಿಯ ಆರಂಭದಲ್ಲಿ ಕೂಡ 2.3 ಲಕ್ಷ ಕೋಟಿ ಯುಎಸ್​ಡಿಯಲ್ಲಿ ವಹಿವಾಟು ನಡೆಸಿತ್ತು. ಹಾಗಂತ ಕ್ರಿಪ್ಟೋ ಮಾರುಕಟ್ಟೆಗೆ ಇಂಥ ಯದ್ವಾತದ್ವಾ ಹಾಗೂ ಪ್ರಮುಖ ಏರಿಳಿತಗಳು ಅಪರೂಪವೂ ಅಲ್ಲ, ಆಘಾತವೂ ಅಲ್ಲ.

2013ರ ಏಪ್ರಿಲ್​ನಲ್ಲಿ ಏನಾಗಿತ್ತೆಂದರೆ, ಆ ವರ್ಷದ ಜನವರಿಯಲ್ಲಿ 13 ಡಾಲರ್​ಗೆ ವಹಿವಾಟು ನಡೆಸಿದ್ದ ಬಿಟ್​ಕಾಯಿನ್, ನಾಲ್ಕು ತಿಂಗಳಲ್ಲಿ 230 ಡಾಲರ್ ಆಗಿತ್ತು. ಅದಾಗಿ ಕೆಲ ದಿನಗಳಿಗೆ 68 ಡಾಲರ್​ಗೆ ಬಿತ್ತು. 2018ರಲ್ಲಿ ಹೀಗೇ ಆಯಿತು. ಆ ವರ್ಷದ ಜನವರಿಯಲ್ಲಿ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಮೌಲ್ಯ 85,000 ಕೋಟಿ ಅಮೆರಿಕನ್ ಡಾಲರ್ ಇದ್ದದ್ದು, ಆ ವರ್ಷದ ಡಿಸೆಂಬರ್​ನಲ್ಲಿ 13,000 ಡಾಲರ್​ಗೆ ನೆಲ ಕಚ್ಚಿತ್ತು. ಆ ನಂತರದಲ್ಲಿ ಈ ವರ್ಷದ ಆರಂಭದಿಂದ ಬಿಟ್​ಕಾಯಿನ್ ಏಳು ದಿನಗಳಲ್ಲಿ ಶೇ 16.5ರಷ್ಟು ಕುಸಿತ ಕಂಡಿದ್ದು, ಎಥೆರಂ ಶೇ 23ರಷ್ಟು ಇಳಿಕೆ ಆಗಿದೆ. ಹಾಗೂ ಸೊಲಾನಾ ಶೇ 33ರಷ್ಟು ನೆಲ ಕಚ್ಚಿದೆ. 2017-18ರಲ್ಲಿ ಕ್ರಿಪ್ಟೋ ಮಾರುಕಟ್ಟೆ ಅನುಭವಿಸಿದ್ದಕ್ಕೆ ಹೋಲಿಸಿದರೆ ಈ ಸಂಖ್ಯೆಗಳು ಅಂಥ ಮಹತ್ವದ್ದೇನಲ್ಲ. ಇದನ್ನು ಕ್ರಿಪ್ಟೋ ಚಳಿಗಾಲ ಎನ್ನಲಾಗುತ್ತದೆ.

ಡಿಸೆಂಬರ್ 15, 2017ರಲ್ಲಿ ಬಿಟ್​ಕಾಯಿನ್ 19,497 ಡಾಲರ್​ಗೆ ಜಿಗಿಯಿತು. ಆದರೆ ಕೇವಲ ಆರು ದಿನಗಳ ನಂತರ ಬಹಳ ತೀಕ್ಷ್ಣವಾಗಿ 13,831 ಡಾಲರ್​ಗೆ ಕುಸಿಯಿತು. ಆ ನಂತರ ಕುಸಿತ 2018ರ ಫೆಬ್ರವರಿ ತನಕ ಮುಂದುವರಿದು 7000 ಯುಎಸ್​ಡಿಗಿಂತ ಕೆಳಗೆ ಬಂತು. 2018ರ ನವೆಂಬರ್​ನಲ್ಲಿ 6,359 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದ್ದದ್ದು, ಅಲ್ಲಿಂದ ಒಂದೇ ತಿಂಗಳಿಗೆ 3,300 ಡಾಲರ್​ನಿಂದ ಕೆಳಗೆ ಬಂತು. 2014ನೇ ಇಸವಿಯಲ್ಲಿ ಒಮ್ಮೆ ಒಂದೇ ದಿನದಲ್ಲಿ ಬಿಟ್​ಕಾಯಿನ್ ತನ್ನ ಮೌಲ್ಯದಲ್ಲಿ ಶೇ 99.9ರಷ್ಟು ಕಳೆದುಕೊಂಡಿತ್ತು. ಸದ್ಯಕ್ಕೆ ಕಾರ್ಯ ನಿರ್ವಹಿಸಲು Mt Goxx ವಿನಿಮಯ ಕೇಂದ್ರದಲ್ಲಿ ದಿಢೀರನೆ ಭಾರೀ ಕುಸಿತ ಆಗ ಕಂಡುಬಂದಿತ್ತು. ಹ್ಯಾಕ್ ಆಗಿ, ಬಿಟ್​ಕಾಯಿನ್​ ಅನ್ನು ಪೆನ್ನಿಗೆ ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಆ ಅನಾಹುತ ಆಗಿತ್ತು.

ಇದನ್ನೂ ಓದಿ: Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್