ಮಹಿಳಾ ಹಾಸ್ಟೆಲ್​ನಲ್ಲಿ ದ್ವೇಷ ಹರಡುವ ಬರಹ: ಮತ್ತೊಮ್ಮೆ ಬರೆಯಿಸಿದಾಗ ಫಾತೀಮಾಳ ಕೃತ್ಯ ಬಯಲು

ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ಸಮುದಾಯದ ನಡುವೆ ದ್ವೇಷ ಹರಡುವ ರೀತಿ ಬರಹ ಬರೆದ ಆರೋಪದ ಮೇಲೆ ಕೇರಳ ಮೂಲದ ಫಾತಿಮಾ ಶಬ್ದಾ ಎಂಬ ವಿದ್ಯಾರ್ಥಿನಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೈಬರಹ ತಜ್ಞರ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ನ್ಯಾಯಾಲಯವು ಆಕೆಗೆ ಜಾಮೀನು ಮಂಜೂರು ಮಾಡಿದೆ.

ಮಹಿಳಾ ಹಾಸ್ಟೆಲ್​ನಲ್ಲಿ ದ್ವೇಷ ಹರಡುವ ಬರಹ: ಮತ್ತೊಮ್ಮೆ ಬರೆಯಿಸಿದಾಗ ಫಾತೀಮಾಳ ಕೃತ್ಯ ಬಯಲು
ದ್ವೇಷ ಹರಡುವ ಬರಹ
Updated By: ವಿವೇಕ ಬಿರಾದಾರ

Updated on: Jul 18, 2025 | 3:12 PM

ಉಡುಪಿ, ಜುಲೈ 18: ನಿಟ್ಟೆ ಕಾಲೇಜಿನ (Nitte College) ಮಹಿಳಾ ವಸತಿ ನಿಲಯದ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ ಬರಹ ಬರೆದ (Writing Communal Slur on Wall) ವಿದ್ಯಾರ್ಥಿನಿಯನ್ನು ಕಾರ್ಕಳ (Karkala) ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ (Kerala) ಮೂಲದ ಆರೋಪಿ ಫಾತಿಮಾ ಶಬ್ದಾ (21) ಬಂಧಿತ ವಿದ್ಯಾರ್ಥಿನಿ.

ಮೇ7 ರಂದು ಸಂಜೆ 7 ಗಂಟೆಗೆ ವಸತಿ ನಿಲಯದ ಮೊದಲ ಮಹಡಿಯ ಶೌಚಾಲಯದ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಪ್ರಚೋದನಕಾರಿಯಾಗಿ ಬರಹ ಬರೆಯಲಾಗಿತ್ತು. ವಸತಿ ನಿಲಯದ ವಿದ್ಯಾರ್ಥಿನಿಯರೇ ಈ ಕೃತ್ಯ ಎಸಗಿದ್ದಾರೆಂದು ನಂಬಲಾಗಿತ್ತು.

ಈ ಬಗ್ಗೆ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಮ್ಯಾನೇಜರ್​ ಕಾರ್ಕಳ ಪೊಲೀಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ, ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರು ಕೈಬರಹ ತಜ್ಞರ ಸಹಾಯದಿಂದ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಗಳ ಅಸೈನ್ಮೆಂಟ್ಸ್ ಹಾಗೂ ಮತ್ತೊಮ್ಮೆ ಗೋಡೆ ಬರೆಸುವ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದರು. ಕೇರಳ ಕಾಸರಗೋಡು ಜಿಲ್ಲೆಯ ನಿವಾಸಿ ಫಾತಿಮಾ ಶಬ್ದಾಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಸದ್ಯ ಆರೋಪಿ ಫಾತಿಮಾ ಶಬ್ದಾಗೆ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ
ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
ಕೆಂಪೇಗೌಡ ಏರ್​​​ಪೋರ್ಟ್​ಗೆ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್​ ಬೆದರಿಕೆ
ಅತ್ಯಾಚಾರ ಪ್ರಕರಣ: ಮೈಸೂರಿನ ಖಾಸಗಿ ವಸತಿ ಶಾಲೆಗೆ ಬಾಂಬ್​ ಬೆದರಿಕೆ

ಇದನ್ನೂ ಓದಿ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ

ಕಾಲೇಜು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ವಿದ್ಯಾರ್ಥಿನಿ

ಮಂಗಳೂರು: ಸೆಮಿನಾರ್​ ತಪ್ಪಿಸಲು ಓರ್ವ ವಿದ್ಯಾರ್ಥಿನಿ ತಾನು ವ್ಯಾಸಂಗ ಮಾಡುತ್ತಿದ್ದ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್​ ಇದೆ ಎಂದು ಹುಸಿ ಬೆದರಿಕೆ ಕರೆ ಮಾಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದರು. ಡಾ.ಚಲಸಾನಿ ಮೋನಿಕಾ ಚೌಧರಿ ಜೂ.4 ರಂದು ಸೆಮಿನಾರ್ ಕೊಡಬೇಕಿತ್ತು.

ಆದರೆ, ಈ ಸಮಿನಾರ್​ನಿಂದ ತಪ್ಪಿಸಿಕೊಳ್ಳಲು ಮೋನಿಕಾ ಜೂನ್ 4ರ ಬೆಳಗ್ಗೆ 8.15ಕ್ಕೆ ತಾನು ಓದುತ್ತಿರುವ ಕಣಚೂರು ಮೆಡಿಕಲ್ ಕಾಲೇಜಿನ ಹೆರಿಗೆ ವಾರ್ಡ್​ನ ಸ್ಥಿರ ದೂರವಾಣಿಗೆ ಕರೆ ಮಾಡಿ, “ಬೆಳಗ್ಗೆ 11ಕ್ಕೆ ಕಣಚೂರು ಆಸ್ಪತ್ರೆ ಸ್ಫೋಟಿಸುವುದಾಗಿ” ಬೆದರಿಕೆ ಹಾಕಿದ್ದಳು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Fri, 18 July 25