ಪ್ರಿಯಕರನಿಂದ ಮೋಸಹೋದ ಆಸ್ಸೀ ಮಹಿಳೆ ಮಾಡಿದ್ದೇನು ಗೊತ್ತಾ? ಈ ಕತೆ ಓದಿ!
ಪತ್ರಿಕೆ ಸಾರ್ವಜನಿಕರಿಗೆ ತಲುಪಿದ ನಂತರ ಅವರಲ್ಲಿ ಆ್ಯಡ್ ಬಗ್ಗೆ ವಿವರಗಳನ್ನು ತಿಳಿಯುವ ಕುತೂಹಲ ಹೆಚ್ಚಾಗಿ ಪ್ರಕಾಶಕರಿಗೆ ಫೋನ್ ಮಾಡತೊಡಗಿದ್ದಾರೆ. ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ಪೋಸ್ಟ್ನಲ್ಲಿ ಪ್ರಕಾಶಕರು ಪ್ರಶ್ನೆ ಕೇಳಿದವರಿಗೆ ಉತ್ತರ ನೀಡುವ ನಿರ್ಧಾರ ಮಾಡಿದ್ದಾರೆ.
ಇಂಥದೊಂದು ಜಾಹೀರಾತನ್ನು ಪ್ರಾಯಶಃ ಯಾರೂ ಯೋಚಿಸಲಾರರು. ಇದನ್ನು ನೋಡಿ ಓದಿರುವ ಜನ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಅಸಲಿಗೆ ಪೂರ್ತಿ ಒಂದು ಪುಟದ ಈ ಜಾಹೀರಾತನ್ನು ತನ್ನ ಪ್ರಿಯಕರನಿಂದ ಮೋಸ ಹೋಗಿರುವ ಮಹಿಳೆಯೊಬ್ಬಳು ನೀಡಿದ್ದಾಳೆ. ಅವನ ವಂಚನೆಗೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಜಾಹೀರಾತು ನೀಡಿದ್ದಾಳೆ. ಈ ಆ್ಯಡ್ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು ನೋಡಿದವರಿಗೆಲ್ಲ ಭಾರೀ ಮನರಂಜನೆ ಒದಗಿಸುತ್ತಿದೆ.
ಸದರಿ ಜಾಹೀರಾತಿನ ಬಗ್ಗೆ ಜನ ಪ್ರಶ್ನೆಗಳನ್ನು ಕೇಳಲಾರಂಭಿಸಿದ ಬಳಿಕ ಮ್ಯಾಕೇ ಅಂಡ್ ವಿತ್ ಸಂಡೇ ಲೈಫ್ ಹೆಸರಿನ ವಾರಪತ್ರಿಕೆಯು ಆ ಪುಟವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದೆ. ಜಾಹೀರಾತಿನಲ್ಲಿ ಬರೆದಿರುವುದು ಇದು: ಪ್ರಿಯ ಸ್ಟೀವ್, ನೀನು ಅವಳೊಂದಿಗೆ ಸಂತೋಷವಾಗಿರುವೆ ಎಂದು ಭಾವಿಸುತ್ತೇನೆ. ನೀನೆಂಥ ಮೋಸಗಾರ ಅಂತ ಈಗ ಇಡೀ ಊರಿಗೆ ಗೊತ್ತಾಗಲಿದೆ. ಇಂತಿ ಜೆನ್ನಿ.
ಮೋಸ ಹೋಗಿರುವ ಮಹಿಳೆಯ ಸೇಡು ಅಲ್ಲಿಗೆ ಮುಗಿಯುವದಿಲ್ಲ. ಪೋಸ್ಟ್ ಸ್ಕ್ರಿಪ್ಟ್ ನಲ್ಲಿ ಆಕೆ ಒಂದು ಸಂದೇಶ ಹಾಕಿದ್ದು ಅದು ಹೀಗಿದೆ: ‘ಈ ಜಾಹೀರಾತು ಪ್ರಕಟಿಸಲು ಪ್ರಕಾಶಕರಿಗೆ ನಿನ್ನ ಕ್ರೆಡಿಟ್ ಕಾರ್ಡ್ ನಿಂದ ಹಣ ಪಾವತಿಸಿದ್ದೇನೆ!’
ಪತ್ರಿಕೆ ಸಾರ್ವಜನಿಕರಿಗೆ ತಲುಪಿದ ನಂತರ ಅವರಲ್ಲಿ ಆ್ಯಡ್ ಬಗ್ಗೆ ವಿವರಗಳನ್ನು ತಿಳಿಯುವ ಕುತೂಹಲ ಹೆಚ್ಚಾಗಿ ಪ್ರಕಾಶಕರಿಗೆ ಫೋನ್ ಮಾಡತೊಡಗಿದ್ದಾರೆ. ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ಪೋಸ್ಟ್ನಲ್ಲಿ ಪ್ರಕಾಶಕರು ಪ್ರಶ್ನೆ ಕೇಳಿದವರಿಗೆ ಉತ್ತರ ನೀಡುವ ನಿರ್ಧಾರ ಮಾಡಿದ್ದಾರೆ.
‘ಮ್ಯಾಕೆ ಪತ್ರಿಕೆಯ 4ನೇ ಪುಟದಲ್ಲಿ ಪ್ರಕಟವಾಗಿರುವ ಆ್ಯಡ್ ಬಗ್ಗೆ ವಿವರ ಕೇಳಿ ಅನೇಕ ಜನ ಮೆಸೇಜು ಮಾಡಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಉತ್ತರಿಸಲು ಸಾಧ್ಯವಿರದ ಕಾರಣ ಹೀಗೆ ಉತ್ತರಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ,’ ಎಂದು ಪ್ರಕಾಶಕರು ಹೇಳಿದ್ದಾರೆ.
ಪತ್ರಿಕೆ ಪರವಾಗಿ ಸ್ಪಷ್ಟೀಕರಣ ನೀಡಿರುವ ಪ್ರಕಾಶಕರು, ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿರುವ ವ್ಯಕ್ತಿ ಸ್ಟೀವ್ ಯಾರೆಂದು ನಮಗೆ ಗೊತ್ತಿಲ್ಲ. ‘ಆದರೆ ಅವನೊಬ್ಬ ಕೆಟ್ಟ ವ್ಯಕ್ತಿ ಅನ್ನೋದು ಮಾತ್ರ ನಮಗೆ ಸ್ಪಷ್ಟವಾಗಿದೆ.’ ಜೆನ್ನಿಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂಬ ಸ್ಪಷ್ಟನೆಯನ್ನು ಪ್ರಕಾಶಕರು ನೀಡಿದ್ದಾರೆ. ಗಮ್ಮತ್ತಿನ ಸಂಗತಿಯೆಂದರೆ ಕ್ರೆಡಿಟ್ ಕಾರ್ಡ್ ನಿಂದ ಹಣ ಪಾವತಿ ಮಾಡಿಸಿಕೊಂಡಿಲ್ಲ ಎಂದು ಪತ್ರಿಕೆ ಹೇಳಿಕೊಂಡಿದೆ.
ಒಂದು ಅಖಂಡ ಪೇಜಿನಲ್ಲಿ ಈ ಜಾಹೀರಾತನ್ನು ನೋಡಿದವರು ಬಿದ್ದು ಬಿದ್ದು ನಕ್ಕು ಜೆನ್ನಿಯ ಕ್ರಮವನ್ನು ಶ್ಲಾಘಿಸಿದ್ದಾರೆ, ಸ್ಟೀವ್ ಒಬ್ಬನನ್ನು ಬಿಟ್ಟು!
ಕಾಮೆಂಟ್ ಸೆಕ್ಷನ್ ನಲ್ಲಿ ಒಬ್ಬ ಯೂಸರ್, ‘ಭೇಷ್ ಜೆನ್ನಿ, ಈ ಸಲ ಅವನು ತನ್ನ ಕರ್ಮದ ಫಲ ಉಣ್ಣುತ್ತಾನೆ,’ ಅಂತ ಕಾಮೆಂಟ್ ಮಾಡಿದರೆ ಮತ್ತೊಬ್ಬರು, ‘ನಿನ್ನ ಕ್ರಮ ಶ್ಲಾಘನೀಯ’ ಎಂದಿದ್ದಾರೆ, ಮೂರನೇಯವರು, ‘ವೆಲ್ ಡನ್ ಮೇಟ್!’ ಅಂತ ಪ್ರತಿಕ್ರಿಯಿಸಿದ್ದಾರೆ.