Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ನಾಪತ್ತೆಯಾಗಿದ್ದ ಬಾಲಕ ಕೇರಳದ ಪಾಲಕ್ಕಾಡ್​ನಲ್ಲಿ ಪತ್ತೆ

ಉಡುಪಿಯ ಕೋಚಿಂಗ್ ಸೆಂಟರ್​ಗೆಂದು ಬಿಟ್ಟಿದ್ದ ಬಾಲಕ ನಾಪತ್ತೆಯಾಗಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. 8ನೇ ತರಗತಿಯ ವಿದ್ಯಾರ್ಥಿ ರೈಲಿನಲ್ಲಿ ಏಕಾಂಗಿಯಾಗಿ ಕೇರಳದ ಪಾಲಕ್ಕಾಡ್​ಗೆ ತೆರಳಿದ್ದನ್ನು ಪೊಲೀಸರು ಪತ್ತೆಮಾಡಿದ್ದು, ಇದೀಗ ಆತನನ್ನು ಕರೆತರಲು ಕ್ರಮ ಕೈಗೊಂಡಿದ್ದಾರೆ.

ಉಡುಪಿಯಲ್ಲಿ ನಾಪತ್ತೆಯಾಗಿದ್ದ ಬಾಲಕ ಕೇರಳದ ಪಾಲಕ್ಕಾಡ್​ನಲ್ಲಿ ಪತ್ತೆ
ಉಡುಪಿ ಜಿಲ್ಲಾ ಪೊಲೀಸ್‌ ಕಟ್ಟಡ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Sep 10, 2024 | 8:04 AM

ಉಡುಪಿ, ಸೆಪ್ಟೆಂಬರ್ 10: ಉಡುಪಿಯ ಕುಂಜಿಬೆಟ್ಟುವಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ತೆರಳಿದ್ದ 13 ವರ್ಷದ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಇದೀಗ ಕೇರಳದ ಪಾಲಕ್ಕಾಡ್​​ನಲ್ಲಿ ಪತ್ತೆಯಾಗಿದ್ದಾನೆ. ಪೋಷಕರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡು ತನಿಖೆ ನಡೆಸಿದ ಪೊಲೀಸರಿಗೆ, ಬಾಲಕ ರೈಲಿನಲ್ಲಿ ಪಾಲಕ್ಕಾಡ್​ಗೆ ತೆರಳಿದ್ದು ಗೊತ್ತಾಗಿದೆ.

ವಿದ್ಯಾರ್ಥಿ ಆರ್ಯನನ್ನು ಸೆಪ್ಟೆಂಬರ್ 8 ರಂದು ಆತನ ತಂದೆ ಪ್ರಕಾಶ್ ಶೆಟ್ಟಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಡ್ರಾಪ್ ಮಾಡಿದ್ದರು. ಆದರೆ, ಮಧ್ಯಾಹ್ನ 2:45 ರ ಸುಮಾರಿಗೆ ಕರೆದುಕೊಂಡು ಹೋಗಲು ಬಂದಾಗ ಆರ್ಯ ನಾಪತ್ತೆಯಾಗಿದ್ದ.

ಆ ದಿನ ಆರ್ಯ ಕೋಚಿಂಗ್ ಸೆಷನ್​ಗೆ ಹಾಜರಾಗಿರಲಿಲ್ಲ ಎಂದು ಕೋಚಿಂಗ್ ಸಿಬ್ಬಂದಿ ಕುಟುಂಬಕ್ಕೆ ತಿಳಿಸಿದ್ದಾರೆ. ಈ ಸಂಬಂಧ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರಿಗೆ, ಆರ್ಯ ಪಾಲಕ್ಕಾಡ್‌ಗೆ ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿರುವುದು ಗೊತ್ತಾಗಿದೆ. ಇದೀಗ ಆರ್ಯನನ್ನು ಉಡುಪಿಗೆ ಕರೆತರಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ಅಪಘಾತ

ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಭಾನುವಾರ ರಾತ್ರಿ ಮೂರು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಭಾರೀ ಹಾನಿಯಾಗಿದೆ. ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮತ್ತೊಂದು ಕಾರು ಮುಂದೆ ಹೋಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ಹೆದ್ದಾರಿ ಪಕ್ಕದ ಪೊದೆಗಳಿಗೆ ಬಿದ್ದಿದ್ದು, ಮೂರನೆಯದು ರಸ್ತೆಬದಿಯಲ್ಲಿ ನಿಂತಿತ್ತು.

ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಯಶ್​​ಪಾಲ್ ಸುವರ್ಣ ವಿರುದ್ಧ ಕೇಸ್​

ಅದೃಷ್ಟವಶಾತ್, ಹೆದ್ದಾರಿಯಲ್ಲಿ ಕನಿಷ್ಠ ದಟ್ಟಣೆಯಿಂದಾಗಿ, ಹೆಚ್ಚಿನ ಹಾನಿಯಾಗಿಲ್ಲ. ಮೂರು ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ