ಭಾರತದ ಷೇರು ಮಾರುಕಟ್ಟೆ (Indian Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 25ನೇ ತಾರೀಕಿನ ಮಂಗಳವಾರದಂದು ಭಾರೀ ಏರಿಳಿತದಿಂದ ಕೂಡಿತ್ತು. ಆ ನಂತರ ವಾಹನ, ವಿದ್ಯುತ್ ಮತ್ತು ಬ್ಯಾಂಕಿಂಗ್ ಷೇರುಗಳ ಬೆಂಬಲದೊಂದಿಗೆ ದಿನದ ಕೊನೆಗೆ ಏರಿಕೆಯನ್ನು ದಾಖಲಿಸಿತು. ಮಂಗಳವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 366.64 ಪಾಯಿಂಟ್ಸ್ ಅಥವಾ ಶೇ 0.64ರಷ್ಟು ಏರಿಕೆ ಕಂಡು, 57,858.15 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ ಸೂಚ್ಯಂಕವು 128.90 ಪಾಯಿಂಟ್ಸ್ ಅಥವಾ ಶೇ 0.75ರಷ್ಟು ಹೆಚ್ಚಳವಾಗಿ 17,278 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಮಾಹಿತಿ ತಂತ್ರಜ್ಞಾನ ವಲಯ ಹೊರತುಪಡಿಸಿ, ಉಳಿದ ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ದಿನಾಂತ್ಯ ಕಂಡಿವೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು, ವಿದ್ಯುತ್ ಮತ್ತು ಬ್ಯಾಂಕ್ ಶೇ 2ರಿಂದ ಶೇ 4ರಷ್ಟು ಹೆಚ್ಚಳ ಆಗಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 0.8ರಿಂದ ಶೇ 1ರಷ್ಟು ಗಳಿಕೆ ದಾಖಲಿಸಿದೆ.
ಇಂದಿನ ವಹಿವಾಟಿನಲ್ಲಿ 1935 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1330 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 84 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಮಾರುತಿ ಸುಜುಕಿ ಶೇ 6.83
ಆಕ್ಸಿಸ್ ಬ್ಯಾಂಕ್ ಶೇ 6.76
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 4.15
ಇಂಡಸ್ಇಂಡ್ ಬ್ಯಾಂಕ್ ಶೇ 3.88
ಯುಪಿಎಲ್ ಶೇ 3.74
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ವಿಪ್ರೋ ಶೇ -1.75
ಬಜಾಜ್ ಫಿನ್ಸರ್ವ್ ಶೇ -1.13
ಟೈಟನ್ ಕಂಪೆನಿ ಶೇ -1.10
ಇನ್ಫೋಸಿಸ್ ಶೇ -0.84
ಟೆಕ್ ಮಹೀಂದ್ರಾ ಶೇ -0.83
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ