Udupi News: ಚಿರತೆ ದಾಳಿಯಿಂದ ಪವಾಡ ಸದೃಶವಾಗಿ ಬದುಕುಳಿದ ಸಾಕುನಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2022 | 3:40 PM

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಚಿರತೆ (leopard) ನಾಯಿ ಮೇಲೆ ದಾಳಿ ಮಾಡುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Udupi News: ಚಿರತೆ ದಾಳಿಯಿಂದ ಪವಾಡ ಸದೃಶವಾಗಿ ಬದುಕುಳಿದ ಸಾಕುನಾಯಿ
ಚಿರತೆ (ಸಂಗ್ರಹ ಚಿತ್ರ)
Follow us on

ಉಡುಪಿ: ಚಿರತೆ ದಾಳಿಗೆ ಸಿಲುಕಿದ್ದ ಸಾಕು ನಾಯಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವಂತಹ ಘಟನೆ ಉಡುಪಿ ಜಿಲ್ಲೆಯ ಹರ್ಗ ಗ್ರಾಮದ ಗೋಳಿಕಟ್ಟೆಯಲ್ಲಿ ನಡೆದಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಚಿರತೆ (leopard) ನಾಯಿ ಮೇಲೆ ದಾಳಿ ಮಾಡುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ನಾಯಿಯತ್ತ ನಿಧಾನವಾಗಿ ನುಸುಳಿದ್ದು, ಅದರ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಚಿರತೆಯನ್ನು ಕಂಡ ನಾಯಿ ಬೊಗಳಲು ಶುರು ಮಾಡಿದ್ದು, ಚಿರತೆ ದಾಳಿ ಮಾಡಿದಾಗ ನಾಯಿ ತನ್ನ ಬುದ್ಧವಂತಿಕೆಯಿಂದ ಸತ್ತಂತೆ ನಟಿಸಿದೆ. ಅಷ್ಟರಲ್ಲಿ ನಾಯಿ ಬೊಗಳಿದ ಸದ್ದು ಕೇಳಿ ಎಚ್ಚೆತ್ತುಕೊಂಡ ಮಾಲೀಕ ಬಾಲಚಂದ್ರ .ಕೆ ಲೈಟ್ ಆನ್​ ಮಾಡಿದ್ದಾರೆ. ಇದರಿಂದಾಗಿ ಚಿರತೆ ನಾಯಿಯನ್ನು ಬಿಟ್ಟು ಪರಾರಿಯಾಗಿದೆ. ನಾಯಿಯ ಕುತ್ತಿಗೆಗೆ ಹಲವಾರು ಗಾಯಗಳಾಗಿದ್ದು, ನಾಯಿ ಮಾಲೀಕ ಬಾಲಚಂದ್ರ .ಕೆ ಆರೈಕೆ ಮಾಡಲಾಗಿದೆ.

ಇದನ್ನೂ ಓದಿ: ಪ್ರಿಯಕರನಿಂದ ಮೋಸಹೋದ ಆಸ್ಸೀ ಮಹಿಳೆ ಮಾಡಿದ್ದೇನು ಗೊತ್ತಾ? ಈ ಕತೆ ಓದಿ!

ನಾಗರಹಾವಿನಿಂದ ತನ್ನ ಮಗುವನ್ನು ರಕ್ಷಿಸಿದ ತಾಯಿ

ಮಂಡ್ಯ: ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಘಟಿಸುತ್ತದೆ. ಅದು ಒಳ್ಳೆಯದಿರಬಹುದು ಕೆಟ್ಟದಿರಬಹುದು. ಮಂಡ್ಯದಲ್ಲಿ ನಡೆದ ಈ ಘಟನೆಯನ್ನೇ ನೋಡಿ. ಮಗನೊಂದಿಗೆ ತಾಯಿ ಮನೆಯಿಂದ ಹೊರಬರುತ್ತಿರುವ ದೃಶ್ಯವಿದೆ. ಮಗ ಮೆಟ್ಟಿಲುಗಳನ್ನು ಇಳಿಯಲು ನೋಡುತ್ತಿದ್ದಂತೆ ತಾಯಿ ಅತ್ತಕಡೆ ತನ್ನ ಕೆಲಸಕ್ಕೆ ಹೊರಳುತ್ತಾಳೆ. ಮಗ ಎಲ್ಲೋ ನೋಡಿಕೊಂಡು ಮೆಟ್ಟಿಲಿಂದ ಇಳಿಯುವಾಗ ಕೆಳಗೆ ನಾಗರಹಾವು ಹರಿದು ಬರುತ್ತಿರುತ್ತದೆ. ಇವನು ಕಾಲಿಡುವ ಹೊತ್ತಿಗೆ ಅದು ತಪ್ಪಿಸಿಕೊಂಡು ಒಮ್ಮೆಲೆ ಹೆಡೆಯೆತ್ತಿ ಅವನೆಡೆ ವಾಲುತ್ತದೆ. ಅಷ್ಟರಲ್ಲೇ ಅವನ ತಾಯಿ ಅವನನ್ನು ಎಳೆದುಕೊಂಡು ಕಾಪಾಡುತ್ತಾಳೆ.

ಇದನ್ನೂ ಓದಿ: Viral News: ಬಟ್ಟೆ ಹಾಕದೇ ಓಡಾಡಲು ಮೈಮೇಲೆ ಪೂರ್ತಿ ಟ್ಯಾಟೂ ಹಾಕಿಸಿಕೊಂಡ ಯುವತಿ..!

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯ ವೈರಲ್ ಆಗಿದೆ. ಸದ್ಯ ಹುಡುಗ ಬದುಕಿದ ಎಂದು ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಪಾಡಿದ ತಾಯಿಗೆ ಸಾಕಷ್ಟು ಮೆಚ್ಚಿಗೆಯ ಪ್ರತಿಕ್ರಿಯೆ ದೊರಕಿವೆ. 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 27,700 ಲೈಕ್ಸ್​ ಅನ್ನು ಈ ವಿಡಿಯೋ ಹೊಂದಿದೆ.

ಮತ್ತಷ್ಟು ಟ್ರೆಂಡಿಂಗ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:39 pm, Sun, 14 August 22