Bloodbath in stock market: 1546 ಪಾಯಿಂಟ್ಸ್ ನೆಲ ಕಚ್ಚಿದ ಸೆನ್ಸೆಕ್ಸ್; ಹೂಡಿಕೆದಾರರ 9.15 ಲಕ್ಷ ಕೋಟಿ ರೂಪಾಯಿ ಉಡೀಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಜ. 24ನೇ ತಾರೀಕಿನಂದು 1546 ಪಾಯಿಂಟ್ಸ್ ನೆಲ ಕಚ್ಚಿದ್ದು, ಷೇರುಪೇಟೆ ಹೂಡಿಕೆದಾರರು 9.15 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಕೇಂದ್ರ ಬಜೆಟ್ -2022ರ ಮಂಡನೆಯ ಹಿಂದಿನ ವಾರದ ಮೊದಲನೇ ದಿನವಾದ ಸೋಮವಾರ (ಜನವರಿ 24, 2021) ಭಾರೀ ಕುಸಿತ ಕಂಡಿದ್ದು, ಅಕ್ಷರಶಃ ಷೇರುಪೇಟೆಯಲ್ಲಿ ರಕ್ತದೋಕುಳಿ ಆಗಿದೆ. ಬಿಎಸ್ಇ ಸೆನ್ಸೆಕ್ಸ್ 1546 ಪಾಯಿಂಟ್ಸ್ ಅಥವಾ ಶೇ 2.62ರಷ್ಟು ನೆಲ ಕಚ್ಚಿ, 57,491.51 ಪಾಯಿಂಟ್ಸ್ ತಲುಪಿದೆ. ನಿಫ್ಟಿ 468 ಪಾಯಿಂಟ್ಸ್ ಅಥವಾ ಶೇ 2.66ರಷ್ಟು ಇಳಿಕೆ ಕಂಡು, 17,419.10 ಪಾಯಿಂಟ್ಸ್ ಮುಟ್ಟಿದೆ. ಎರಡೂ ಸೂಚ್ಯಂಕಗಳು ಸತತ ಐದು ಸೆಷನ್ಗಳು ಕುಸಿದಿದ್ದು, ಹೂಡಿಕೆದಾರರು 19.33 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿಹೋಗಿದೆ. ಹೂಡಿಕೆದಾರರು ಬಿಎಸ್ಇ- ಲಿಸ್ಟೆಡ್ ಸಂಸ್ಥೆಗಳಲ್ಲಿ 9.15 ಲಕ್ಷ ಕೋಟಿ ರೂಪಾಯಿಗಳಷ್ಟು ಕಳೆದುಕೊಂಡಿದ್ದಾರೆ. ಹೂಡಿಕೆದಾರರ ಸಂಪತ್ತು 260.49 ಲಕ್ಷ ಕೋಟಿ ರೂಪಾಯಿಗೆ ಮುಟ್ಟಿದೆ. ಕಳೆದ ವಾರ ಮಂಗಳವಾರದ ಈಚೆಗೆ ಈ ಬೆಳವಣಿಗೆ ಆಗಿದೆ.
– ಹೊಸ ತಲೆಮಾರಿನ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತವಾಗಿವೆ; ಝೊಮ್ಯಾಟೋ, ನೈಕಾ ಶೇಕಡಾ 20ರಷ್ಟು ಇಳಿಕೆ ಕಂಡಿವೆ
– ಭಾರತ VIX, ಏರಿಳಿತದ ಮಾಪಕ, ಶೇ 21ರಿಂದ ಶೇ 23ಕ್ಕೆ ಏರುತ್ತದೆ
– ಜನವರಿ 25ರಂದು ನಿಗದಿಯಾಗಿರುವ ಮೂರನೇ ತ್ರೈಮಾಸಿಕದ ಫಲಿತಾಂಶದ ಘೋಷಣೆಗೂ ಮುನ್ನ ಸಿಪ್ಲಾ ಶೇಕಡಾ 3ರಷ್ಟು ಲಾಭ ಗಳಿಸಿದೆ
– ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ ನಂತರ ವೊಡಾಫೋನ್ ಐಡಿಯಾ (Voda Idea) ಶೇಕಡಾ 8 ರಷ್ಟು ಕುಸಿದಿದೆ
– ಶಾರದಾ ಕ್ರಾಪ್ಕೆಮ್ ಡಿವಿಡೆಂಡ್ ದಾಖಲೆಯ ದಿನಾಂಕವನ್ನು ಬದಲಾಯಿಸಿದ್ದರಿಂದ ಶೇ 15ರಷ್ಟು ಏರಿಕೆಯಲ್ಲಿ ಕೊನೆಗೊಂಡಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಸಿಪ್ಲಾ ಶೇ 2.84 ಒಎನ್ಜಿಸಿ ಶೇ 1.25
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಜೆಎಸ್ಡಬ್ಲ್ಯು ಸ್ಟೀಲ್ ಶೇ -6.67 ಟಾಟಾ ಸ್ಟೀಲ್ ಶೇ -6.03 ಬಜಾಜ್ ಫೈನಾನ್ಸ್ ಶೇ -5.99 ಗ್ರಾಸಿಮ್ ಶೇ -5.66 ಹಿಂಡಾಲ್ಕೋ ಶೇ -5.59
ಇದನ್ನೂ ಓದಿ: Zomato Shares: ಲಿಸ್ಟಿಂಗ್ಗಿಂತ ಕೆಳಗೆ ಇಳಿದ ಝೊಮ್ಯಾಟೋ ಷೇರು ಬೆಲೆ; ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿಗೂ ಕಡಿಮೆ