ನಿಮ್ಮ ನಡಿಗೆ ಬೊಜ್ಜು ಕರಗಿಸಬಹುದು, ಆದರೆ ಉಡುಪಿಯಲ್ಲಿನ ಈ ನಡಿಗೆ ನಮ್ಮ ಮನ ಕರಗಿಸುತ್ತದೆ! ಏನಿದು ವಿಶಿಷ್ಟ ಅಭಿಯಾನ?

ಉಡುಪಿಯಲ್ಲಿ ಈ ಅಭಿಯಾನದಲ್ಲಿ ತೊಡಗಿಸಿ ಕೊಂಡವರು ಈ ಪುಣ್ಯ ಕೆಲಸದಿಂದ ಖುಷಿ ಪಡುತ್ತಿದ್ದಾರೆ. ಚಪ್ಪಲಿ ಕೊಟ್ಟವರು ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬಡವರ ಚರಣ ಕಮಲಗಳಿಗೆ ಹಿತಾನುಭವ ನೀಡುವ ನಡಿಗೆ ಅಭಿಯಾನ, ಜನಪ್ರಿಯಗೊಂಡಿದ್ದು ರಾಜ್ಯದ ಅನೇಕ ಕಡೆಗಳಲ್ಲಿ ಮುಂದುವರೆಯುವ ಸೂಚನೆಯೂ ಇದೆ.

ನಿಮ್ಮ ನಡಿಗೆ ಬೊಜ್ಜು ಕರಗಿಸಬಹುದು, ಆದರೆ ಉಡುಪಿಯಲ್ಲಿನ ಈ ನಡಿಗೆ ನಮ್ಮ ಮನ ಕರಗಿಸುತ್ತದೆ! ಏನಿದು ವಿಶಿಷ್ಟ ಅಭಿಯಾನ?
ಉಡುಪಿಯಲ್ಲಿನ ಈ ನಡಿಗೆ ನಮ್ಮ ಮನ ಕರಗಿಸುತ್ತದೆ! ಏನಿದು ವಿಶಿಷ್ಟ ಅಭಿಯಾನ?
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on: Dec 04, 2023 | 2:20 PM

ವಾಕಿಂಗ್ (Walking) ಕೆಲವರಿಗೆ ಹವ್ಯಾಸ ..ಇನ್ನು ಹಲವರಿಗೆ ಅನಿವಾರ್ಯ! ಸಂಪರ್ಕ ಸಾಧನಗಳನ್ನು ಬಳಸದೆ ಬರಿಗಾಲಲ್ಲಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇವತ್ತಿಗೂ ನಮ್ಮಲ್ಲಿದೆ. ನಮ್ಮ ದೇಶದಲ್ಲಿ 35 ಲಕ್ಷಕ್ಕೂ ಅಧಿಕ ಜನರಿಗೆ ಕಾಲಿಗೆ ಧರಿಸಲು ಚಪ್ಪಲಿ (slippers) ಇಲ್ವಂತೆ! ಬಡವರ ಪಾದಕ್ಕೆ ರಕ್ಷೆ ಕೊಡುವ ನಡಿಗೆ ಅಭಿಯಾನವೊಂದು (campaign) ಉಡುಪಿಯಲ್ಲಿ (udupi) ಗಮನ ಸೆಳೆದಿದೆ.

ನಡಿಗೆ ನಮ್ಮ ಬೊಜ್ಜು ಕರಗಿಸಬಹುದು. ಆದರೆ ಉಡುಪಿಯಲ್ಲಿ ನಡೆಯುತ್ತಿರುವ ನಡಿಗೆ ನಮ್ಮ ಮನ ಕರಗಿಸುತ್ತದೆ. ಇದೊಂದು ವಿಶಿಷ್ಟ ಅಭಿಯಾನ! ನಾವು ಬಳಸಿ ಎಸೆಯಲು ಇಟ್ಟ ಚಪ್ಪಲಿಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ಸಂಗ್ರಹಿಸುತ್ತಿದ್ದಾರೆ. ನಿಗದಿಪಡಿಸಿದ ಮೂರು ದಿನಗಳಲ್ಲಿ ಉಡುಪಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಜನರು ಸುಮಾರು 10,000 ಜೋಡಿ ಚಪ್ಪಲಿ ಕೊಟ್ಟು ಹೋಗಿದ್ದಾರೆ… ಅರೆ ಬಳಸಿದ ಚಪ್ಪಲಿ ಇಟ್ಕೊಂಡು ಏನ್ ಮಾಡ್ತಾರೆ ಅಂದ್ರಾ…. ಚಪ್ಪಲಿ ಇಲ್ಲದೆ ಕಾಲು ಸವಿಯುತ್ತಿರುವ ಸಾವಿರಾರು ಬಡವರಿಗೆ ಸಹಾಯ ಮಾಡುವ ನಡಿಗೆ ಅಭಿಯಾನದ ರಹಸ್ಯ ಏನು? ಇಲ್ಲಿ ನೋಡಿ…

ಇವೆಂಟ್ ಪ್ಲಾನರ್ ಮತ್ತು ಆಂಕರ್ ಆಗಿರುವ ಸಾಮಾಜಿಕ ಕಾರ್ಯಕರ್ತ ಅವಿನಾಶ್ ಕಾಮತ್ ಈ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಮುಂಬೈನ ಗ್ರೀನ್ ಸೋಲ್ ಫೌಂಡೇಶನ್ ಈ ಅಭಿಯಾನಕ್ಕೆ ಸಹಾಯ ಮಾಡಿದೆ. ಬಳಸಿದ ಕ್ರೀಡಾ ಪಾದರಕ್ಷೆಯಿಂದ ಹೊಸ ಪಾದರಕ್ಷೆಯನ್ನು ತಯಾರು ಮಾಡಿ ಬಡ ಮಕ್ಕಳಿಗೆ ದಾನ ಮಾಡುತ್ತಿದ್ದಾರೆ.

Also read:  ಬಂಟ್ವಾಳ ಅಕ್ಷಯ ಪಾತ್ರ ಪ್ರತಿಷ್ಠಾನದ ಹೈಟೆಕ್ ಅಡುಗೆಮನೆಯು ದಿನಕ್ಕೆ 15 ಸಾವಿರ ಊಟ ಸಿದ್ದಪಡಿಸುತ್ತಿದೆ

ಉಡುಪಿಯಲ್ಲಿ ಸಂಗ್ರಹಿಸಿದ 10 ಸಾವಿರ ಜೋಡಿ ಚಪ್ಪಲಿಗಳನ್ನು ಮುಂಬೈಯ ಸಂಸ್ಥೆಗೆ ರವಾನೆ ಮಾಡಲಾಗುತ್ತದೆ. ಅಲ್ಲಿ ಹೊಸ ಪಾದರಕ್ಷೆಯಾಗಿ ಮಾರ್ಪಾಟು ಮಾಡಲಾಗುತ್ತದೆ. ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ಪಾದರಕ್ಷೆ ಸಂಗ್ರಹಿಸಲಾಗುತ್ತಿದೆ. ಮನೆ ಶುಚಿತ್ವದ ಜೊತೆ ಮನಮೆಚ್ಚುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಅಂತ ಉಡುಪಿ ಜನಕ್ಕೆ ಕರೆ ನೀಡಲಾಗಿದೆ.

ಕಸದ ಬುಟ್ಟಿಗೆ ಎಸೆದು ಪರಿಸರ ಕಲುಷಿತ ಆಗೋದನ್ನು ತಪ್ಪಿಸಲು ಇಂತಹ ಅಭಿಯಾನ ದೇಶದ, ರಾಜ್ಯದ ಅಲ್ಲಲ್ಲಿ ನಡೆದಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಅವರು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನಕ್ಕೆ ಹೇಳಿದ್ದಾರೆ!

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್