AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ

ಉತ್ತರ ಕನ್ನಡದ ಭಟ್ಕಳ ಪಟ್ಟಣಕ್ಕೆ ಬಾಂಬ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದಿತ್ತು. ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಆರೋಪಿಯು ಮೈಸೂರು, ಬಳ್ಳಾರಿ, ಕೇರಳದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದನು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ
ಬಾಂಬ್​​ ನಿಷ್ಕ್ರಿಯ ದಳದಿಂದ ಶೋಧ
ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ|

Updated on:Jul 13, 2025 | 5:12 PM

Share

ಕಾರವಾರ, ಜುಲೈ 13: ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ (Bhatkal) ಪಟ್ಟಣವನ್ನು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದ ಪ್ರಕರಣದ ತನಿಖೆಯನ್ನು ಭಟ್ಕಳ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಭಟ್ಕಳ್​ ಸ್ಫೋಟಿಸುವುದಾಗಿ ಇ-ಮೇಲ್​ ಸಂದೇಶ ಕಳುಹಿಸಿದ್ದ ಆರೋಪಿ ಮೈಸೂರಿನಲ್ಲಿ ಅಡಗಿಕೊಂಡಿದ್ದಾನೆ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ಮೈಸೂರು, ಬಳ್ಳಾರಿ, ಕೇರಳ ಸೇರಿದಂತೆ ವಿವಿಧಡೆ ಬಾಂಬ್ ಸ್ಫೋಟಿಸುವುದಾಗಿ ಆರೋಪಿ, ಈ ಹಿಂದೆ ಬೆದರಿಕೆ ಸಂದೇಶ ಕಳುಹಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿ ಅಡಗಿರುವ ಸ್ಥಳ ಗೊತ್ತಾಗಿದೆ.

ಇದನ್ನೂ ಓದಿ: ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ಇದನ್ನೂ ಓದಿ
Image
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
Image
ಕೆಂಪೇಗೌಡ ಏರ್​​​ಪೋರ್ಟ್​ಗೆ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್​ ಬೆದರಿಕೆ
Image
ಅತ್ಯಾಚಾರ ಪ್ರಕರಣ: ಮೈಸೂರಿನ ಖಾಸಗಿ ವಸತಿ ಶಾಲೆಗೆ ಬಾಂಬ್​ ಬೆದರಿಕೆ
Image
ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್

ಇನ್ನು, ಆರೋಪಿ ಇ-ಮೇಲ್​ ಸಂದೇಶವನ್ನು ತಮಿಳುನಾಡಿನ ಕಣ್ಣನ್ ಎಂಬುವರ ಮೊಬೈಲ್​ನಿಂದ ಕಳುಹಿಸಿದ್ದಾನೆ. ಹಾಗಿದ್ದರೆ ಆರೋಪಿಗೆ ಕಣ್ಣನ್​ ಅವರ ಮೊಬೈಲ್​ ಹೇಗೆ ಸಿಕ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪೊಲೀಸರು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸೋಮವಾರ (ಜು.14) ಆರೋಪಿಯನ್ನು ವಶಕ್ಕೆ ಪಡೆದು ಮೈಸೂರಿನಿಂದ ಕಾರವಾರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ್ ಪ್ರಕರಣದ ತನಿಖಾ ನೇತೃತ್ವ ವಹಿಸಿದ್ದಾರೆ.

ಆರೋಪಿ ಜುಲೈ 10 ರ ಬೆಳಗ್ಗೆ ಎರಡು ಬಾರಿ ಇ-ಮೇಲ್​ ಸಂದೇಶವನ್ನು ಕಳುಹಿಸಿದ್ದನು. ಮೊದಲ ಇ-ಮೇಲ್​ ಸಂದೇಶದಲ್ಲಿ ‘ವಿ ವಿಲ್​ ಪ್ಲಾಂಟ್​ ಬಾಂಬ್​ ಇನ್​ ಭಟ್ಕಳ್​ ಟೌನ್​’ ಎಂದು ಸಂದೇಶ ಕಳುಹಿಸಿದ್ದನು. ನಂತರ ‘ಆಲ್​ ದ ಬಾಂಬ್​ ವಿಲ್​ ಬ್ಲಾಸ್ಟ್​ ಇನ್​​ 24 ಹಾರ್ಸ್​’ ಎಂದು ಸಂದೇಶ ಕಳುಹಿಸಿದ್ದನು. ಈ ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪಿಎಸ್​ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Sun, 13 July 25