ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ, ಪೊಲೀಸರೇ ಶಾಕ್!

ಕ್ಷುಲ್ಲಕ ವಿಚಾರಕ್ಕೆ ನಡುರಾತ್ರಿ ಮನೆಗೆ ನುಗ್ಗಿ ಕುಚುಕು ಗೆಳೆಯನನ್ನೇ ಆತನ ತಾಯಿ, ಪತ್ನಿ ಮತ್ತು ಮಗಳ ಎದುರು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವಂತಹ ಘಟನೆ ಉಡುಪಿಯ ನಗರದ ಪುತ್ತೂರು ಗ್ರಾಮದಲ್ಲಿ ನಡೆದಿದೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ, ಪೊಲೀಸರೇ ಶಾಕ್!
ಕೊಲೆಯಾದ ವ್ಯಕ್ತಿ, ಬಂಧಿತರು
Updated By: ಗಂಗಾಧರ​ ಬ. ಸಾಬೋಜಿ

Updated on: Aug 17, 2025 | 12:10 PM

ಉಡುಪಿ, ಆಗಸ್ಟ್​ 17: ಉಡುಪಿಯಲ್ಲಿ (Udupi) ನಡುರಾತ್ರಿ ರಕ್ತ ಹರಿದಿದೆ. ನೇಜಾರು ಒಂದೇ ಕುಟುಂಬದ ನಾಲ್ವರ ಮರ್ಡರ್‌ ಬಳಿಕ ಕರಾವಳಿ ಜಿಲ್ಲೆ ಉಡುಪಿ ಶಾಂತವಾಗಿತ್ತು. ಆದರೆ ಅದೊಂದು ವಿಚಾರದಲ್ಲಿ ನಡೆದ ವಾಗ್ವಾದ ಓರ್ವ ವ್ಯಕ್ತಿಯನ್ನು ರಕ್ತ ಮಡುವಿನಲ್ಲಿ ಪ್ರಾಣ (kill) ಬಿಡುವಂತೆ ಮಾಡಿತ್ತು. ಕೇವಲ 35 ವರ್ಷದ ವಿನಯ್‌ ದೇವಾಡಿಗ ಫಾರ್ವರ್ಡ್ ಮಾಡಿದ ಒಂದೇ ಒಂದು ಮೇಸೆಜ್‌ ಆತನ ಜೀವವನ್ನು ತೆಗೆದಿದೆ.

ಅವರೆಲ್ಲರು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಊಟ ಹಂಚಿಕೊಂಡು ತಿನ್ನುವ ಕುಚುಕು ಸ್ನೇಹಿತರು. ಆ ಗೆಳೆಯರ ನಡುವೆ ನಡೆದ ಒಂದೇ ಒಂದು ಚಿಕ್ಕ ವೈಮನಸ್ಸು ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಿಗ್ಗೆ ಒಟ್ಟಿಗೆ ಇದ್ದವರೆ, ರಾತ್ರಿ ವೇಳೆಗೆ ತಲವಾರು ಹಿಡಿದು ಮನೆಗ ನುಗ್ಗಿದ್ದರು. ತಾಯಿ, ಪತ್ನಿ ಮತ್ತು ಮಗಳ ಎದುರೇ ತಲವಾರುನಿಂದ ಗೆಳೆಯನನ್ನು ಕೊಚ್ಚಿ ಕೊಲೆ ಮಾಡಿದ್ದರು. ವಿನಯ್ ದೇವಾಡಿ ಕೊಲೆಯಾದ ವ್ಯಕ್ತಿ.

ನಡೆದದ್ದೇನು?

ಹೌದು. ಉಡುಪಿ ನಗರದ ಪುತ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಮೂವರು ಯುವಕರು ವಿನಯ್‌ ದೇವಾಡಿಗ ಎನ್ನುವ ವ್ಯಕ್ತಿಯ ಮನೆಗೆ ಬಂದಿದ್ದಾರೆ. ಮನೆಯವರ ಬಳಿ ವಿನಯ್‌ ಇದ್ದಾನಾ ಎಂದು ವಿಚಾರಿಸಿ ಮನೆಯ ಒಳಗೆ ಪ್ರವೇಶಿಸಿದ್ದಾರೆ. ಪರಿಚಿತ ಮುಖವಾದ ಹಿನ್ನಲೆಯಲ್ಲಿ ಮನೆಯವರು ಅನುಮಾನ ವ್ಯಕ್ತಪಡಿಸದೆ ಮನೆಯ ಒಳಗೆ ಕರೆದಿದ್ದಾರೆ. ಒಳಗೆ ಬಂದವರ ಕೈಯಲ್ಲಿದ್ದ ತಲವಾರು ನೋಡಿ ಪತ್ನಿ ವಿನಯ್​ ಮನೆಯಲ್ಲಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ
ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ
ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಲೈಂಗಿಕ ದೌರ್ಜನ್ಯ
ವಿಡಿಯೋ: ಮಧ್ಯರಾತ್ರಿ ಎಟಿಎಂ ಕಳವು ಮಾಡ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್
ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ!

ಇದನ್ನೂ ಓದಿ: ಗದಗ: ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ

ವಿನಯ್ ಮನೆಯಲ್ಲಿ ಇಲ್ಲ ಎಂದದೇ ತಡ, ತಲವಾರು ಹಿಡಿದು ಬಂದಿದ್ದ ಮೂವರು ಸೀದಾ ವಿನಯ್‌ ಕೋಣೆಗೆ ತೆರಳಿ ವಿನಯ್‌ ಮೇಲೆ ತಲವಾರ್‌ ಬೀಸಿದ್ದಾರೆ. ಪತ್ನಿ ಮತ್ತು ತಾಯಿ ಎಷ್ಟೇ ಕಾಡಿ, ಬೇಡಿಕೊಂಡರು ದುರುಳರ ಮನ ಮಾತ್ರ ಮಿಡಿಯಲೇ ಇಲ್ಲ. ಕೈಯಲ್ಲಿದ್ದ ತಲವಾರುನಿಂದ ಗೆಳಯನನ್ನು ಯದ್ವ ತದ್ವ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗಂಭೀರವಾದ ರಕ್ತ ಸ್ರಾವದಿಂದ ವಿನಯ್‌ ದೇವಾಡಿಗನ ಪ್ರಾಣ ಪಕ್ಷಿ ಹಾರಿಹೋಗಿದೆ. ಏಕಾಎಕಿ ನಡೆದ ಘಟನೆಯಿಂದ ಮನೆಯವರು ಹೌಹಾರಿದ್ದಾರೆ, ನೋಡು ನೋಡುತ್ತಲೆ ಇರುವಾಗಲೇ ಮನೆ ಮಗನ ಪ್ರಾಣ ಪಕ್ಷಿ ಪತ್ನಿ, ಮಗಳು ತಾಯಿಯ ಎದುರೆ ಹಾರಿ ಹೋಗಿದೆ. ಈ ಘಟನೆಯ ವೇಳೆ ತಡೆಯಲು ಬಂದ ಹೆಂಡತಿಯ ಕೈಗೆ ಗಂಭೀರವಾಗಿ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿಗಳು

ಪುತ್ತೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗೆಳೆಯನನ್ನೆ ಕೊಲೆ ಮಾಡಿದ ಆರೋಪಿಗಳು ಬಳಿಕ ನೇರವಾಗಿ ಬ್ರಹ್ಮಾವರ ಪೊಲೀಸ ಠಾಣೆಗೆ ಹೋಗಿದ್ದಾರೆ. ಪುತ್ತೂರಿನಲ್ಲಿ ವಿನಯ್ ದೇವಾಡಿಗನನ್ನು ಕೊಲೆ ಮಾಡಿದ್ದ ಆರೋಪಿಗಳೆಂದು ಬ್ರಹ್ಮಾವರ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದಾರೆ. ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಗಾಂಧಿ ನಗರ ನಿವಾಸಿ ಅಜಿತ್ (28), ಅಕ್ಷೇಂದ್ರ (34) ಮತ್ತು ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಬಂಧಿತರು.

ಹತ್ಯೆಯಾದ ವಿನಯ್‌ ದೇವಾಡಿಗ ಮತ್ತು ಹತ್ಯೆ ಮಾಡಿದ ಈ ಮೂವರು ಆರೋಪಿಗಳು ಪರಿಚಿತರು. ಒಟ್ಟಿಗೆ ಕೆಲಸ ಮಾಡಿಕೊಂಡು ಒಟ್ಟಿಗೆ ಜಾಲಿ ಮಾಡಿಕೊಂಡಿದ್ದ ಸ್ನೇಹಿತರು. ವಿನಯ್‌ ದೇವಾಡಿಗ ಪೈಟಿಂಗ್‌ ವೃತ್ತಿ ಮಾಡಿಕೊಂಡಿದ್ದು, ಜೊತೆಗೆ ಇದ್ದ ಸಹವರ್ತಿಗಳಿಂದಲೇ ಹತನಾದದ್ದು ಮಾತ್ರ ಕೇವಲ ಸಿಲ್ಲಿ ವಿಷಯ ಎಂದರೆ ನೀವು ನಂಬಲೇ ಬೇಕು. ಇಲ್ಲಿ ಹತ್ಯೆ ಮಾಡಲು ಆರೋಪಿಗಳು ನೀಡಿದ ಕಾರಣ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ. ಕೇವಲ ಒಂದು ಫಾರ್ವರ್ಡ್ ಮೇಸೆಜ್​ನಿಂದಾಗಿ ಒಟ್ಟಿಗೆ ಇರುತ್ತಿದ್ದ ಗೆಳೆಯ ಮೇಲೆ ತಲವಾರ ಬೀಸಿ ಕಡಿದು ಕೊಚ್ಚಿ ಕೊಂದಿದ್ದಾರೆ ಈ ಮೂವರು ಸ್ನೇಹಿತರು. ಆರೋಪಿ ಅಕ್ಷೇಂದ್ರನಿಗೆ ಇನ್ನೋರ್ವ ವ್ಯಕ್ತಿ ಜೀವನ್ ಎಂಬಾತ ಬೈದಿರುವ ಆಡಿಯೋ ಮೆಸೇಜನ್ನು ವಿನಯ್ ಮೊಬೈಲ್​ಗೆ ಬಂದಿತ್ತು. ಅದನ್ನು ವಿನಯ್‌ ಫಾರ್ವರ್ಡ್ ಮಾಡಿದ್ದ. ಇದರಿಂದ ಅವಮಾನಗೊಂಡ ಅಕ್ಷೇಂದ್ರ ಮತ್ತು ಸ್ನೇಹಿತರು ಸೇರಿ ವಿನಯ್‌ ದೇವಾಡಿಗನನ್ನು ಕೊಲೆ ಮಾಡಿದ್ದಾರೆ.

ಕುಚುಕು ಗೆಳೆಯರಿಂದಲೇ ಕೊಲೆಗೆ ಮುಹೂರ್ತ

ವಿನಯ್‌ ದೇವಾಡಿಗ ಜೊತೆ ಯಾವಗಲೂ ಕಾಣಿಸಿಕೊಳ್ಳುತ್ತಿದ್ದ ಈ ಮೂವರು ರಾತ್ರಿ ವೇಳೆ ಮನೆಗೆ ಬಂದಾಗ ಮನೆಯವರು ಯಾವುದೇ ಅನುಮಾನಗೊಂಡಿಲ್ಲ. ಪರಿಚಿತ ಮುಖವಾದ ಹಿನ್ನಲೆಯಲ್ಲಿ ಮನೆಯ ಒಳಗೆ ಬಿಟ್ಟಿದ್ದಾರೆ. ಇನ್ನು ಆಗಾಗ ಈ ಆರೋಪಿಗಳು ವಿನಯ್‌ ಮನೆಗೆ ಬಂದು ಹೋಗುತ್ತಿದ್ದರು. ಹೀಗಾಗಿ ಸ್ನೇಹಿತನನ್ನು ಮಾತನಾಡಿಸಲು ಬಂದಿರಬಹುದು ಎಂದು ಮನೆಯವರು ಒಳಗೆ ಬರಮಾಡಿಕೊಂಡಿದ್ದಾರೆ. ವಿನಯ್ ಪತ್ನಿ ಆರೋಪಿಗಳ ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ಗಮನಿಸಿಯೇ ಇರಲಿಲ್ಲ. ಮುಂಜಾನೆಯಿಂದ ವಿನಯ್‌ ದೇವಾಡಿಗ ಫೋನ್​​ನಲ್ಲಿ ಯಾರೊಂದಿಗೋ ವಾಗ್ವದ ನಡೆಸುತ್ತಿದ್ದನ್ನು ಗಮನಿಸಿದ್ದ ಮನೆಯವರು, ಮನೆಗೆ ಬಂದವರು ಯಾವ ಪೂರ್ವ ಯೋಜನೆಯೊಂದಿಗೆ ಬಂದಿದ್ದಾರೆ ಎನ್ನುವ ಅರಿವು ಇಲ್ಲವಾಗಿತ್ತು. ಕಣ್ಣ ಮುಚ್ಚಿ ತೆರೆಯುದರೊಳಗೆ ಏಕಾಏಕಿ ನಡೆದ ಕೃತ್ಯದಿಂದ ಮನೆ ಮಂದಿ ಹೌಹಾರಿದ್ದರು.

ಹತ್ಯೆಯಾದನ ಮೇಲೂ ಇತ್ತು ಕೊಲೆ ಕೇಸ್

ಇನ್ನು ವಿನಯ್‌ ದೇವಾಡಿಗ ಈ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನುವ ಮಾಹಿತಿ ಇದೆ. ಇದೇ ಪ್ರಕರಣದಲ್ಲಿ ವಿನಯ್‌ ದೇವಾಡಿಗನನ್ನು ಹತ್ಯೆ ಮಾಡಿದ ಸ್ನೇಹಿತನು ಕೂಡ ಇದ್ದ ಎನ್ನುವುದು ಪೊಲೀಸ್‌ ಮಾಹಿತಿ. ಅಪರಾಧಿ ಹಿನ್ನಲೆಯಿಂದ ಬಂದ ಕಾರಣ ಇಂತಹ ಸಣ್ಣ ವಿಷಯಕ್ಕೆ ತಲವಾರ ಎತ್ತಿದ್ದಾರೆ ಎನ್ನುವುದು ಪೊಲೀಸ್​ರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ

ಒಟ್ಟಾರೆ ಶಾಂತವಾಗಿದ್ದ ಉಡುಪಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಎಲ್ಲೋ ದೂರದ ಊರಿನಲ್ಲಿ ಕೇಳುತ್ತಿದ್ದ ಗ್ಯಾಂಗ್‌ ವಾರ್‌, ತಲವಾರು ಕಾಳಗದ ಸುದ್ದಿ ಉಡುಪಿ ನಗರದಲ್ಲಿ ಕೇಳಿ ಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.