Paryaya Mahotsava: ಕೊವಿಡ್ ಕರಿನೆರಳಲ್ಲೇ ಮಾರ್ಗಸೂಚಿ ಅನುಸರಿಸಿ ಪರ್ಯಾಯ ಮಹೋತ್ಸವ ನಡೆಸುವ ಸವಾಲು

ಶ್ರೀಕೃಷ್ಣ ಮಠದ ಪರ್ಯಾಯ ಅಂದರೆ ಸಾವಿರಾರು ಮಂದಿ ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಆದರೆ ಸದ್ಯ ಕೊವಿಡ್ ರೂಲ್ಸ್ ಜಾರಿಯಲ್ಲಿದೆ. ಹೆಚ್ಚು ಜನ ಸೇರಿಸುವಂತಿಲ್ಲ. ಹೀಗಾಗಿ ಮಾರ್ಗಸೂಚಿ ಪಾಲಿಸಿಕೊಂಡು ಪರ್ಯಾಯ ಮಹೋತ್ಸವ ನಡೆಸುವುದೇ ದೊಡ್ಡ ಸವಾಲಾಗಿದೆ.

Paryaya Mahotsava: ಕೊವಿಡ್ ಕರಿನೆರಳಲ್ಲೇ ಮಾರ್ಗಸೂಚಿ ಅನುಸರಿಸಿ ಪರ್ಯಾಯ ಮಹೋತ್ಸವ ನಡೆಸುವ ಸವಾಲು
ಕೃಷ್ಣ ಮಠವನ್ನು ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗುತ್ತಿದೆ
Edited By:

Updated on: Jan 06, 2022 | 12:14 PM

ಉಡುಪಿ: ಕೃಷ್ಣನೂರಿನ ದೊಡ್ಡ ಹಬ್ಬ ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ. ಇದೇ ತಿಂಗಳು ನಡೆಯುವ ಪರ್ಯಾಯಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ಉಡುಪಿ ರಸ್ತೆಗಳಲ್ಲಿ ಸ್ವಾಗತ ಗೋಪುರಗಳು ಕಣ್ಮನ ಸೆಳೆದರೆ, ಅತ್ತ ಕೃಷ್ಣ ಮಠವನ್ನು ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗುತ್ತಿದೆ.

ಕೊರೊನಾ ಕರಿನೆರಳಲ್ಲೇ ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಮಹೋತ್ಸವಕ್ಕೆ ತಯಾರಿ ನಡೆಯುತ್ತಿದೆ. ಕೊವಿಡ್ ಮಾರ್ಗಸೂಚಿ ಅನುಸರಿಸಿ, ಪರ್ಯಾಯ ನಡೆಸುವುದೇ ಶ್ರೀಕೃಷ್ಣಮಠಕ್ಕೆ ಸಂಕಷ್ಟತಂದೊಡ್ಡಿದೆ. ಪರ್ಯಾಯ ಮಹೋತ್ಸವಕ್ಕೆ ಮಠ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಸದ್ಯ ಅದಮಾರು ಈಶ ಪ್ರಿಯ ಶೀಗಳ ಪರ್ಯಾಯ ಕೊನೆಗೊಳ್ಳುತ್ತಿದೆ. ಇದೀಗ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರ ಪರ್ಯಾಯಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಜನವರಿ 17ರ ರಾತ್ರಿಯಿಂದ ಜನವರಿ 18ರ ಬೆಳಗ್ಗೆ ತನಕ ಪರ್ಯಾಯೋತ್ಸವ ಜರುಗಲಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಶ್ರೀಕೃಷ್ಣ ಮಠದ ಪರ್ಯಾಯ ಅಂದರೆ ಸಾವಿರಾರು ಮಂದಿ ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಆದರೆ ಸದ್ಯ ಕೊವಿಡ್ ರೂಲ್ಸ್ ಜಾರಿಯಲ್ಲಿದೆ. ಹೆಚ್ಚು ಜನ ಸೇರಿಸುವಂತಿಲ್ಲ. ಹೀಗಾಗಿ ಮಾರ್ಗಸೂಚಿ ಪಾಲಿಸಿಕೊಂಡು ಪರ್ಯಾಯ ಮಹೋತ್ಸವ ನಡೆಸುವುದೇ ದೊಡ್ಡ ಸವಾಲಾಗಿದೆ. ಒಟ್ಟಿನಲ್ಲಿ, ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಅದ್ದೂರಿ ಬದಲು ಸರಳವಾಗಿ ಪರ್ಯಾಯ ನಡೆಸಲು ಚಿಂತನೆ ನಡೆಯುತ್ತಿದೆ.

ವರದಿ: ಹರೀಶ್ ಪಾಲೇಚ್ಚಾರ್, ಟಿವಿ9 ಉಡುಪಿ

ಇದನ್ನೂ ಓದಿ: ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ; ನಾಚಿಕೆಗೇಡಿನ ಸಂಗತಿ ಎಂದು ಇನ್​ಸ್ಟಾ ಪೋಸ್ಟ್ ಹಾಕಿದ ಬಾಲಿವುಡ್ ನಟಿ ಕಂಗನಾ